ಸರಸಿಜಾಲಯವೆಂಬುವ ಸೊಗಸಿನ [ಶಯನಿಸು] ಪ.
ವರರತ್ನ ಮಂಟಪದೊಳು ಉರಗಪತಿಯಂತು ವರತಲ್ಪವಾಗಿರಲು
ಸಿರಿಯೊಡನೆ ನೀಂ ಶಯನಿಸು ಅ.ಪ
ತಪನ ಶಶಿಗಳೆಂಬುವ ಅಪ್ರತಿಮ [ವೆ
ಚಪಲಾಕ್ಷಿ ಶ್ರೀದೇವಿಯುಪಚಾರದಿಂ ನಲಿದು
ಅಪರಿಮಿದಾನಂದದಿಂ ಶಯನಿಸು 1
ತುಂಬುರು ನಾರದರೆಂಬುವ ವಂದಿಮಾಗಧರ
ತಂಬೂರಿ ಸ್ವರಗಾನಮಂ | ಸಂಭ್ರಮದಿ ಕೇಳುತ್ತ
ನಲಿಯುತ [ಶಯನಿಸು] 2
ಗರುಡಪವನಜರೆಂಬುವ ನಿನ್ನಂಘ್ರಿ | ಸರಸಿಜವ
ಸೇವಿಸುವ ವರಭಕ್ತರು ಬಂದು | ಕರಮುಗಿದು ನಿಂದಿರಲು
ನಲಮಂ[ಶಯನಿಸು] 3
ವರಶೇಷಗಿರಿ ನಿಲಯನೇ ಜಯಜಯತು | ವರದ
ನಾರಾಯಣನೇ | ಕರುಣಾಭರಣ ಲಕ್ಷ್ಮೀನರಹರಿಯೆ
ನಿ | ನ್ನರಸಿಯೊಡನೆ ನೀಂ ಶಯನಿಸು 5