ಭಜಿಸುವೆನು ನಾನಿನ್ನ ಭಕ್ತಾಧೀನ
ಅಜಹರನುತ ಅಗಣಿತಚರಿತ ಹರಿ ಪ
ಅಂದು ಮುನಿಸತಿ ಶಾಪದಿಂದ ಶಿಲೆಯಾಗಿರೆ ಛಂದದಿ
ಚರಣಾರವಿಂದ ಸ್ಪರ್ಶವಾಗಲು
ಕುಂದು ಪರಿಹಾರವಾಗಿ ಸುಂದರ ಮಣಿಯಾದಳೆಂದು
ನಿಮ್ಮಯ ಪಾದದ್ವಂದ್ವ ಬಿಡದಲೆ ನಾ 1
ಕಂದ ಕರೆಯಲು ಶ್ರೀ ಗೋವಿಂದ ಘನ ಸ್ತಂಭದೊಳ್
ಬಂದು ದೈತ್ಯನ ಕೊಂದ ಇಂದಿರಾರಮಣ
ಕಂದರ್ಪ ಜನಕ ಮುಚುಕುಂದ ವರ ಕೃಷ್ಣಾ
ಮಂದರಧರ ಸಲಹೆಂದು ಅನವರತ 2
ದೃಢ ಧ್ರುವರಾಯನ ಬಿಡದೆ ಮಲತಾಯಿ ತಾ
ಅಡವಿಗೆ ನೂಕಿಸಲು ಕಡು ಮುದದಿ
ಕಡಲಶಯನ ಜಗದೊಡಿಯನೆ ಕಾಯ್ದೆ
ಗರುಡವಾಹನನೊಡನೆ ನುಡಿಯಯ್ಯ 3
ದುರುಳ ರಾವಣನ ದಶಶಿರಗಳು ಖಂಡಿಸಿ
ಶರಣೆಂದು ವಿಭೀಷಣ ಗೇ ಸ್ಥಿರದಿ ಪಟ್ಟವನಿತ್ತು
ಪರಮಪುರುಷ ಶಿರಿವರ ನರಹರಿ ಶೌರಿ
ಮೊರೆ ಹೊಕ್ಕೆ ರಕ್ಷಿಸೋ ಮುರಹರ ಕರುಣಾಂಬುಧೆ 4
ಕರಿಸರೋವರದಿ ಮಕರಿಯ ಬಾಧೆಗೆ ಸಿಕ್ಕು
ಹರಿನೀನೆ ಗತಿಯೆಂದು ಸ್ಮರಿಸುತಲಿರಲು
ಭರದಿಪೋಗಿ ಕಷ್ಟಪರಿಹರಿಸಿ ಪೊರೆದಿ
ಶ್ರೀಧರವರÀ ಹೆನ್ನೆಯಪುರ ಲಕ್ಷ್ಮೀನರಸಿಂಗ 5