ಮಾಮವ ಮೃಗರಿಪು ಗಿರಿರಮಣ-ಮಹಿತ ಗುಣಾಭರಣಪ
ಕಾಮ ಕಲುಷಭವ ಭೀಮಜಲಧಿಗತ ತಾಮಸಾತ್ಮಕಂ
ದುರಿತಚರಿತ ಮಹಿ ಮಾಮ ಅ.ಪ.
ನಿಟಿಲನಯನ ಮಕುಟ ಲಸಿತ ವದನ ನೀರಾ-ಪೂರಾ
ನೀಲ ಜಲದ ಮದಹೇಳನ ಸುಭಗಶರೀರ
ಕುಂದ ಕುಟ್ಮಲ
ಸಮಾನ ಶುಭರದನ 1
ವದನ ವಿಜಿತ ಶರದಮೃತಕಿರಣ ಸುಕುಮಾರಾಕಾರಾ
ವತ್ಸಲ ಸಿತ ಶುಭಲಕ್ಷಣ ಲಕ್ಷ್ಮೀಧಾರಾ
ಸದಯ ಹೃದಯ ಪರಿತೋಷಿತ ನತಜನ ಸಾಮಗಾನರತ
ಶುಭ ಚರಿತ||ಮಾಮವ|| 2
ಕಮಲ ಸಂತತಾರ್ತಾದರ ಚಕ್ರ ವಿಬುಧಗೇಯ
ಪ್ರಕಟ ಮಹಿಮ ಮಾಂಡವ್ಯ ಮನೋರಥ ಪಾರಿಜಾತ
ದುರಿತಾರಿ ವರದನುತ ||ಮಾಮವ|| 3