ಬರುವ ಸಂಭ್ರಮವನ್ನು ನೋಡಿ
ಪರಮ ಕರುಣಾಕರೆಯ ಪಾಡಿ ಪ.
ಹೆದ್ದಾರಿ ಮಧ್ಯದಿ ಸ್ವಾರಿ ಬರುತಾ
ದಾರಿದ್ರ್ಯ ದೈನ್ಯವೋಡಿಸುತಾ
ಸ್ವರ್ಣಧಾರೆಯನು ಸರ್ವತ್ರ ತರುತಾ
ಸಾರಿಸಾರಿಗೆ ವರವ ಕೊಡುತ 1
ಶುಕ್ಲನಭಮಾಸಭೃಗುವಾಸರದಲಿ
ಶುಭಲಗ್ನಸಂಜೆ ವೇಳ್ಯದಲಿ
ವಿಭವದಲಿಪೂಜಿಸುವುದೆಂದು
ವಲ್ಲಭೆಗೆಂದ ವಚನ ತಿಳಿದಿಂದು 2
ಲಕ್ಷ್ಮೀದೇವಿಯನು
ತನ್ನ ದಾಸರನು
ಮೀಸಲಳಿಯದ ಸೌಖ್ಯಗಳನು
ಮೆರೆವುದನು 3