ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾ ನಿಮ್ಮ ದಾಸರ ದಾಸಈ ನರರ ಪಾಡೇನೆರಡು ದಿನದ ಸಂಸಾರ ಪ ಕರೆಸು ಕಂಬದಿ ಎಂದು ವಾದಿಸಿದವ ಕೆಟ್ಟಪರಹೆಣ್ಣಿಗಾಸೆ ಪಟ್ಟು ಕೀಚಕ ಕೆಟ್ಟಬರಿದೆ ದ್ರೌಪದಿಗಾಗಿ ದುರ್ಯೋಧನ ಕೆಟ್ಟಉರಿ ಹಸ್ತವ ಬೇಡಿ ಭಸ್ಮಾಸುರ ಕೆಟ್ಟ 1 ಆಡಿದ ಮಾತಿಗೆ ಬಲಿ ನೀಡಲಾಗಿ ಕೆಟ್ಟಮಾಡುವ ದಾನ ತಡೆದು ಶುಕ್ರನು ಕೆಟ್ಟಕೂಡಿದ ಶಿರವರಿದು ರೂಢಿಗೀಶ್ವರ ಕೆಟ್ಟಬೇಡಲು ಗುಂಡಿಗೆ ಸೀಳಿ ಕರ್ಣನು ಕೆಟ್ಟ 2 ಎರಡೆಂಟಾಡೆನೆಂದು ಹರಿಶ್ಚಂದ್ರ ಕೆಟ್ಟನೆರೆ ಪಗಡೆಯನಾಡಿ ಧರ್ಮಜನು ಕೆಟ್ಟಹರಿದು ಬಾಣವ ತೊಟ್ಟು ದಶರಥನು ಕೆಟ್ಟಹರಿಯ ಮೊರೆ ಸೇರಿದರ್ಗೆ ಸ್ಥಿರ ಪಟ್ಟ 3 ಹಮ್ಮನಾಡಿ ಮುನ್ನ ಬ್ರಹ್ಮ ತಾ ಕೆಟ್ಟಅಮ್ಮನ ನುಡಿ ಕೇಳದೆ ಹನುಮಂತ ಕೆಟ್ಟತಮ್ಮನ ನುಡಿ ಕೇಳದೆ ರಾವಣನು ಕೆಟ್ಟನಿಮ್ಮ ನೋಯಿಸಿದ ಮೈರಾವಣನು ಕೆಟ್ಟ 4 ಭಾಗೀರಥಿಯ ತಂದೆ ಬಹುದೈತ್ಯರ ಕೊಂದೆಭೋಗಿಶಯನ ಶ್ರೀ ಲಕ್ಷ್ಮೀಕಾಂತನೆಭಾಗವತ ಪ್ರಿಯ ಭವಭಯಹರಕಾಗಿನೆಲೆಯಾದಿಕೇಶವಗೆ ನಮೊ ನಮೋ 5
--------------
ಕನಕದಾಸ