ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾ ನಿಮ್ಮ ದಾಸರ ದಾಸಈ ನರರ ಪಾಡೇನೆರಡು ದಿನದ ಸಂಸಾರ ಪ ಕರೆಸು ಕಂಬದಿ ಎಂದು ವಾದಿಸಿದವ ಕೆಟ್ಟಪರಹೆಣ್ಣಿಗಾಸೆ ಪಟ್ಟು ಕೀಚಕ ಕೆಟ್ಟಬರಿದೆ ದ್ರೌಪದಿಗಾಗಿ ದುರ್ಯೋಧನ ಕೆಟ್ಟಉರಿ ಹಸ್ತವ ಬೇಡಿ ಭಸ್ಮಾಸುರ ಕೆಟ್ಟ 1 ಆಡಿದ ಮಾತಿಗೆ ಬಲಿ ನೀಡಲಾಗಿ ಕೆಟ್ಟಮಾಡುವ ದಾನ ತಡೆದು ಶುಕ್ರನು ಕೆಟ್ಟಕೂಡಿದ ಶಿರವರಿದು ರೂಢಿಗೀಶ್ವರ ಕೆಟ್ಟಬೇಡಲು ಗುಂಡಿಗೆ ಸೀಳಿ ಕರ್ಣನು ಕೆಟ್ಟ 2 ಎರಡೆಂಟಾಡೆನೆಂದು ಹರಿಶ್ಚಂದ್ರ ಕೆಟ್ಟನೆರೆ ಪಗಡೆಯನಾಡಿ ಧರ್ಮಜನು ಕೆಟ್ಟಹರಿದು ಬಾಣವ ತೊಟ್ಟು ದಶರಥನು ಕೆಟ್ಟಹರಿಯ ಮೊರೆ ಸೇರಿದರ್ಗೆ ಸ್ಥಿರ ಪಟ್ಟ 3 ಹಮ್ಮನಾಡಿ ಮುನ್ನ ಬ್ರಹ್ಮ ತಾ ಕೆಟ್ಟಅಮ್ಮನ ನುಡಿ ಕೇಳದೆ ಹನುಮಂತ ಕೆಟ್ಟತಮ್ಮನ ನುಡಿ ಕೇಳದೆ ರಾವಣನು ಕೆಟ್ಟನಿಮ್ಮ ನೋಯಿಸಿದ ಮೈರಾವಣನು ಕೆಟ್ಟ 4 ಭಾಗೀರಥಿಯ ತಂದೆ ಬಹುದೈತ್ಯರ ಕೊಂದೆಭೋಗಿಶಯನ ಶ್ರೀ ಲಕ್ಷ್ಮೀಕಾಂತನೆಭಾಗವತ ಪ್ರಿಯ ಭವಭಯಹರಕಾಗಿನೆಲೆಯಾದಿಕೇಶವಗೆ ನಮೊ ನಮೋ 5
--------------
ಕನಕದಾಸ
ಶುಕಮುನಿ ಕರ್ಣಾಧಾರನ ಕೂಡಿ ಅನುಗತ ಭವಸಿಂಧು ಭಯವ ದೂಡಿ ಪ. ಅಂತಪಾರವೆಂದಿಗಿಲ್ಲವು ನಾನಾ ಭ್ರಾಂತಿ ಸುಳಿಗಳು ತುಂಬಿರುವವು ಚಿಂತಾಪರಾಕ್ರಾಂತಿಯಳವು ಪೋಕ ತಿಮಿರ ಬಾಧೆ ಬಹಳವು ಅಂತರಂಗದಿ ಲಕ್ಷ್ಮೀಕಾಂತನೆಂಬ ನಾವೆ ಯಂತಾದರು ತಂದು ಪಂತರಗೊಳಿಸುವ 1 ಸ್ವರ್ಗಾದಿ ಸುಖವೆಂದು ದ್ವೀಪವು ನಾನಾ ಕರ್ಮ ಕಲಾಪವು ನಿರ್ಗಮಗೊಳುವ ಸಂತಾಪವು ವೈರಿ ಜನಿತ ಮತಿಲೋಪವು ಇಂತು ದೀರ್ಘವಾದ ದುಃಖ ವರ್ಗ ತಪ್ಪಿಸಿ ಶ್ರೀ ಭೂ ದುರ್ಗಾವರ ಸಂಸರ್ಗವಿತ್ತು ಕಾವ 2 ತಾನೆ ಕರ್ತುವೆಂದು ಪೇಳದೆ ಮೋಹ ಧಾನೀ ಕೂಪದ ಮಧ್ಯ ಬೀಳದೆ ಹೀನ ಕರ್ಮಗಳನ್ನು ಬೆಳಸದೆ ಸವ ಮಾನ ಜನ ವಿರೋಧ ಮಾಡದೆ ದೀನಬಂಧು ಸರ್ವದಾನವಾರಿ ಲಕ್ಷ್ಮಿ ಪ್ರಾಣನಾಯಕ ವೆಂಕಟೇಶನ ನೆನೆಯಿಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು ಭೂ -ರಂಗದೊಳಗೆಲ್ಲ ಪಾಂಡುರಂಗ ಪರದೈವವೆಂದು ಪ.ಹರಿಯು ಮುಡಿದ ಹೂವ ಹರಿವಾಣದೊಳಗಿಟ್ಟುಕೊಂಡುಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಳಿಕ್ಕುತ 1ಒಡಲ ಜಾಗಟೆಯ ಮಾಡಿ ಮಿಡಿವಗುಣಿ ನಾಲಗೆಯ ಮಾಡಿಒಡನೆ ಢಣ ಢಣ ಢಣ ಢಣ ಎಂದುಕುಣಿದು ಚಪ್ಪಳಿಕ್ಕುತ 2ಇಂತು ಸಕಲ ಜಗಕೆ ಲಕ್ಷ್ಮೀಕಾಂತನೆ ಪರದೈವವೆಂದುಕಂತುಪಿತ ಪುರಂದರವಿಠಲ ಪರದೈವವೆಂದು 3
--------------
ಪುರಂದರದಾಸರು