(ಇ) ಗುರುಸ್ತುತಿಗಳು
ಅತಿಮಧುರವದನ ಪಂಕೇಜ ದ್ವಿಜರಾಜ ಶ್ರೀ
ಪತಿ ಪದಾಂಬುಜ ಮಧುಕರವಾದಿ ವಾದಿರಾಜಾ ಪ
ಸಾರತರವಹ ವೇದಶಾಸ್ತ್ರದರ್ಥಗಳ [ನೆಲ್ಲ
ಸೋರಿ] ಕ್ಕಿ ತದರ್ಥವನೆಲ್ಲ ಕೆಡಿಸೀ
ಧಾರುಣಿಯ ಜನರಮತಿಗುಂದಿಸುವ ಖಳ ಮತ್ತ
ವಾರಣ ಮೃಗೇಂದ್ರ ಭಳಿರೇ ವಾದಿರಾಜಾ 1
[ಚರಿತ]ವರ್ಣ ಧರ್ಮಾಶ್ರಯಗಳೆನಿಪ ಯೀ
ಪರಿ ತಾರತಮ್ಯವನೆಲ್ಲ ಕೆಡಿಸೀ
ಶೂನ್ಯ ಜನನಿಕರ
ನಿರು[ತಪಾಲಿಪ] ಭಾಪುರೇ ವಾದಿರಾಜಾ 2
ನಿಖಿಳ ಜಗ
ದೊಡೆಯ ವೈಕುಂಠ ಲಕ್ಷ್ಮೀ[ಕೇಶವ]
ಉಡುಪಿಯಧಿಪತಿಕೃಷ್ಣನಂಘ್ರಿ ಪಂಕೇರುಹವ
ವಿಡಿದೆ ದೃಢವಾಗಿ ಮಝರೇ ವಾದಿರಾಜಾ 3