ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಶ್ವಧಾಟೀ ಕೃಷ್ಣನೆ ಎಮ್ಮನು ಪ ಕಾಯ ನಂಬಿದೆ ನಿನ್ನನುಅ.ಪ ಸಾರ ಮಾರ್ಗದ ದಾರಿ ಕಾಣದೆ ಸಾರಿ ಬೇಡುವೆ ನಿನ್ನನು ನೀರಜಾಕ್ಷನೆ ಘೋರಭವದಿ ಪಾರುಗಾಣಿಸೊ ಎಮ್ಮನು 1 ದುಷ್ಟನಾಶಕ ಶಿಷ್ಟಪಾಲಕ ಶ್ರೇಷ್ಠಮೂರುತಿದೇವನೆ ಕಷ್ಟಓಡಿಸಿ ಇಷ್ಟಪಾಲಿಸೊ ಅಷ್ಟಕರ್ತನೆ ಬೇಗನೆ 2 ವೇದಗೋಚರ ಯಾದವೇಂದ್ರ ಸುಧಾಮ ರಕ್ಷಕ ಕೃಷ್ಣನೆ ನಂದಗೋಪ ಸುಕಂದ ನಾಮಕ ರಾಧೆವಂದಿತ ಚರಣನೆ 3 ಗೋಪಿ ಮೋಹಕ ಪಾಪಮೋಚಕ ತಾಪಸ ಪ್ರಿಯರೂಪನೆ ಕೋಪಮಾಡದೆ ಪಾಪಿ ಎನಗೆ ರೂಪ ತೋರಿಸೊ ಬೇಗನೆ 4 ದೋಷದೂರ ವಿನಾಶವರ್ಜಿತ ಕೇಶಿ ಸೂದನ ಶೂರನೆ ಕ್ಲೇಶ ಓಡಿಸಿ ದಾಸನೆನಿಸೊ ಬಿಂಬನೆ 5 ವೇಣುನಾದ ವಿನೋದ ಸುಂದರ ಜಾಣೆ ರುಕ್ಮಿಣಿ ಅರಸನೆ ಸಾನುರಾಗದಿ ಜ್ಞಾನದಂಬಕ ದಾನ ಮಾಡೊ ದಾನಿಯೆ6 ಶ್ಯಾಮಸುಂದರ ಮಾಮನೋಹರ ಭೀಮ ವಿಕ್ರಮ ಭೂತಿಯೆ ಸಾಮಸನ್ನುತ ರಾಮಚಂದಿರ ಕಾಮಜನಕನೆ ಕಲ್ಕಿಯೆ 7 ಸಿಂಧು ಶಯನನೇ ಬಂಧಮೋಚಕ ಮಂದರಾದ್ರಿಧಾರನೇ ಬಿಂಧುಮಾಧವ ಮಂದಹಾಸದ ಸುಂದರಾಂಗ ರೂಪನೆ8 ಲಕ್ಷ್ಮಣಾಗ್ರಜ ಪಕ್ಷಿವಾಹನ ಅಕ್ಷರೇಡ್ಯ ಸುಲಕ್ಷಣ ಮೋಕ್ಷದಾಯಕ ಲಕ್ಷ್ಮಿರಮಣನೆ ರಕ್ಷಿಸಯ್ಯ ಸರ್ವದಾ 9 ವಾರಿಜನೇತ್ರ ವಾರಿಜನಾಭ ವಾರಿಜಾಸನ ವಂದ್ಯನೆ ಸೂರಿ ಶೇಖರ ಮೇರೆಗಾಣದ ಮಹಿಮನೆ 10 ಸರ್ವವ್ಯಾಪ್ತನೆ ಸರ್ವವಂದ್ಯನೆ ಸರ್ವವಾಚ್ಯದ ಈಶನೆ 11 ಪೂರ್ಣಗುಣನೆ ಪೂರ್ಣಶಕ್ತನೆ ಪೂರ್ಣಭೋಧರ ಪ್ರಿಯನೆ ಪೂರ್ಣರೂಪನೆ ಪೂರ್ಣಪೂರ್ಣನೆ ಪೂರ್ಣ ತಂತ್ರ ಸ್ವತಂತ್ರನೆ12 ಬಾಲ ಲೀಲ ಕಲಾವಿಭೂಷಿತ ಲೀಲ ಮಾನುಷ ವಿಗ್ರಹ ಲೋಲ ಸುಂದರ ಜಾಲ ಮೋಹಕ ಕಾಲನಾಮಕ ಪುರುಷ 13 ಕಾಳಿಮರ್ಧನ ಕಾಳಿವರದ ಕಾಳಿಯನುಜ ಕೇವಲ ಮೌಳಿಯಿಂದಲಿ ಕಾಲಿಗೆರಗುವೆ ಪಾಲಿಸಯ್ಯ ಈಗಲೇ 14 ಭಂಜನ ನಿಕಟ ಸರ್ವರ ಕುಟಿಲ ವರ್ಜಿತ ಶ್ರೇಷ್ಟನೆ ನಕ್ರತರಿದ ಚಕ್ರಪಾಣಿಯೆ ಫಕ್ಕನೊಲಿಯೊ ಶುಕ್ರನೇ 15 ವಿಪ್ರಸತಿಯರ ಕ್ಷಿಪ್ರದಿಂದಲಿ ತಪ್ಪದೆ ಪೊರೆದಾತನೆ ತಪ್ಪುನೋಡದೆ ಒಪ್ಪಿಕೊಂಡು ಅಪ್ಪ ಒಲಿಯೊ ವೆಂಕಟ 16 ಪಾಂಡವ ಪ್ರಿಯ ಪುಂಡಮರ್ದನ ಅಂಡಜಾಧಿಪ ಅಂಡಗ ಭಂಡನೆನಿಸದೆ ತೊಂಡನೆನಿಸೊ ಪಾಂಡುರಂಗ ವಿಠ್ಠಲಾ 17 ಸೋಮಶೇಖರ ಭಾಮೆ ಪೂಜಿತ ಕಾಮಿತ ಪ್ರದಸಾಮನೆ ತಾಮಸಾರಿಯ ನೇಮದಿಂದಲಿ ನಾಮನುಡಿಸೊ ಶೀಲನೆ 18 ಸೋಮಕಾಂತಕ ಭಾಮ ರೂಪದಿ ಸೋಮಹಂಚಿದ ಜಾಣನೆ ವಾಮದೇವಗೆ ಭ್ರಮೆಯ ಮಾಡಿದ ಶ್ರೀಮನೋಹರವಾಮನ 19 ಇಂದ್ರಗೊಲಿದ ವೀಂದ್ರವಾಹನ ನಂದಗೋಕುಲ ಚಂದ್ರನೆ ಬಂಧನಪ್ರದ ಬಂಧು ಸರ್ವರ ತಂದೆ ಕಾಯೋ ಬೇಗನೆ 20 ವಿಜಯಸಾರಥಿ ವೃಜಿಜನಾರ್ದನ ಅಜಭವಾದಿ ಪೂಜಿತ ತ್ರಿಜಗವಂದಿತ ಭುಜಗಶಯನನೆ ಅಜಿತ ಶಾಶ್ವತ ವಿಷ್ಣುವೆ 21 ಕಳತ್ರ ಅನೀಕನೆ ವಾಕು ಲಾಲಿಸು ನೂಕುಭವವನು ಏಕರೀತಿಲಿಮೆರೆವನೆ 22 ಜೀವ ಪ್ರೇರಕ ಜೀವಭಾಸರ ಜೀವರಾಶ್ರಯ ಭಿನ್ನನೇ ದೇವದೇವನೆ ಕಾವುದೆಮ್ಮನು ಕೋವಿದಪ್ರಿಯ ಕಪಿಲನೆ 23 ಅನ್ನನಾಮಕ ಅನ್ನದಾಯಕ ಅನ್ನುಉಂಬುವ ಅತಿಥಿಯೆ ಮಾನ್ಯಮಾನದ ಜ್ಞಾನಿಗಮ್ಯನೆ ಬೆನ್ನುಬಿದ್ದೆ ಅನಂತನೆ 24 ಸಾರ ಉಣ್ಣುವ ಗಾರು ಉಣ್ಣದ ಮಾರುತೀಶನೆ ಸ್ವರತನೆ ಧೀರ ಜಯಮುನಿ ವಾಯು ಅಂತರ ಮೆರೆವ ಸಿರಿಪತಿ ಕೃಷ್ಣವಿಠಲನೆ ಬಿಂಬನೆ 25
--------------
ಕೃಷ್ಣವಿಠಲದಾಸರು
ಬಂದರೆ ಭಾಗ್ಯ ಲಕ್ಷ್ಮಿಯರುಮುಯ್ಯವ ಛಂದಾಗಿ ಗೆಲಿಸೆಂದುವಂದಿಸಿ ಹರಿಗೆ ಪ. ಇಂದು ಮುಖಿಯರೆಲ್ಲ ಛಂದಾದ ವಸ್ತಗಳಿಟ್ಟುಚಂದ್ರಗಾವಿಯನುಟ್ಟು ಚಂದ್ರನಂತೆ ಒಪ್ಪುತ 1 ನೀಲ ಮಾಣಿಕದ್ವಸ್ತ್ರಮೇಲುದು ಧರಿಸುತ ನೀಲಾದಿಗಳೆಲ್ಲ 2 ವಸ್ತ ಮುತ್ತಿನ ಇಟ್ಟು ಕಸ್ತೂರಿ ಬೊಟ್ಟಿಟ್ಟುಮಸ್ತಕದಲಿ ಮಾಣಿಕ್ಕಿಟ್ಟು ಭದ್ರಾದಿಗಳು 3 ಹಸ್ತಾಭರಣ ಸಮಸ್ತ ವಸ್ತಗಳಿಟ್ಟುಸ್ವಸ್ತ ಚಿತ್ತದಿಂದ ಮಿತ್ರ ವೃಂದಾರಕಾದಿಗಳು 4 ಕಾಲಿಂದ್ಯಾದಿಗಳೆಲ್ಲ ಬಹಳೆ ವಸ್ತಗಳಿಟ್ಟುವೈಯಾರಿಯರು ಒಲಿಯುತ ವ್ಯಾಲಾಶಯನನ ಬಳಿಗೆ5 ಲಕ್ಷಣಾದಿಗಳೆಲ್ಲ ಲಕ್ಷ ವಸ್ತಗಳಿಟ್ಟುಲಕ್ಷ್ಮಿರಮಣನೆ ಪಂಥ ವೀಕ್ಷಿಸಿಗೆಲಿಸೆಂದು 6 ಜಾಂಬವಂತ್ಯಾದಿಗಳು ತುಂಬಿದೊಸ್ತಗಳಿಟ್ಟುಸಂಭ್ರಮ ಸೂಸುತ ಅಂಬುಜಾಕ್ಷನ ಬಳಿಗೆ7 ಹದಿನಾರು ಸಾವಿರ ಚದುರೆಯರು ವಸ್ತಗಳಿಟ್ಟುಮದನ ಜನಕನ ಮುಯ್ಯ ಮುದದಿಂದ ಗೆಲಿಸೆಂದು8 ವೀರ ರಾಮೇಶ ನಾರಿಯರ ಸೋಲಿಸೋ ಭಾರನಿನ್ನದೆಂದು ನೂರು ಮಂದಿನುಡಿದಾರು 9
--------------
ಗಲಗಲಿಅವ್ವನವರು
ಬಿನ್ನಹ ಮಾಡುವೆನು ಅತ್ತಿಗೆಯರ ಚನ್ನಾಗಿ ಗೆಲಿಸೆಂದುಚದುರ ಮುದ್ಗಲವಾಸನೆದುರಿಗೆಮಧುರ ವಾಕ್ಯಗಳ ನುಡಿಸೆಂದು ಪ. ಗೋಕರ್ಣ ಹಿಮವಂತ ಕೇದಾರಿ ದೇಶಗೋಕುಲ ವೃಂದಾವನ ಮಥುರೆಯಗೋಕುಲ ವೃಂದಾವನ ಮಥುರೆಯ ಒಡೆಯನಸಾಕಲ್ಯದಿಂದ ಬಲಗೊಂಬೆ 1 ಕರವೀರ ಪುರವಾಸ ದೊರೆಯುಪಂಢರಿನಾಥವರವಡ್ಡಿಒಡೆಯ ಬದರಿಯವರವಡ್ಡಿಒಡೆಯ ಬದರಿ ನಾರಾಯಣಗೆಕರವ ಜೋಡಿಸುವೆ ಕರುಣಿಸು2 ಅಯೋಧ್ಯ ಪುರವಾಸ ಗಯಾ ಗದಾಧರಕೈವಲ್ಯ ನೀವ ಜಗದೊಡೆಯಕೈವಲ್ಯ ನೀವ ಜಗದೊಡೆಯನ ಪಾದಕೈಮುಗಿದು ಮೊದಲೆ ಬಲಗೊಂಬೆ3 ದೇಶ ದೇಶದ ಜನಕೆ ಲೇಸಾಗಿ ಸಲಹುವೆಶ್ರೀ ಸತಿದೇವಿ ಅರಸನೆಶ್ರೀ ಸತಿದೇವಿ ಅರಸನೆ ಕಾಶಿವಿಶ್ವೇಶ್ವರನ ಮೊದಲೆ ಬಲಗೊಂಬೆ4 ಹರಿಹರವಾಸಗೆ ಕರಗಳ ಜೋಡಿಸಿಸರ್ವರಿಗೆ ವರವ ಸುಲಭದಿಸರ್ವರಿಗೆ ವರವ ಸುಲಭದಿ ಕೊಡುವಹರದೆಯರ ಪಂಥವ ಗೆಲಿಸೆಂದು5 ಲಕ್ಷ್ಮಿರಮಣನೆ ಪಕ್ಷಿವಾಹನ ಸ್ವಾಮಿಕುಕ್ಷಿಲೆ ಜಗವ ಸಲಹುವೆಕುಕ್ಷಿಲೆ ಜಗವ ಸಲಹುವೆ ಶೂರ್ಪಾಲಿವೃಕ್ಷರಾಜನ ಬಲಗೊಂಬೆ6 ಗಲಗಲಿ ನರಸಿಂಹ ಬಲು ದಯವಂತಸುಲಭದಿ ವರವ ಕೊಡುವವನುಸುಲಭದಿ ವರವ ಕೊಡುವ ರಾಮೇಶನ ಚಲ್ವ ಮೂರ್ತಿಯ ಬಲಗೊಂಬೆ 7
--------------
ಗಲಗಲಿಅವ್ವನವರು
ನವರತ್ನ ಖಚಿತ ಮಾಣಿಕ್ಯದ ಮಂಟಪದಿನವವಿಧದ ಹಂಸತೂಲಿಕ ತಲ್ಪದಲಿಭುವನಮೋಹನ ಶ್ರೀಹರಿಪವಡಿಸಿರಲುಕವಿಗಳು ಪೊಗಳಿ ಪಾಡುವರು ಶ್ರೀಹರಿಯೆಏಳಯ್ಯ ಬೆಳಗಾಯಿತು 1ನಾಗಶಯನನೆ ಏಳು ನಾಗಾರಿವಾಹನನೆನಾಗಸಂಪಿಗೆ ಪಾರಿಜಾತವರಳುತಿದೆಬೇಗದಲಿ ಭಾಗೀರಥಿ ಉದಕವನೆ ತಂದುನಾಗಕನ್ನಿಕೆಯರು ಕಾದು ನಿಂತಿಹರುಏಳಯ್ಯ ಬೆಳಗಾಯಿತು 2ಅತ್ರಿ ವಸಿಷ್ಠ ಭಾರದ್ವಾಜ ಗೌತಮರುಸುತ್ತೆಲ್ಲ ಋಷಿಗಳು ಸ್ತೋತ್ರವನೆ ಮಾಡುತ್ತಮಿತ್ರೆರುಕ್ಮಿಣಿ ಭಾಮೆರಿಂದ ಸೇವಿಪ ಹರಿಗೆಮುತ್ತಿನಾರತಿ ಪಿಡಿದು ನಿಂದಿಹರು ಹರಿಯೆಏಳಯ್ಯ ಬೆಳಗಾಯಿತು 3ಲಕ್ಷ್ಮಿರಮಣನೆ ಏಳು ಪಕ್ಷಿವಾಹನ ಏಳುಕುಕ್ಷಿಯೊಳು ಜಗವನಿಂಬಿಟ್ಟವನೆ ಏಳುರಕ್ಷ ಶಿಕ್ಷಕ ಜಗದ್ರಕ್ಷಕನೆ ನೀ ಏಳುಈಕ್ಷಿಸಿ ಭಜಕರನುದ್ದರಿಸಲೇಳುಏಳಯ್ಯ ಬೆಳಗಾಯಿತು 4ಕಮಲಮಲ್ಲಿಗೆ ಜಾಜಿಕುಸುಮಮಾಲೆಗಳನ್ನುಕಮಲಾಕ್ಷಿಗರ್ಪಿಸುತ ಹರುಷದಿಂದಕಮಲನಾಭ ವಿಠ್ಠಲ ಸಲಹು ಸಲಹೆಂದೆನುತಕಮಲಭವೇಂದ್ರಾದಿಗಳು ಸ್ತುತಿಸುವರು ಹರಿಯೆಏಳಯ್ಯ ಬೆಳಗಾಯಿತು 5ಏಳು ಧೃವವರರೂಪ ಏಳು ನರಹರಿರೂಪಏಳುನಗಧರರೂಪಏಳಯ್ಯ ಹರಿಯೆಏಳಯ್ಯ ಬೆಳಗಾಯಿತು
--------------
ನಿಡಗುರುಕಿ ಜೀವೂಬಾಯಿ