ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿನ್ನದ ಚಾವಡಿ ಮ್ಯಾಲೆ ಪನ್ನಂಗಶಯನರು ಮಾನ್ಯ ಮಾನ್ಯರು ಮುಕ್ತರು ಮುಕ್ತರನೆ ನೋಡುತಲಿಇನ್ಯಾರ ಭಯವು ನಮಗಿಲ್ಲ 1 ಮುತ್ತಿನ ಚಾವಡಿ ಮ್ಯಾಲೆ ಮುಕ್ತರನೆ ನೋಡುತಲಿ ಲಕ್ಷ್ಮಿನಾರಾಯಣರು ಕುಳಿತಾರೆ ಕುಳಿತು ನೋಡುತಲಿರಲು ಮತ್ಯಾರ ಭಯವೂ ನಮಗಿಲ್ಲ 2 ಯಮಧರ್ಮರಾಯಗೆ ನಮೋ ನಮೋ ನಾನೆಂಬೆ ಘನ ಗುಣ ಮಹಿಮ ನೀನೆಂದು ನೀನೆಂದು ಸ್ತುತಿಪೆನೊ ಅನುಮಾನವೇಕೆ ಸಲಹೆನ್ನ 3 ರಂಗ ರಂಗಾಯೆಂದು ರಂಗನ್ನ ನೆನೆದರೆ ಹಿಂಗೋದು ಸಕಲ ದಾರಿದ್ರ್ಯ ದಾರಿದ್ರ್ಯ ಕಳೆವಂಥ ಮಂಗಳಾಂಗಿಯೆ ಶ್ರೀ ಮಾಲಕ್ಷ್ಮಿ 4 ಸಾಮಜವರದನು ಭೀಮೇಶಕೃಷ್ಣನು ಕಾಮಿತಾರ್ಥಗಳ ಕೊಡುವೋನು ಕೊಡುವಂಥ ಶ್ರೀಹರಿಯೆ ಪ್ರೇಮದಲಿ ಎನ್ನ ಸಲಹಲಿ 5
--------------
ಹರಪನಹಳ್ಳಿಭೀಮವ್ವ