ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನ್ಯಾಯದ ನುಡಿ ನರಲೀಲೆಗಿದು ಬಲ್ಲವರಲಿ ಸಲ್ಲದು ನ್ಯಾಯದ ನುಡಿ ನರಲೀಲೆಗಿದು ಪ. ಮಾಯಾತೀತ ಮನೋಭವತಾತ ಪ ರಾಯಣ ತವ ಗುಣ ನಾನೆಂತರಿವೆನು ಅ.ಪ. ಪಾದ ಶ್ರೀದ ಚೆಲುವೆ ರಮಾಕರನಳಿನಾಶ್ರಯಕರಮಾದ ಜಲಜಭವಾದಿ ಸುರಾಳಿಗಳರ್ಚಿಪ ಸುಲಲಿತ ತವ ಪದದೊಲವೆಂತರಿವೆನು 1 ಶರಣಾಗತಜನ ದುರಿತನಿವಾರಣ ನೀನು ಇನ್ನೇನು ತರುಣೀಮಣಿಯಳ ಸೆರೆಯನು ಬಿಡಿಸುವದಿನ್ನು ಕರುಣಾಕರ ನಿನ್ನ ಸ್ಮರಿಸುವಳನುದಿನ ಸ್ಥಿರಚರ ಜೀವಾಂತರ ಪರಿಪೂರ್ಣನೆ2 ಆಕ್ಷೇಪಿಸದಿರು ರಕ್ಷಿಸು ರಘುಕುಲಚಂದ್ರ ರಾಜೇಂದ್ರ ಲಕ್ಷ್ಮೀನಾರಾಯಣ ಸದ್ಗುಣ ಗಣಸಾಂದ್ರ ಈಕ್ಷಿಸು ಕರುಣಾಕಟಾಕ್ಷದಿ ಪೂರ್ವದ ಲಕ್ಷಣ ಹೊಂದಲಿ ಲಕ್ಷ್ಮಣಾಗ್ರಜನೆ3
--------------
ತುಪಾಕಿ ವೆಂಕಟರಮಣಾಚಾರ್ಯ