ಭಗವಂತನ ಸಂಕೀರ್ತನೆ
ಅನುದಿನ ನೆನೆಯಲೊ ಹನುಮನಿಗತಿ ಪ್ರಿಯ
ಪರಮ ಪಾವನ ರಾಮನಾಮ ಪ
ಇನಕುಲ ಭೂಷಣ ಮುನಿಜನ ತೋಷಣ
ಜಾನಕಿರಮಣನ ನಾಮ ಅ.ಪ
ಗೌತಮ ಸತಿಯೆ ಪುನೀತಳ ಮಾಡಿ ಪ್ರ-
ಖ್ಯಾತಿ ಪೊಂದಿದ ದಿವ್ಯನಾಮ
ಶೀತಲ ಕಿರಣ ಭೂಷಣನ ಧನುವ ಮುರಿದು
ಸೀತೆಯ ಪೊಂದಿದ ನಾಮ 1
ಜನಕನ ವಚನವನುಳಿಸುವ ನೆವದಲಿ
ವನವಾಸ ಮಾಡಿದನ ನಾಮ
ವನದಲಿ ಖರದೂಷಣ ಮುಖ ದನುಜರ
ಹನನ ಮಾಡಿದ ದಿವ್ಯನಾಮ2
ಶರಭಂಗಮುನಿಗೆ ಪರಮ ಪದವನಿತ್ತ
ಪರಮ ಪವಿತ್ರನ ನಾಮ
ನಾಸಿಕ ಕರ್ಣ
ಮುರಿಸಿದವನ ಶುದ್ಧ ನಾಮ 3
ಭೂಮಿಜೆಯನು ಮೋಸದಿಂದ ಅಗಲಿಸಿದ
ಮಾರೀಚನ ಕೊಂದ ನಾಮ
ಸ್ವಾಮಿಯ ಪ್ರೇಮಕ್ಕೆ ಮಡಿದ ಜಟಾಯುಗೆ
ಅಭಯ ಹಸ್ತವನಿತ್ತ ನಾಮ 4
ಆ ಮಹಾ ಹನುಮನ ಕಾಮಿತದಂತೆ
ಮಹೇಂದ್ರ ಸುತನ ಕೊಂದ ನಾಮ
ಕಮಲ ಸುಹೃದತನಯನಿಗೆ
ಸಾಮ್ರಾಜ್ಯವನಿತ್ತ ನಾಮ 5
ಪರಿಪರಿವಾರದಿಂ ಶರಧಿಯೊಳ್ ಸೇತು
ಬಂಧನವ ಮಾಡಿದ ರಾಮನಾಮ
ದುರುಳ ರಾವಣ ಮುಖ ರಕ್ಕಸರನೆ ಕೊಂದು
ಧರಣಿ ಸುತೆಯ ಕಂಡ ನಾಮ6
ಶರಣವ ಪೊಂದಿದ ಭಕುತ ವಿಭೀಷಣಗೆ
ತರುಣಿ ಸೀತೆ ಲಕ್ಷ್ಮಣರಿಂದ ಕೂಡಿ ಪು
ಷ್ಪಕವನೇರಿದ ಸಾಧು ನಾಮ 7
ಉರುತರ ತಪದಲಿ ನಿರತನಾದ ತಮ್ಮ
ಭರತನ ಉಳಿಸಿದ ನಾಮ
ದೊರೆತನವೊಂದಿ ಸಕಲ ಸುಜನರುಗಳಿಗೆ
ಪರತರ ಸುಖವಿತ್ತ ನಾಮ 8
ತನ್ನ ಭಕುತರೊಳು ಉನ್ನತನೆನಿಸಿದ
ಘನ್ನಮಾರುತಿಗೊಲಿದ ನಾಮ ಪ್ರ
ಸನ್ನನಾಗಿ ಸಂತತ ಇವನಿಗೆ ತನ್ನ
ಸಹ ಭೋಗ ಸುಖವಿತ್ತ ನಾಮ 9