ಜಯ ಶರಣರ ಸುರಧೇನು
ಜಯ ಜಯ ಸೀತಾರಮಣ ಪ
ಸೊಕ್ಕಿದ ದೈತ್ಯರ ಬಾಧಿಗಾರದಿಹ ದೇವರ್ಕಳ ಮೊರೆಯನು ಕೇಳಿ
ಮಿಕ್ಕನುಜರ ಕೂಡ ಬೆಳೆದು
ಅಕ್ಕರದಲಿ ಕಾಯದು ಬರಲಿ
ನಕ್ಕಿ ಕೈವಿಡಿದನೇ ಜಯತು 1
ಆಖರ ದೂಷಣರಳಿದು
ತಾಕಪಿಕರಢಿಯನೆ ಕೂಡಿ
ಬೇಕಾದ ಸ್ಥಿರಪದ ನೀಡಿ
ಸಾಕೇತ ಪುರಾಧೀಶ ಜಯತು 2
ಲಲನೆ ದಾಮದಲಿ ಕುಳ್ಳಿರಲಿ
ಬಲಕವಶಿಷ್ಠ ಭರತ ಶತೃಘ್ನ ಕೂಡೆ ನೆಲಿಛತ್ರ ವಿಡಯೆ ಲಕ್ಷ್ಮಣನು
ಉಳಿದಸುರನರರು ಕುಳ್ಳಿರಲಿ
ಬೆಳಗಿದಳಾರತಿ ಜಯತು 3