ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣೇಶ ಸ್ತುತಿ ಮಂಗಲಂ ಜಯ ಮಂಗಲಂ ಪ ಗಜಮುಖದೆಸೆವೆ ಲಂಬೋದರಗೆ ತ್ರಿಜಗವಂದಿತ ಮೋದಕ ಕರಗೆ ರಜತಾದ್ರಿವಾಸನ ರಮಣಿಯಸುತನಿಗೆ ಭಜಕರ ಪಾಲಿಪ ವಿಜಯನಿಗೆ 1 ಮೂಷಿಕ ತೇಜಿಯನೇರಿದಗೆ ದೇಶದಿ ಕೀರ್ತಿಯ ಬೀರಿದಗೆ ಶೇಷಾಭರಣವೆತ್ತ ಶೂರ್ಪಕರ್ಣನಿಗೆ ವಾಸೆಯಿಂದ ಭಕ್ತರ ಪೋಷಿಪಗೆ ಮಂಗಲಂ 2 ಕಡುಕರುಣದಿ ಜಗವನು ಕಾಯ್ವಾ ಯೆ ನ್ಹೊಡೆಯ ಶ್ರೀ ವಿಘ್ನೇಶ್ವರ ದೇವಾ ಇಡಗುಂಜಿಯೊಳಗಿದು ದೃಢದಿ ಲಕ್ಷ್ಮಣನಿಗೆ ಗಡಣವಿದ್ಯವನಿತ್ತು ನುಡಿಸುವಗೆ ಮಂಗಲಂ 3
--------------
ಭಟಕಳ ಅಪ್ಪಯ್ಯ
ನೆರೆನಂಬಿದೆನು ನಾನಿನ್ನ ಪಾದಾಂಬುಜವನು ಕರುಣದಿ ಸಲಹೋ ಎನ್ನಾ ಪ ಹರನದೊಡೆಯ ಗೌರಿ ವರನಾಗಿ ಮೆರೆದಿಹ ಸ್ಮರಹರ ಕರ್ಪೂರ ಧವಳಾಂಗಾ ರಿಪುಭಂಗಾ ದೇವತುಂಗಾ ಮೃಢೇಶ್ವರಲಿಂಗಾ ದೇವರದೇವ ನೀನೆಂದು ರಾವಣ ಬಂದು ದೇವಾ ನೀ ಸಲಹೋ ಇಂದು ಭಾವಕಿ ಬೇಡಿಕೊಂಡರೆ ಭಾವಜೆಯವಗೆ ನೀ ಪಾರ್ವತೀಶ್ವರನೇ ನೆರೆ ಹರಿಧರಹರನೀನೆಂದು ಹರಿಯುತಾ ಬಂದು ಹರನೆ ರಕ್ಷಿಸೋ ನೀ ಎಂದು ಕರದು ಹರಿಮಿತ್ರನ ಕರುಣದಿ ವರವಿತ್ತ ಕರಿಗೊರಳನೆ ಅಮಿತಸರ್ವೇಶಾ ನೆರೆ ಪಡುಗಡಲೊಡೆಯನೆಂದು ಪಾಡುತಬಂದು ಪೊಡವಿಯೊಳ್ ಸ್ತುತಿಪನೆಂದೂ ಒಡೆಯ ಲಕ್ಷ್ಮಣನಿಗೆ ಒಡನೆ ಅಭಯವಿತ್ತ ರಿಪುಭಂಗಾ ಹರನೆ ಭಸಿತಾಂಗಾ
--------------
ಭಟಕಳ ಅಪ್ಪಯ್ಯ
ಪ್ರಾಣಪತೇ ನೀ ಸಲಹೊ ಪ ಜಾಣ ಲಕ್ಷ್ಮಣನಿಗೆ ಪ್ರಾಣದಾನವ ಗೈದ ಅ.ಪ ಧೀರಶೂರ ಗಂಭೀರ ಕಪಿ ವೀರನೆಭಾರತಿಕಾಂತನೆ ಮರುತಾವತಾರನೆ1 ಸೀತಾಪತಿಯ ದೂತ ಖ್ಯಾತ ಹನುಮಂತನೆಮತಿವಂತ ಭೀಮನೆ ಯತಿ ಮಧ್ವರಾಯ2 ದುಷ್ಟ ಶಿಕ್ಷ ಬಲು ಕಷ್ಟ ನಿವಾರಣಇಷ್ಟವ ಪಾಲಿಪ ಸಿರಿಕೃಷ್ಣನ ದೂತನೆ 3
--------------
ವ್ಯಾಸರಾಯರು