ಒಟ್ಟು 31 ಕಡೆಗಳಲ್ಲಿ , 2 ದಾಸರು , 31 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಮೂಲ್ಕಿಯ ನರಸಿಂಹದೇವರು) ನಂಬಿದೆ ನಿನ್ನ ಇಂಬಿದೆಯೆಂದು ಸನ್ನುತ ಪ. ಕಂಬದಿಂದ ಕಾಣಿಸಿದ ಗಂಭೀರಗುಣಾಂಭೋನಿಧಿ ಡಿಂಬೋದ್ಧರ ನರಮೃಗವರ ಅ.ಪ. ಭಾನುಕೋಟಿ ಭಾಸ್ಕರ ಪವ- ಮಾನನಯ್ಯ ಪ್ರಾಣದ ಸುತ್ರಾಣ ಸುಗುಣ ದೀನಜನಸಂತಾನ ಮಾನದ ಆನಂದ ಗುಣಾನಂತ ವಿತಾನಾಬ್ಧಿಶಯ ಹರಿ 1 ಎಷ್ಟೊ ಪಾಪಿ ಕನಿಷ್ಠನೆಂದು ಬಿಟ್ಟರೇನು ಬಿರುದು ಹಿರಿದು ಬರುವುದು ಸೃಷ್ಟಿಕರ್ತರಿಷ್ಟಹರ್ತ ಮುಷ್ಟಿಕಭಿದ ತುಷ್ಟಿಪ್ರದ ವಿಠಲ ಕೈಗೊಟ್ಟುಳುಹು 2 ಚಿತ್ತಸಾಕ್ಷಿ ಚಿನುಮಯಾತ್ಮ ಸತ್ಯರೂಪ ಸದಯೋದಯ ಸದುಪಾಶ್ರಯ ದೈತ್ಯಭಂಜನ ಸತ್ಯರಂಜನ ಕ್ಷೇತ್ರಜ್ಞ ಪವಿತ್ರಕಥಾಸ್ತೋತ್ರಾರ್ಹ ಶ್ರೀವತ್ಸಾಂಕಿತ 3 ಮೂಲಿಕಾಪುರ ಮೌಳಿರುತುನ ನೀಲೇಂದೀವರಶ್ಯಾಮಲ ಕಲಿಮಲಭೀಷಣ ಕಾಲಕಾಲ ವಿಶಾಲ ಭುಜಬಲ ಮೂಲೇಶಮುನೀಂದ್ರಾರ್ಚಿತ ಶ್ರೀಲಕ್ಷುಮಿನಾರಾಯಣ 4
--------------
ತುಪಾಕಿ ವೆಂಕಟರಮಣಾಚಾರ್ಯ
ಅನುದಿನ ನಿನ್ನ ನೆನೆದು ಮನವು ನಿನ್ನಲಿ ನಿಲ್ಲಲಿ ಪ. ದುಃಖ ಸುಖ ಲೆಕ್ಕಿಸದೆ ಮುಖ್ಯ ಫಲ ಮುಂದರಿಸೆ ಮಿಕ್ಕುತ್ತ ಸೊಕ್ಕಿ ಮೋಹಕ್ಕೆ ಸಿಕ್ಕದೆ 1 ನಿನ್ನ ಗುಣ ವರ್ಣಿಸುತ ನಿನ್ನವರ ಮನ್ನಿಸುತ ನಿನ್ನ ಪಾವನ್ನ ಲಾವಣ್ಯ ಧ್ಯಾನಿಸೆ 2 ಸಂತೋಷ ನಿರಂತರವು ಸಂತ ಜನ ಸಹವಾಸವು ಶಾಂತತ್ವವಾಂತು ಮಹಾಂತಧೈರ್ಯದಿ3 ಭಕ್ತಿ ಸುವಿರಕ್ತಿ ಜ್ಞಾನ ಮುಕ್ತಿಗೆ ಮುಖ್ಯ ಕಾರಣ ಚಿತ್ತದೊಳಿತ್ತೆಲ್ಲ ಹೊತ್ತು ಹೊತ್ತಿಗೆ4 ಪ್ರಿಯ ಶ್ರೀಲಕ್ಷುಮಿನಾರಾಯಣ ಪರಾಯಣನ ಧೈರ್ಯದಂತರ್ಯ ಗಾಂಭೀರ್ಯ ಭಾವದಿ5
--------------
ತುಪಾಕಿ ವೆಂಕಟರಮಣಾಚಾರ್ಯ
ಅಂಬಾ ನಿಖಿಳಲೋಕ ಜನನಿ ಜಗದಂಬಾ ಪ. ನಿಖಿಳಲೋಕಸತಿ ಮುಕುತಿಪ್ರದಾಯಕಿ ಶುಕಶೌನಕಾದಿ ವಿನುತೇ ಕಾತ್ಯಾಯಿನಿ 1 ಆದಿಶಕ್ತಿ ದಿವಿಜಾದಿವಂದಿತೆ ಶಿವೆ ಯಾದವೇಂದ್ರ ದಾಮೋದರಭಗಿನಿ 2 ಕಂಬುಕಂಠಿಣಿ ಸ್ವರ್ಣಕುಂಭಯೋಧರಿ ಅಂಬುಜಾಸನವಿನುತೆ ಕಾತ್ಯಾಯಿನಿ 3 ಸರ್ಪವೇಣಿ ವರಬಪ್ಪ ಪುರೇಶ್ವರಿ ಮುಪ್ಪುರನಾಶನರ್ಧಾಂಗಿ ಕಾತ್ಯಾಯಿನಿ 4 ಸಿರಿಕಾತ್ಯಾಯಿನಿ ಗೌರಿ ಭವಾನಿ ಹರಿ ಲಕ್ಷುಮಿನಾರಾಯಣ ಭಗಿನಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಅಂಬಾ ನಿಖಿಳಲೋಕ ಜನನಿ ಜಗದಂಬಾ ಪ. ನಿಖಿಳಲೋಕಸತಿ ಮುಕುತಿಪ್ರದಾಯಕಿ ಶುಕಶೌನಕಾದಿ ವಿನುತೇ ಕಾತ್ಯಾಯಿನಿ1 ಆದಿಶಕ್ತಿ ದಿವಿಜಾದಿವಂದಿತೆ ಶಿವೆ ಯಾದವೇಂದ್ರ ದಾಮೋದರಭಗಿನಿ2 ಕಂಬುಕಂಠಿಣಿ ಸ್ವರ್ಣಕುಂಭಯೋಧರಿ ಅಂಬುಜಾಸನವಿನುತೆ ಕಾತ್ಯಾಯಿನಿ 3 ಮುಪ್ಪುರನಾಶನರ್ಧಾಂಗಿ ಕಾತ್ಯಾಯಿನಿ4 ಸಿರಿಕಾತ್ಯಾಯಿನಿ ಗೌರಿ ಭವಾನಿ ಹರಿ ಲಕ್ಷುಮಿನಾರಾಯಣ ಭಗಿನಿ5
--------------
ತುಪಾಕಿ ವೆಂಕಟರಮಣಾಚಾರ್ಯ
ಎಲ್ಲಿರುವೇನೋ ಮಾರುತಿ ಸುವ್ರತಿ ಎಲ್ಲಿರುವನೇನೋ ಮಾರುತಿ ಪ. ಎಲ್ಲಾ ಕಡೆಯಲ್ಲಿ ವ್ಯಾಪ್ತಿ ಯುಳ್ಳವ ಭಾರತೀಪತಿ ಅ.ಪ. ನಿತ್ಯ ರಾಮಪದೈಕಾಸಕ್ತಿ- ಚಿತ್ತನು ಸದಾ ಜಾಗರ್ತಿ ಧೂರ್ತರಿಪುದಲ್ಲಣ ಜೀ- ವೋತ್ತಮ ವಿಚಿತ್ರಗತಿ 1 ಪ್ರಾಣಸಮಾನ ಸಂಪ್ರೀತಿ ಜ್ಞಾನಪೂರ್ವಕ ಸದ್ಭಕ್ತಿ- ವಾನ ವಾನರೇಂದ್ರ ಸುಪ- ರ್ವಾಣಕುಲಚಕ್ರವರ್ತಿ 2 ಲಕ್ಷುಮಿನಾರಾಯಣನ ಪಕ್ಟ್ರೆಕಧೃತಿ ಸುಮತಿ ಅಕ್ಷೀಣ ತ್ರಾಣದ ನಿರ- ಪೇಕ್ಷ ಲಕ್ಷಣಮೂರುತಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಎಲ್ಲಿರುವೇನೋ ಮಾರುತಿ ಸುವ್ರತಿ ಎಲ್ಲಿರುವನೇನೋ ಮಾರುತಿ ಪ. ಎಲ್ಲಾ ಕಡೆಯಲ್ಲಿ ವ್ಯಾಪ್ತಿ ಯುಳ್ಳವ ಭಾರತೀಪತಿ ಅ.ಪ. ನಿತ್ಯ ರಾಮಪದೈಕಾಸಕ್ತಿ- ಚಿತ್ತನು ಸದಾ ಜಾಗರ್ತಿ ಧೂರ್ತರಿಪುದಲ್ಲಣ ಜೀ- ವೋತ್ತಮ ವಿಚಿತ್ರಗತಿ 1 ಪ್ರಾಣಸಮಾನ ಸಂಪ್ರೀತಿ ಜ್ಞಾನಪೂರ್ವಕ ಸದ್ಭಕ್ತಿ- ವಾನ ವಾನರೇಂದ್ರ ಸುಪ- ರ್ವಾಣಕುಲಚಕ್ರವರ್ತಿ 2 ಲಕ್ಷುಮಿನಾರಾಯಣನ ಪಕ್ಟ್ರೆಕಧೃತಿ ಸುಮತಿ ಅಕ್ಷೀಣ ತ್ರಾಣದ ನಿರ- ಪೇಕ್ಷ ಲಕ್ಷಣಮೂರುತಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಜಗವು ನಿನ್ನಧೀನ ಖಗಪತಿವಾಹನ ನಿಗಮ ಗೋಚರ ಕೃಷ್ಣ ನಿತ್ಯತೃಪ್ತ ಮೋಹನ ಪ. ಇಂದಿರೆ ನಾಯಕ ಸಿಂಧುಶಯನ ಸದಾನಂದ ಸುಖಪ್ರದ 1 ಜೀವವಿಲಕ್ಷಣ ಜೀವಸಂಪ್ರೇಕ್ಷಣ ಕೇವಲ ನಿರ್ಗುಣ ಕೇಶಿನಿಷೂದನ2 ವಾಯುಜನಕ ಯದುರಾಯ ರುಕ್ಮಿಣಿ ಸಖ ಪ್ರಿಯ ಶ್ರೀ ಲಕ್ಷುಮಿನಾರಾಯಣ ಪಾವನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಜಯಜನನೀ ಶಾರದೆ ಜನನಮೃತಿಭಯಭಿದೆ ಪ. ನಯವಿದೆ ತ್ರಿಜಗನ್ಮಯೆ ವೀಣಾವಿನೋದೆ ಅ.ಪ. ಭಕ್ತಿಜ್ಞಾನ ಮಾನದೆ ಭಗವತ್ಪ್ರಾಪ್ತ ಪ್ರಸಾದೆ ಮುಕ್ತಿಶಕ್ತಿಪ್ರದೆ ನಿಜ ಭೃತ್ಯವತ್ಸಲೆ ಪ್ರಬುದ್ಧೆ 1 ವೇದಾರ್ಥತತ್ವಪ್ರಬೋಧೆ ಆದಿತೇಯಾನತಪದೆ ಶ್ರೀಧರೆ ಸದಾನಂದೆ ಸಾಧು ಸೌಭಾಗ್ಯನಿಧೆ 2 ಅನಘ ಲಕ್ಷುಮಿನಾರಾಯಣನ ಭಕ್ತ ಪ್ರಹ್ಲಾದ ಸನಕನುತೆ ಸನ್ನುತೆ ಘನಪಾಪಾಪಹ್ನುತೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ದಿಟ್ಟ ಮುಖ್ಯಪ್ರಾಣನೆ ಜಗಜಟ್ಟಿ ಬಾ ಸುತ್ರಾಣನೆ ಶ್ರೇಷ್ಠದನುಜಘರಟ್ಟ ಸುಗುಣವಿಶಿಷ್ಟ ಭಕ್ತಶಿಖಾಮಣಿ ಪ. ವಾಯುಪುತ್ರ ವಿಚಿತ್ರ ಬಲಿಸುರರಾಯರಾಯರ ಗಂಡನೆ ಪ್ರೀಯರಾಮಪದಾಬ್ಜಮಧುಕರ ಮಾಯಿಕದನಪ್ರಚಂಡನೆ 1 ಶ್ರೀವರೋತ್ತಮ ಹನುಮ ಭೀಮಕೃಪಾವಲಂಬ ಮಹೋಜನೆ ಪಾವಮಾನಿ ಪರೇಶ ಪದ್ಮಜ ಭಾವಿ ಯತಿಕುಲರಾಜನೆ 2 ಶೂರಾಗ್ರಣಿ ಸುಗುಣಿ ಲಕ್ಷುಮಿನಾರಾಯಣದಾಸನೆ ಭಾರತೀವದನಾರವಿಂದಕೆ ಸೂರ ನಿತ್ಯವಿಲಾಸನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಪೊರೆಯುವುದೆಮ್ಮನು ನರಹರಿ ನೀನು ಸ್ಮರಿಪೆವು ತವ ಪದಸರಸಿಜಗಳನು ಪ. ತರಳ ಪ್ರಹ್ಲಾದನು ಮೊರೆಯಿಟ್ಟು ತಾನು ಕರೆಯಲಾಕ್ಷಣ ಬಂದೆ ತ್ವರಿತದಿ ನೀನು 1 ದುರುಳ ಹಿರಣ್ಯಕಸುರನನು ಸೀಳಿ ಸುರರನ್ನು ಸಲಹಿದೆ ಕರುಣವ ತಾಳಿ 2 ಮಿತ್ರ ಮಂಡಳಿ ಶತಪತ್ರಕೆ ನೀನು ಮಿತ್ರನಂತೆಸಗು ವಿಮಿತ್ರತೆಯನ್ನು 3 ಕಾರುಣ್ಯಾಮೃತವಾರಿಧೇ ಮೂರ್ತೇ ವರ ಲಕ್ಷುಮಿನಾರಾಯಣ ಸತ್ಕೀರ್ತೇ 4
--------------
ತುಪಾಕಿ ವೆಂಕಟರಮಣಾಚಾರ್ಯ
ಬಾಲಗಜಾನನ ಬಾ ಗುಣಸದನ ಪಾಲಿತ ತ್ರಿಭುವನ ಬಾಲ ಜಗಜ್ಜೀವನ ಪ. ರಾಧಾದೇವಿಯಾರಾಧಿಸಿದಳು ನಿನ್ನ ಆದಿಯೊಳ್ ಕೈಕೊಂಬೆ ಮೋದದಿಂದ ಪೂಜನ 1 ವಿಘ್ನವಿಭಂಜನ ವಿಧಿಸುರ ರಂಜನ ಅಗ್ನಿ ಗರ್ಭನಗ್ರಜ ಅಖುವಾಹನ ಮೋಹನ 2 ಪ್ರಿಯ ಶ್ರೀ ಲಕ್ಷುಮಿನಾರಾಯಣಶರಣ ಕಾಯೊ ಕಾಮಿತಫಲದಾಯಕ ಸುಮನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭಜಿಸೋ ಹರಿಯ ಭಜಕರ ಭಾಗ್ಯನಿಧಿಯಪ. ಕಾಲವ ವ್ಯರ್ಥ ಕಳೆವೆ ಕೂಳನು ತಿಂದು ನಲಿವೆ ಖೂಳರಿಗೆ ನೀನೊಲಿವೆ ಶೀಲವ ಕಂಡು ಪಳಿವೆ1 ದುಷ್ಟರ ಸಹವಾಸ ಬಿಟ್ಟರೆ ಯಾವ ದೋಷ ಕೃಷ್ಣನ ಭಕ್ತಿ ಲೇಶ ಹುಟ್ಟದೆ ಹೋಯ್ತೆ ಮೋಸ2 ಕಾರಣ ಕಾರ್ಯ ದ್ವಯನ ಧಾರಣ ಜಗತ್ರಯನ ಧಾರಣ ಕೃತ ಭಯನ ಚಾರಣ ಸುರ ಪ್ರಿಯನ3 ಲಕ್ಷುಮಿನಾರಾಯಣನ ಲಕ್ಷಿಸಿ ಮಾಡೋ ಧ್ಯಾನ ಲಕ್ಷ್ಮಣನ ಪೂರ್ವಜನ ಅಕ್ಷರ ಪುರುಷೊತ್ತಮನ4
--------------
ತುಪಾಕಿ ವೆಂಕಟರಮಣಾಚಾರ್ಯ
ಮಾತೆ ಸರಸ್ವತಿ ಮಂಜುಳ ಮೂರುತಿ ಚೇತನಾತ್ಮಕಿ ಭಾರತಿ ಪ. ಪ್ರೀತಿಯಿಂದೀವುದು ಪೀತಾಂಬರಧರನ ಸಾತಿಶಯದ ಭಕುತಿ ಅ.ಪ. ಗುರುಹಿರಿಯರ ಕಂಡು ಬಿರುನುಡಿ ನುಡಿಸದೆ ಕರುಣಿಸೆನಗೆ ಸನ್ಮತಿ ಪರಮಪಾವನ ವೈಷ್ಣವರ ಪಾದಾಂಬುಜ ಮಧು- ಕರದಂತಿರಲಿ ಮದ್ರತಿ 1 ಮೂರ್ತಿ ತಾರೇಶನಂದದಿ ಹೃದಯಾ- ಕಾಶದೊಳು ಕಾಣುತಿ ದೂಷಣ ಕಾಮಾದಿ ಕ್ಲೇಶವ ಬಿಡಿಸುತ್ತ ಗೈಸಮ್ಮ ಹರಿಯ ಸ್ತುತಿ 2 ಮನುಜರ ರೂಪದಿ ದನುಜರು ಭೂಮಿಯೊಳ್ ಜನಿಸಿದರ್ಜಲಜನೇತ್ರಿ ಅನಘ ಲಕ್ಷುಮಿನಾರಾಯಣನ ದಾಸರಿಗೆಲ್ಲ ಜನನಿಯೆ ನೀನೆ ಗತಿ 3 ಭಾರತಿದೇವಿಯ ಸ್ತುತಿ
--------------
ತುಪಾಕಿ ವೆಂಕಟರಮಣಾಚಾರ್ಯ
ಮಾಧವ ಅಂಗಜನಯ್ಯ ಪಾಂಡುರಂಗ ವಿಠಲನಿಗೆ ಪ. ಪುಂಡರೀಕವರಗೆ ಪೂರ್ಣಾತ್ಪೂರ್ಣಗೆ ಪಂಡರಿಪುರವರ ಪುಂಡರೀಕಾಕ್ಷಗೆ 1 ನಾಮದೇವಾದಿ ಸಂತಸ್ತೋಮ ಪರಿಣಾಮ ಶ್ರೀ- ರಾಮದಾಸನ ಪ್ರಿಯ ಶ್ರೀರಾಮಗೆ 2 ಏಕನಾಥನಾಲಯ ಚಾಕರನಾದವಗೆ ಗೋಕುಲಪಾಲಗೆ ಗೋಮಿನಿಲೋಲಗೆ 3 ಮಂದರಧಾರಗೆ ಮಥುರಾನಾಥಗೆ ಕಂದರ್ಪ ಶತಕೋಟಿ ಸುಂದರರೂಪಗೆ 4 ರುಕುಮಿಣಿಕಾಂತಗೆ ರುಜುಗಣಾಧೀಶಗೆ ಭಕ್ತವತ್ಸಲನಿಗೆ ಲಕ್ಷುಮಿನಾರಾಯಣಗೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ವಲ್ಲೀದೇವಿಯ ವಲ್ಲಭನೆ ಬಲ್ಲಿದ ಭಕ್ತರ ಸುಲ್ಲಭನೆ ಪ. ಸಲ್ಲಲಿತ ಪಾದಪಲ್ಲವ ಭಜಿಸುವ- ರೆಲ್ಲರ ಮನಸಿನೊಳುಲ್ಲಸನೆಅ.ಪ. ವೃಂದಾರಕಮುನಿವಂದಿತನೆ ಕಂದರ್ಪಾಮಿತಸುಂದರನೆ ಸ್ಕಂದನೆ ಸಚ್ಚಿದಾನಂದನೆ ಪಾರ್ವತೀ- ನಂದನ ಸದ್ಗುಣಮಂದಿರನೆ 1 ತಾರಕದೈತ್ಯ ಸಂಹಾರಕನೆ ಸೇರಿದ ಭಕ್ತೋದ್ಧಾರಕನೆ ಮಾರಾರಿಯ ಸುಕುಮಾರನೆ ಧೀರನೆ ಚಾರು ಮಯೂರ ತುರಂಗಮನೆ2 ಲಕ್ಷುಮಿನಾರಾಯಣ ಪ್ರಿಯನೆ ರಕ್ಕಸರಿಂಗತಿದುಃಖದನೆ ಕುಕ್ಕುಟವಜ್ರಾಭಯಶಕ್ತಿಹಸ್ತನೆ ಪ್ರಖ್ಯಾತ ಪಾವಂಜಾಖ್ಯ ಪುರವರನೆ 3
--------------
ತುಪಾಕಿ ವೆಂಕಟರಮಣಾಚಾರ್ಯ