ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾತ್ಸಾರಕಿದು ಕಾಲವಲ್ಲ ರಂಗಯ್ಯ ಶ್ರೀ- ವತ್ಸಲಾಂಛನ ಸುಖ ಚಿನ್ಮಯನೆ ವತ್ಸನ ಧ್ವನಿ ಕೇಳಿ ಒದಗುವ ಗೋವಂತೆ ಭೃತ್ಯರ ಸಲಹುವ ಬಿರುದುಳ್ಳ ನರಸಿಂಹ ಪ. ಹುಚ್ಚಾಗೆಲ್ಲರ ಕಚ್ಚುವ ನಾಯಂತೆ ತುಚ್ಛವಾದ ಬಗುಳುಚ್ಚರಿಸಿ ಇಚ್ಛಾನುಸಾರದಿಂದಿರುವ ಹೂಣನ ಬಾಯಿ ಮುಚ್ಚಿಸಿ ಮೂಲೆಯೊಳ್ಮುರಿದೊತ್ತು ಮುರಹರ 1 ನಿನ್ನ ಸೇವೆಯನ್ನು ನಿರುತದಿ ನಡೆಸುತ ಅನ್ಯರ ಲಕ್ಷಿಸದಿರಲೆನ್ನನು ಭಿನ್ನ ಭಾವದಿ ಭೀತಿ ಬಡಿಸುವ ದುಷ್ಟನ ಇನ್ನುಪೇಕ್ಷಿಸಿ ಸುಮ್ಮನಿರುವೆ ಯಾತಕೆ ಸ್ವಾಮಿ 2 ದುಷ್ಟ ಹಿರಣ್ಯಚರ್ಮಾದಿದಮನ ನಿನ- ಗೆಷ್ಟೆಂದು ಪೇಳಲಿ ವಿಧಿಜನಕ ಸೃಷ್ಟಿಗೊಡೆಯ ವೆಂಕಟೇಶನ ಹೂಣನ ಮಾಧವ 3
--------------
ತುಪಾಕಿ ವೆಂಕಟರಮಣಾಚಾರ್ಯ