ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾವಿನಕೆರೆ-2 ಏತಕೆ ಗಿರಿಯಲ್ಲಿ ನೆಲೆಸಿದೆಯೊ | ರಂಗ || ಪ ಭಂಗ ಅ.ಪ ದಾನಿ ನೀನೆನ್ನುತಲಿ ದಿನದಿನವು ಲಕ್ಷಾಳಿ ದೀನ ಮನುಜರು ಬಂದು ಬಾಧಿಸುವರೆಂದೂ ಕಾನನಾಂತರದಲ್ಲಿ ನೆಲೆಸಿದೆಯೊ ನಾಕಾಣೆ ನೀನೆಲ್ಲಿ ಪೋದೊಡಂ ಬಿಡೆನೈಯ ರಂಗ 1 ಜನನಿಬಿಡ ಪುರವೆಂದು ಮನಕೆ ಬೇಸರವಾಗಿ ವನದೊಳಗೆ ಚರಿಸಬೇಕೆನುತಲಿಹೆಯೋ ಮನುಜರ ಅನ್ಯಾಯ ದುಷ್ಕಾರ್ಯಗಳ ನೋಡಿ ಮನಕರಗಿ ಗಿರಿಯನ್ನು ಸೇರಿದೆಯೊ ರಂಗ 2 ದೇಹದಂಡನೆಯಿಂದ ಇಹಪರದ ಸುಖವೆಂಬ ರಹಸ್ಯ ತತ್ವಾರ್ಥವನು ತಿಳಿಸಲಿಹೆಯೋ ಶ್ರೀಹರಿಯೇ ನಿನ್ನ ವೈಚಿತ್ರ್ಯವಸದಳವಯ್ಯ ದೇಹಧಾರಿಗೆ ಅಳವೆ ವರ್ಣಿಸಲು ನಿನ್ನಾ 3 ಬೇವ ಮಾವನು ಗೈದೆ ಮಾವಬೇವನು ಗೈದೆ ಶಿವರೂಪದೆ ನಿಂದು ಕೇಶವನು ಎನಿಸಿದೆ ಭಾವುಕರು ಗೈಯದಾ ದೇವಾಲಯವ ಗೈದೆ ಮಾವಿನಕೆರೆರಂಗ ನಿನಗಾರು ಸಮರೋ 4 ವನಜನಾಭನು ಎಂಬ ಅನುಮತಿಯನೀಯಲ್ಕೆ ಹನುಮದೇವನ ಪೂಜಿಸಿ ಮನವೊಲಿಸಿದೇ ಸನುಮತದಿ ಕಾಯೆನ್ನ ರಾಮದಾಸಾರ್ಚಿತನೆ ಅನುವಿಂದ ನೀನೆನ್ನ ಮನದೊಳಿರು ಹರಿಯೇ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್