ಅಂತರಂಗದ ಸುಖ ಹೇಳುವುದಲ್ಲಾ
ಸಂತೋಷವೆಂಬುದು ಶಿವನೊಬ್ಬ ಬಲ್ಲ ಪ
ಗುರುಕೊಟ್ಟ ಮಂತ್ರದ
ಪರರ್ಯಾರು ಅರಿಯದಂದದಲಿ ಈ ಪ್ರಾಣ
ಪರಮನೊಳಾಡುವುದು ಆತನ ದಿವ್ಯ
ಚರಣನೋಡುವುದು ಆಂತರ್ಯದ ಸ್ವಾನುಭವ
ಅರಿಯದ ಜನರಿಗೆ 1
ಧ್ಯಾನಿಸಿ ನೋಡಲು ದೃಢವಿಡಿದಾಡಲು
ಜ್ಞಾನ ದೀಪದ ಜ್ಯೋತಿ ಗಗನ ವೇರಿದ ಪ್ರತಿ
ಭಾನುವುದಿಸಿದಂದದಿ ಪ್ರಕಾಶಮಾನ ಸದಾನಂದದಿ
ಅಂತರ್ಯದ ಸ್ವಾನುಭವ ಅರಿಯದ ಜನರಿಗೆ 2
ಮೂರ್ತಿ ಪರಮನಾಗಿಹ ಅರ್ಥಿ
ಎರಕವಾಗಿಹ ಲಕ್ಷಾ ಎಣಿಕೆ ಇಲ್ಲದ ಮೋಕ್ಷಾ
ಶರಧಿಯೊಳಾಡುವುದು ಶಕ್ತಿಯ ಮರ್ಮ
ವರಕೃಪಮಾಡುವುದು ವಿಮಲಾನಂದ
ಗುರುಕಟಾಕ್ಷದ ಬಗೆ ಅರಿಯದ ಜನರಿಗೆ 3