ಕಾರ್ಕಳದ ವೆಂಕಟರಮಣದೇವರ ಲಕ್ಷದೀಪೋತ್ಸವ
ಪೀಠಿಕೆ
ಉತ್ತಮರು ಕೇಳಿರೈ ಉಲ್ಲಾಸದಿಂದ ವರ-
ಪೃಥ್ವಿಯೊಳು ಮೂಲಕಾಪುರದೊಳಗಿಹ ವಿಶ್ವಾ
ಪ್ರವರವೆತ್ತ ವೆಂಕಟಕೃಷ್ಣನ
ಪುತ್ರ ಲಕ್ಷ್ಮೀನಾರಾಯಣನು ಹರಿಪದಕಮಲ
ಚಿತ್ತದೊಳ್ ಧ್ಯಾನಿಸುತ ಪೇಳ್ದನೀ ಕಾವ್ಯಮಂ
ಪ್ರವರ್ತಿಸುವುದೆಲ್ಲ ಜನರು 1
ಧರೆಯೊಳುತ್ತಮವೆನಿಪ ವರ ಕಾರ್ಕಳಾಖ್ಯ ಪುರ-
ದರಸ ಶ್ರೀವೆಂಕಟೇಶ್ವರನ ಲೀಲಾಭಿವಿ
ಸ್ತರದ ದೀಪೋತ್ಸವದ ಪರಿವಿಲಾಸಕ ಕಾವ್ಯರಚನಾಗುಣಗಳಿಂದ
ಸುರನಾರಿಯರು ಪೇಳ್ದ ಸಂವಾದ ತೆರನಂತೆ
ವಿರಚಿಸಿದೆನೀ ಕೃತಿಯ ದೋಷವಿದ್ದರೆ ತಿದ್ದಿ
ಸರ್ವ ಜನರು 2
ಶ್ರೀ ವಿಷ್ಣುನಿಗಮಾರ್ಗಮಾರ್ಚಿತ ಪದಂ ಪೀತಾಂಬರಾಲಂಕೃತಂ
ಸೇವ್ಯಂ ಸದಾ ತತ್‍ಪದಂ
ದೂರ್ವಾದಲಶ್ಯಾಮಲಂ
ಶ್ರೀವತ್ಸಾಂಕಮುದಾರ ಮಂಗಲಕರಂ ಶ್ರೀ ಶ್ರೀನಿವಾಸಂ ಭಜೇ 3
ಆದಿಗುರು ವೇದವ್ಯಾಸರನು ವಂದಿಸುತ
ಸಾದರದಿ ಮಧ್ವಯತಿವರರರ ನುತಿಸುತ
ಭೂದಿವಿಜರಿಂಗೆರಗಿ ಬಳಿಕ ಕೂರ್ಮೆಯೊಳು
ಮಾಧವನ ರಾಣಿ ಲಕ್ಷ್ಮಿಯನು ಮನಸಿನೊಳು 1
ಧ್ಯಾನಿಸುತ ಏಕದಂತನ ಪದವ ಭಜಿಸಿ
ಮಾನದಿಂ ಶಾರದೆಯನೊಲವ ಸಂಗ್ರಹಿಸಿ
ಶ್ರೀನಿವಾಸನ ಪುಣ್ಯಚರಿತೆಯನನುಸರಿಸಿ
ನಾನಾ ಲೀಲೆಗಳನು ಕಾವ್ಯರಚನೆಯಲಿ ನಾನೊರೆವೆ 2
ಪರಮ ಪುರುಷನು ಪ್ರಥಮ ದಿನದಿ ಕಟ್ಟೆಯಲಿ
ವರಪೂಜೆಗೊಂಡು ಮಂಟಪದಿ ವಿನಯದಲಿ
ಚರಣವನು ತೋರಿ ಹನುಮ ಗರುಡನಲಿ
ಪರಿವಿಲಾಸಕರ ಸೇವೆಗೊಂಡು ಕರುಣದಲಿ 3
ಭೋಗಿಪತಿಯಲಿ ಮಂಡಿಸಿದ ಲೀಲೆಗಳನು
ನಾಗತೀರ್ಥದ ಗಂಭೀರೊತ್ಸಾಹಗಳನು
ಭಾಗವತ ಯೋಗವನು ಭೋಜನಾಧಿಕವ
ಭಾಗ್ಯೋದಯದ ಚೂರ್ಣೋತ್ಸವದ ವಿಲಾಸಕವನು 4
ಶ್ರೀ ನಾರಾಯಣನ ಕರುಣದಲಿ ವೇಣುಮತಿ ಪ್ರಾಸಯತಿಗಳ
ಯುಕ್ತಿಯೆಲ್ಲ ನಾನರಿಯೆ ದೋಷವಿದ್ದರೂ ತಿದ್ದಿ ಬಲ್ಲಭಿ
ಮಾನನಿಧಿಗಳನು ಮೆರೆಸುವದು ಭೂತಳದೊಳು
ಶ್ರೀನಿವಾಸನು ಪಾಲಿಸುವನು ನಿತ್ಯದೊಳು5