ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶ್ರೀಹರಿಯ ಷಣ್ಮಹಿಷಿಯರ ಸ್ತುತಿ) ಹರಿಮಾನಿನಿಯರಾರು ಮಂದಿ ಸುಪ್ರವೀಣೆ ಲಕ್ಷಣೆ ಕಾಳಿಂದಿ ಜಾಣೆ ಸಖಿವಿಂದೆ ಜಾಂಬವತಿಯರಿಗೆ ನಾ ನಮಿಸುವೆ ಮನದೊಳಗೆ1 ತಮ್ಮ ಪತಿಯರಿಂದೊಡಗೂಡಿ ಮನ್ಮಾನಸಮಂ ಮನೆಮಾಡಿ ನಿರ್ಮಲ ಬುದ್ಧಿಯ ಪ್ರೇರೇಪಿಸಲಿ ಸುಮ್ಮಾನ ಪಾಲಿಸಲಿ2 ಭಕ್ತಿ ವಿರಕ್ತಿ ಜ್ಞಾನ ಮ- ಚ್ಚಿತ್ತದೊಳಿರಲಿ ಧ್ಯಾನ ಕರ್ತ ಲಕ್ಷ್ಮೀನಾರಾಯಣನ ನಾಮ- ಕೀರ್ತನೆಗೈವುದೆ ನೇಮ3 ದುರ್ಗಾದೇವಿಯ ಸ್ತುತಿ
--------------
ತುಪಾಕಿ ವೆಂಕಟರಮಣಾಚಾರ್ಯ
ಎಂದೂ ಹಿಡಿಯದಿರು ಗರ್ವಾ | ಗೋ ವಿಂದನಲೀಲೆಯ ಕಾಣೊ ಸರ್ವಾ ಪ ಕ್ಷಿತಿಯೊಳಧಿಕವೆನ್ನ ಕುಲವು | ಗುಣ | ವತಿ ಸುಲಕ್ಷಣೆಯಾದಾ | ಸತಿಯಳ ವಲವು | ಸುತನಲ್ಲಿ ಗುಣ ನಿಶ್ಚಲಿಪು | ಯನ | ಗತಿಶಯ ಭಾಗ್ಯದ ಧನ ಧಾನ್ಯ ಒಲವು 1 ಎಲ್ಲರೊಳಗ ಅಭಿಮಾನಿ | ಶಾಸ್ತ್ರ | ಬಲ್ಲಿದ ಯೌವ್ವನ ತ್ರಾಣಿ | ಯನ್ನು | ಸೊಲ್ಲು ಸೊಲ್ಲಿಗ್ಹೇಳುವ ಕವಿತೆಯ ವಾಣಿ 2 ಸುಂದರವಾದ ಮಂದಿರವು | ಯನ | ಗೊಂದು ಕೊರತೆಯಿಲ್ಲಾವೆಂಬುದೀ ಮರವು ಹೊಂದದೆ ಬಾಗಿರೆಚ್ಚವು | ಗುರು | ತಂದೆ ಮಹಿಪತಿ ಬೋಧಿಸಿದರಹು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಣೆವಾವಿದನು ಕಾಣೆವಾವಿದನಾವ ಶಾಸ್ತ್ರದಲಿ ವಿದುಗಳ ಪ್ರಮಾಣ ವಚನದಲಿ ಮೂರನೆಯ ಪಥದಾಪಜಾಣಿಲಾತ್ಮನ ಸಮಾಧಿಯಲನುಭವಿಸಿ ಸುಖವಕಾಣದೆ ಬರಿದೆ ಮುಕುತರಾವೆಂಬ ಪರಿಯಾ ಅ.ಪತಾನೆ ಚೇತನವಂತೆ ತನಗೆ ಕರ್ಮಗಳಂತೆತಾನೆ ಸುಖಮಯನಂತೆ ತಾಪವನಂತೆತಾನೆ ಬೋಮವದಂತೆ ಹಾನಿವೃದ್ಧಿಗಳಂತೆತಾನೆ ನಿರ್ಲೇಪಸ್ತುತಿನಿಂದೆ ತನಗಂತೊ 1ಬೋಧೆಯು ತಾನಂತೆ ಸಾಧನವು ಬೇಕಂತೆಭೇದವಿಲ್ಲವದಂತೆ ಭೀತಿ ತನಗಂತೆನಾದ ಬಿಂದುಗಳನರಿದಿಪ್ಪಗತಿಯಂತೆಪಾದಾಭಿಮಾನ ಚಿಂತೆಯು ಪೋಗದಂತೆ 2ಕಾಯ ಕರುಣಾಭಿಮಾನಗಳಿಲ್ಲ ತನಗಂತೆಮಾಯೆ ಬಾಧಿಪುದಂತೆ ಮನಸಿನೊಳಗೆಈಯಹಂಕಾರವಿಲ್ಲದ ಬೊಮ್ಮಪದವಂತೆಹೇಯವಿದುಪಾದೇಯವೆನಿಪ ಭ್ರಮೆಯಂತೆ 3ಈಶ ತಾನಂತೆ ತನ್ನಾಶೆಗಳು ಬಿಡವಂತೆಕೋಶ ಸಾಕ್ಷಿಕನಂತೆ ಕೋಪ ತನಗಂತೆಪಾಶವಿಲ್ಲವದಂತೆ ಪಾಡುಪಂಥಗಳಂತೆಈ ಸಕಲ ತಾನಂತೆ ಇನ್ನು ವಿಧಿಯಂತೆ 4ಚೇತನವೆ ತಾನಂತೆ ಚಿತ್ತನಿಲ್ಲದುದಂತೆಪಾತಕಗಳಿಲ್ಲವಂತೆ ಪರಪೀಡೆಯಂತೆಜಾತಿಸೂತಕವೆಂಬ ಜಂಜಡಗಳಿಲ್ಲವಂತೆಮಾತಿನ ರಿಪು ಮತ್ಸರಗಳು ಬಿಡವಂತೆ 5ವಿಶ್ವಾತ್ಮತಾನೆಂಬ ವಿಶ್ವಾಸವುಂಟಂತೆವಿಶ್ವತ್ರೈಜಸರ ನಿಜವರಿಯನಂತೆನಶ್ವರದ ಭೋಗಂಗಳೆಂಬ ನಂಬಿಗೆಯಂತೆವಿಶ್ವಾದಿಗಳ ರೀತಿಯಲ್ಲಿ ಪಗೆಯಂತೆ 6ಅಂಡಪಿಂಡಗಳೈಕ್ಯವೆಂಬ ಬುದ್ಧಿಗಳಂತೆಚಂಡಾಲನಿವನೀತ ಮೇಲೆಂಬುದಂತೆಪಂಡಿತನು ಪ್ರವುಢ ತಾನೆಂಬ ಭಾಷೆಗಳಂತೆಕುಂಡಲಿಯ ಹೆಳವ ಕೇಳ್ದಡೆ ಕುದಿವನಂತೆ7ಚಿನ್ಮಯಾತ್ಮಕನು ತಾನೆಂಬ ಚಿಂತೆಗಳಂತೆತನ್ನವರು ತಾನೆಂಬ ಭ್ರಮೆಪೊಗದಂತೆಸನ್ಮುದ್ರೆಯಂತೆ ಸತ್ಯಾಸತ್ಯವೆರಡಂತೆತನ್ಮಯತೆಯಂತೆ ಲಕ್ಷಣೆಯರಿಯನಂತೆ 8ಗುರುಭಕುತಿಯಂತೆ ವರಕರುಣವಿಲ್ಲವದಂತೆಗುರುಶರಣನಂತವರನುಗೇಳನಂತೆಪರಮಪದ ತಾನಂತೆ ಪಿರಿದು ಸಂಶಯವಂತೆವರ ಮುಕ್ತಿಯಂತೆ ವಾಸನೆಯು ಬಿಡದಂತೆ 9ಈ ಪರಿಯ ಸಂಭಾವನೆಗಳ ಪರಿಹರಿಸಿ ಶ್ರೀಗೋಪಾಲಾರ್ಯ ಜನರಿಗೆ ದಯದಲಿತಾಪಂಗಳನು ಸವರಿ ದಾಟಿಸಯ್ಯಾ ಚಿತ್ಪ್ರತಾಪದಿಂ ನಿಜಪಾದ ಬೋಧೆಯನು ಕೊಟ್ಟು10
--------------
ಗೋಪಾಲಾರ್ಯರು
ದೇವಿ ಲಕ್ಷಣೆ ಎಮ್ಮ ಸಲಹ ಬೇಕಮ್ಮಭಾವದಲಿ ನೀನಿದ್ದು ಭಾವನಯ್ಯನ ತೋರೀ ಪ ಪಿತನು ಬೃಹತ್ಸೇನ ನಿನಗಾಗಿ ಸ್ವಯಂವರವಹಿತದಿಂದಲೆಸಗುತ್ತ ಲಕ್ಷ್ಯವನೆ ಬಿಗಿದೂ |ಅತಿಶಯದ ಧನುವಿಗೆ ಸಜ್ಜಿಸುತ ಬಾಣವನುಚತುರತೆಲಿ ಭೇದಿಪಗೆ ಸುತೆಯ ಪಣವೆಂದ1 ಮತ್ಸ್ಯ ಯಂತ್ರವಿದಲ್ಲಔಪಚಾರಿಕವೆಲ್ಲ ಸರ್ವವಿಧ ಛನ್ನಾ |ವೈಪರೀತ್ಯದಿ ದ್ವಾರ ಉಪರಿ ಇರುವುದು ಕೇಳಿಕಾಪುರುಷಗಿದು ಕಾಂಬ ಮಾರ್ಗವೇ ಇಲ್ಲ 2 ಸೂತನುತ ಮಾಗಧನು ಕೌತುಕದ ಕೌರವರುಪಾರ್ಥನೂ ಅವನಣ್ಣ ಭೀಮಸೇನಾ |ಆತು ಧನುವನು ಲಕ್ಷ್ಯ ಭೇದಿಸಲೆ ಬೇಕೆಂದುಪೃಥಿವಿಪರು ಮತ್ತಿತರು ಬಂದು ಸೇರಿದರು 3 ಸಜ್ಜುಗೈಯಲು 5ನುವ ಆರಿಂದಲಾಗದಿರೆಲಜ್ಯೆಯಿಂದಲಿ ಮರಳಿ 5ೀಗುವರೆ ಬಹಳ |ಅರ್ಜುನನು ತಾನೊಬ್ಬ ಲಕ್ಷ್ಯವೀಕ್ಷಣ ಶಕ್ತಅರ್ಜುನಾಗ್ರಜ ಹರಿಗೆ ಅಪರಾಧವೆನೆ ಸರಿದ 4 ನೆರೆದ ಸಭೆಯಲ್ಲಿ ಪುಷ್ಪಹಾರವನೆ ಪಿಡಿಯುತ್ತಬರುತ ವೈಯ್ಯಾರದಲಿ ಶಿರಿ ಕೃಷ್ಣ ಕಂಠದಲ್ಲಿ |ಇರಿಸಿ ಪರಮಾನಂದ ಭರಿತಳಾಗಲು ಹರಿಯುಕರಪಿಡಿದು ಹೊರವಂಟ ತನ್ನ ದ್ವಾರಕಿಗೇ 5 ಪರಿ ಪರಿ ಪುಷ್ಪ ವೃಷ್ಟಿಗಳ ಗರೆಯೇ |ದುರುಳರೆದುರಾಗಿ ಸಂಗರಕೆ ಬರುತಿರಲುಹರಿ ಭೀಮರೆದುರಿಸದೆ ದುರುಳರೋಡಿದರು 6 ಮೋದ ಬಡುವಂಥ |ಧೀವರರ ಮನೋಭೀಷ್ಟ ಪೂರ್ಣವನೆ ಗೈಯ್ಯುವನುದೇವ ಗುರು ಗೋವಿಂದ ವಿಠಲ ಕೃಪೆಯಿಂದ 7
--------------
ಗುರುಗೋವಿಂದವಿಠಲರು
ಪಕ್ಷಿವಾಹನ ಸತ್ಯಭಾಮೆ ಸದನದ್ವಾರದಿ ನಿಂತು ಸದನದ್ವಾರದಿ ಮಿತ್ರೆ ಎನಗೆ ಕದವ ತೆಗೆಯೆ ಬರುವೆ ತೀವ್ರದಿ 1 ಸಾಕೊ ಸಾಕೊ ನಿನ್ನ ಸಂಗ ಯಾಕೊ ಕೃಷ್ಣನೆ ನಮಗಿನ್ಯಾಕೊ ಕೃಷ್ಣನೆ ಅ- ನೇಕ ಸ್ತ್ರೀಯರಿಂದ ರಮಿಸ್ಹೋಗಾದಿ ಪುರುಷನೆ 2 ವಾಕು ವಾಕು ತಿಳಿಯದೊ ವಿ- ವೇಕದಿಂದ ನಿಂತು ಪೇಳೆ ಮಾತುಯೆನ್ನೊಳು 3 ಎನ್ನ ಬಿಟ್ಟು ಅನ್ಯಸ್ತ್ರೀಯರ ಮನೆಗೆ ಪೋಗುವಿ ಸ್ತ್ರೀಯರ ಮನೆಗೆ ಪೋಗುವಿ ಘನ್ನ ಘಾತಕತನದಿಂದಿಲ್ಲಿಗಿನ್ನು ಬರುವರೆ 4 ನಿನ್ನ ಸರಿಯಸವತೇರೆನಗೆ ಸತಿಯರಲ್ಲವೆ 5 ಅತ್ತಸಾಗೊ ರುಕ್ಮಿಣಿ ಒಲವು ಚಿತ್ತವ್ಹಿಡಿಯದೆ ಆಕೆ ಚಿತ್ತವ್ಹಿಡಿಯದೆ ಲೆತ್ತಪಗಡೆನಾಡದ್ಹೀಗೆ ಇತ್ತ ಬರುವರೆ6 ಕಾಳಕತ್ತಲು ಪ್ರಳಯಜಲದಿ ಕಾದುಕೊಂಡೆನ್ನ ಇರುವೋಳು ಕಾದುಕೊಂಡೆನ್ನ ಆದಿಲಕ್ಷ್ಮಿ ಮುನಿದರೆನಗಿನ್ನಾ ್ಹ್ಯಗೆ ಭಾಮಿನಿ 7 ಜಾಂಬುವಂತೇರ್ಹಂಬಲಬಿಟ್ಟು ಬಂದ ಕಾರಣ ನೀನು ಬಂದ ಕಾರಣ ಆ- ನಂದ ಬಡಿಸುತವರ ಗೃಹದಲ್ ಹೊಂದಿಕೊಂಡಿರು 8 ಜಾಂಬುವಂತೇರಿಂದ ಬಂದ ನಿಂದ್ಯ ಕಳೆದನೆ ನಾ ಅಪನಿಂದ್ಯ ಕಳೆದೆನೆ ತಂದು ರತ್ನತೋರಿ ನಿನ್ನ ತಂದೆ ಭಾಮಿನಿ 9 ಕಮಲನಾಭ ಕಾಳಿಂದಿ ಕಳವಳಿಸುವಳೊ ಕಾಣದೆ ಕಳವಳಿಸುವಳೊ ಕಾಣದೆ ಕಾಲಕಳೆಯೊದ್ಯಾ ್ಹಗಿನ್ನಾಕೆ ಆಲಯಕೆ ಪೋಗೊ 10 ಭಾಳ ತಪಸಿಲ್ವಲಿಸಿ ಭಾರ್ಯಳಾದ ಬಗೆ ನೀ ಅರಿಯದೆ 11 ನೀಲವರ್ಣ ನೀಲಾದೇವಿ ನಿನ್ನ ಕಾಣದೆ ಇರುವಳು ನಿನ್ನ ಕಾಣದೆ ಗಮನ ನಿಲ್ಲದೆ ನೀ ಪೋಗೊ 12 ಸಪ್ತಗೂಳಿ ಕಟ್ಟಿ ನಾ ಸಮರ್ಥನೆನಿಸಿದೆ ಬಲು ಸಮರ್ಥನೆನಿಸಿದೆ ನೀಲ ನನಗೆ ಶ್ರೇಷ್ಠಳಲ್ಲವೆ 13 ಎದ್ದು ಪೋಗಾಕಿದ್ದಸ್ಥಳಕಿಲ್ಲಿರಲು ಸಲ್ಲವೊ 14 ಅರಸರಾಕೆ ಅಗ್ರಜರೈವರು ಕರೆಸಿ ಕೇಳೋರೆ ಎನ್ನ ಕರೆಸಿ ಕೇಳೋರೆ ಹೋಗಿ ಹರುಷ ಬಡಿಸದಿರಲು ಆಕೆನ್ನರಸಿ ಅಲ್ಲವೆ 15 ಆಕೆ ಸಿಟ್ಟಿಲಿಂದ ದೃಷ್ಟಿತೆಗೆದು ಎನ್ನ ನೋಡಳೆ 16 ನಿನಗೆ ಇಷ್ಟು ಕ್ರೋಧ ನಿಷ್ಠೂರ್ವಚನ ಬ್ಯಾಡೆ ಭಾಮಿನಿ 17 ಲಕ್ಷಣ ದೇವೇರಲ್ಲಿ ಭಾಳಾಪೇಕ್ಷವಲ್ಲವೆ18 ನಾನು ಲಕ್ಷಣೆಯನೆ ತಂದೆ ಕೇಳೆ ಸತ್ಯಭಾಮೆ ನೀ 19 ಹತ್ತು ಆರು ಸಾವಿರ-ಶತ ಪತ್ನೇರಿಲ್ಲವೆ ನಿನಗೆ ಪತ್ನೇರಿಲ್ಲವೆ ತಿರುಗಿ ಸುತ್ತಿ ಸುತ್ತಿ ಹಾದಿ ಹೀಗೆ ತಪ್ಪಿಬರುವರೆ 20 ದಾರಮನೆಗೆ ಹೋಗಲೆನ್ನ ದೂರು ಮಾಡೋರೇ ಹೀಗೆ ದೂರು ಮಾಡೋರೇ ಸ್ವಾಮಿ ಪಾರಿಜಾತಕೊಟ್ಟ ಸತಿಯಲ್ಲೊ ್ಹೀಗಿರೆಂಬರೆ 21 ಸರಸವಾಡದಿರೊ ಶ್ರೀರಮಣ ಅರಸೇರ್ಯಾತಕೊ ನಿನಗೆ ಅರಸೇರ್ಯಾತಕೊ ಹರುಷದಿಂದ ಎರಗದೆನ್ನ ಶಿರಸಿದ್ಯಾತಕೊ 22 ಶ್ರೀಶ ಎನ್ನ ಮನದಲಿರೊ ಭೀಮೇಶಕೃಷ್ಣನೆ ಇರೊ ಭೀಮೇಶಕೃಷ್ಣನೆ ನಿನ್ನ ವಿಲಾಸ ಬಯಸದಿರುವರ್ಯಾರೊ ಇಂದಿರೇಶನೆ 23
--------------
ಹರಪನಹಳ್ಳಿಭೀಮವ್ವ
ವಿಶ್ವಪತಿ ಇಂದುಶೇಖರ ಸುರಮಸ್ತಕಮಣಿ ಮನ್ಮಥರಿಪುವೆ ವಿಸ್ತರಿಪೆನು ನಿಮ್ಮ ಮಹಿಮೆಯ ಜಗದೊಳು ಸ್ವಸ್ಥವಾಗಿ ಪ. ಎಲ್ಲಿ ನೋಡಲು ಲಿಂಗಮಯವು ಅಲ್ಲಿಗಲ್ಲಿಗೆ ತೀರ್ಥಯಾತ್ರೆಯು ಸೊಲ್ಲು ಸೊಲ್ಲಿಗೆ ಹರಮಹಾದೇವಂತೆಲ್ಲರು ಸ್ತುತಿಸುವರು ಬಲ್ಲವರು ಇದು ಭಾವಿಸಿ ಕಾಶಿಗಿಂತ ಮಹಿಮೆ ವೆಗ್ಗಳವಹುದೆನುತ ಸುಲಕ್ಷಣೆ ಶಿವಗಾತ್ರೆ ಶಿವನವಲ್ಲಭೆ ತ್ರಾಸಿನಲಿ ತೂಗುವಳು 1 ನಾಟಕದಿ ನಾನಾಜನ್ಮದಿ ಬಂದು ದಾಟದಂತರವನಳಿದನು ಚಂದ್ರ ಕೋಟಿತೀರ್ಥದಿ ಮಿಂದು ಮೈಯ ಕೋಟಲೆ ಸಂಸಾರಗಳೆಲ್ಲ ದಾಟಿದೆನು ಇನ್ನು ಜನನಮರಣಗಳೆಂಬೋಪಾಯಗಳಿಲ್ಲವು 2 ಕೂಪಾರದಲಿ ಬಂದು ಸೂಸುವ ತೆರೆಗಳು ಅಭ್ರದಿಂದಲಿ ಅಪ್ಪಳಿಸಲು ಉನ್ನತ ಭ್ರಮೆಗೊಂಡಿದ್ದ ಕರ್ಮದ ಬಲಿಗಳು ಮಿಗಿಲಾದವು ಉರ್ವಿಯೊಳಗುಳ್ಳ ಸಕಲನದಿಗಳನು ಗರ್ಭದಲಿ ಇಂಬಿಟ್ಟು ಮೆರೆದಂತಿಹ ಸರ್ಬಗೂಡಿಸುವ ಸಿಂಧುರಾಜನಲಿ ಮಿಂದು ನಿರ್ಭಯಳಾದೆನು 3 ಬಲಿದ ದನುಜನ ಭಾವಕ್ಕೆ ಮೆಚ್ಚಿ ಒಲಿದಷ್ಟವರವಿತ್ತ ಸಿಲುಕಲು ಸುಲಭನೆಂದು ಹೇರಂಬನೊಳಿತ್ತು ನೆಲೆಗೊಳಿಸಿ ಎಳೆದರೆ ಎಳೆಯಲೊಲ್ಲದೆ ಛಲವಿಡಿದ ಲಂಕಾಧಿಪತಿಯ ಅಹಂಕಾರ ವಳಿದು ಇಂದ್ರಾದಿಗಳಿಗೆ ವರವಿತ್ತ ಮಹಾಬಲಲಿಂಗನ ಕಂಡೆ 4 ಅನ್ನದಾ ಶತಶೃಂಗ ಪರ್ವತ ಪಶ್ಚಿಮದಿಂದ ಪಾತಾಳಗಂಗೆ ಸಹಿತಲಿ ಪ್ರ- ಸನ್ನನಾಗಿ ನಿಂದ ಚೆನ್ನ ಹೆಳವನಕಟ್ಟೆರಂಗನ ಪ್ರಿಯ ಪನ್ನಂಗಧರ ಪರಮಪವಿತ್ರ ಗೋಕರ್ಣೇಶನ ಕಂಡೆ ಪಾ- ವನವಾಯಿತು ಎಲ್ಲಾ ಕುಲಕೋಟಿಯು 5
--------------
ಹೆಳವನಕಟ್ಟೆ ಗಿರಿಯಮ್ಮ
(ಶ್ರೀಹರಿಯ ಷಣ್ಮಹಿಷಿಯರ ಸ್ತುತಿ)ಹರಿಮಾನಿನಿಯರಾರು ಮಂದಿಸುಪ್ರವೀಣೆ ಲಕ್ಷಣೆ ಕಾಳಿಂದಿಜಾಣೆ ಸಖಿವಿಂದೆ ಜಾಂಬವತಿಯರಿಗೆನಾ ನಮಿಸುವೆ ಮನದೊಳಗೆ 1ತಮ್ಮ ಪತಿಯರಿಂದೊಡಗೂಡಿಮನ್ಮಾನಸಮಂ ಮನೆಮಾಡಿನಿರ್ಮಲ ಬುದ್ಧಿಯ ಪ್ರೇರೇಪಿಸಲಿಸುಮ್ಮಾನಪಾಲಿಸಲಿ2ಭಕ್ತಿ ವಿರಕ್ತಿ ಜ್ಞಾನ ಮ-ಚ್ಚಿತ್ತದೊಳಿರಲಿ ಧ್ಯಾನಕರ್ತಲಕ್ಷ್ಮೀನಾರಾಯಣನ ನಾಮ-ಕೀರ್ತನೆಗೈವುದೆ ನೇಮ 3ದುರ್ಗಾದೇವಿಯ ಸ್ತುತಿ
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ