ಕೂಸಿನಲ್ಲಿ ಬಾಲಕೃಷ್ಣ ಕೇಶವಾರ್ಯ ಪುತ್ರನಲ್ಲಿವಾಸಮಾಡಿ ಸತತ ಮನವ ಪೋಷಿಸೂವನು 1
ತರುಣಿಯಲ್ಲಿ ಮಾಧವವಿರುವ ಶರಣರೊಳಗೆ ವಸುದೇವನರಿತು ತೋಷಿಸುವುದು ಸತತ ಹರುಷದಿಂದಲೀ 2
ವಾಸುದೇವ ಖಗವರೇಣ್ಯನು 3
ದಿವಿಜ ನಾರಾಯಣನು ವಸ್ತಿ ಮಾಡಿಹನು4
ಸುರಭಿಯಲ್ಲಿ ವಿಷ್ಣುರೂಪಿ ತುರಗದಲ್ಲಿ ವಾಮನಾತ್ಮಇರುವ ಸಂಕರ್ಷಣಾಖ್ಯ ಚರಮ ಜಾತಿಯಲೀ 5
ನಿತ್ಯ ವೈಶ್ಯ ಪ್ರದ್ಯುಮ್ನಭೃತ್ಯರಲ್ಲಿ ಮಹಿದ್ರಾಸ ಕೃತ್ಯ ನಡೆಸುವಾ 6
ಮಹಿಷಿಯಲ್ಲಿ ಉಪೇಂದ್ರ ಗಜದಲ್ಲಿ ಚಕ್ರಪಾಣಿಬೆಕ್ಕಿನಲ್ಲಿ ವಿಶ್ವರೂಪ ಸತತ ತಿಳಿವುದೂ 7
ಶುನಕ ಭೂತ ಭಾವನಸರ್ವರೊಳಗೆ ಅನಂತರೂಪ ಹರಿ ನಿವಾಸಿಪ 8
ನಿತ್ಯದಲ್ಲಿ ಹರಿಯು ಹೀಗೆ ಚಿತ್ತವಿಟ್ಟು ಲಕ್ಷಣೀಯುವರ್ತಿಸುತಲಿ ಯದುವರೇಣ್ಯನ ಪತ್ನಿಯಾದಳು 9
ಪರಮಪುರುಷನಮಲ ರೂಪ ಸ್ಮರಿಸುತಲೆ ಪೋಷ್ಯರಲ್ಲಿತೊರೆದು ಕರ್ಮಲೇಪ ಶಿರಿಯ ಹೋದುವಾ 10 ನಂದಸುತನ ತಿಳಿದು ಪೋಷ್ಯ ವೃಂದದಲ್ಲಿ ಭೋಗ ನೀಡಿಇಂದಿರೇಶ ನಮಗೆ ಮೋಕ್ಷಾನಂದ ಕೊಡುವನು 11