ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇರಬಾರದೊ ಬಡವ ಜಗತ್ತಿನೊಳಗೆ | ಪರದೇಶಿ ಮಾನವಗೆ ದಿಕ್ಕು ಮತ್ತಾವನು ಪ ಪೊಡವಿಪತಿ ದೃಷ್ಟಿಗಳು ಒಳ್ಳೆವಲ್ಲಾವೆಂದು | ಬಿಡದೆ ಜನ ಪೇಳುವುದು ಸಿದ್ಧವಯ್ಯಾ | ಬಡವ ನಾನಯ್ಯ ನಾನಾ ಕಷ್ಟಬಟ್ಟೆರಡು | ಒಡವೆ ಸಂಪಾದಿಸಲು ಅಪಹರಿಸಿದ ನೋಡು 1 ದಿನ ಪ್ರತಿ ದಿನದಲ್ಲಿ ಕರಳು ಕಟ್ಟಿಕೊಂಡು | ಹಣದಾಸಿಯಿಂದ ನಾ ಘಳಿಸಿದ್ದೆನೊ | ಮನೆವುಗೆ ಬಂದು ಮಾಡಿಕೊಂಡೊಯ್ದಿಯಾ ಧರ್ಮವೇ | ವನಜನಾಭನೆ ನಿನ್ನ ದೊರೆತನಕೆ ಶರಣೆಂಬೆ2 ದೊರೆಗಳಾ ಲಕ್ಷಣವಿದೆ ಎಂದೆಂದಿಗೆ ತಮಗೆ | ಸರಿಬಂದ ಕಾರ್ಯಮಾಡುವರಲ್ಲದೇ | ನೆರೆಯವರದೇ ತಪ್ಪೇ ವಿಜಯ ವಿಠ್ಠಲರೇಯ | ಮರಳೆ ಮಾತಾಡಿದರೆ ಅಪರಾಧ ಹೊರಿಸುವರು 3
--------------
ವಿಜಯದಾಸ
ಯೋಗಿಯ ಲಕ್ಷಣವಿದೆಯೋಗಿಯ ಲಕ್ಷಣ ತಿಳಿಯದಡೆ ಇವನಿಂತು ಬಲ್ಲಪಮೌನವೆಂಬುದು ಬಹಳ ಏನೇನೆಂದರು ಕೇಳಕಾನನವೊಂದೇ ಊರು ಒಂದೇ ತಾನೆಂಬುದು ಢಾಳಹೀನವಾದವ ಕೇಳ ತಾನು ಈ ಪರಿಯಲಿಹಯೋಗಿ1ಮಾತಾಡೆ ಮಾತಿಲ್ಲ ಯಾತರ ಗೊಡವೆಯಿಲ್ಲಭೂತ ಹೊಡೆದಂತೆ ಸುಮ್ಮನಿಹನುಭೀತಿಯ ತಾನಿಲ್ಲ ಈ ತೆರದಲಿ ತಾನಿರುತಿಹಯೋಗಿ2ಎದ್ದರೆ ಎದ್ದಿಹ ಬಿದ್ದರೆ ಬಿದ್ದಿಹನಿದ್ದೆಯು ಯಾವಾಗಲು ಕಟ್ಟಿಹುದುಬುದ್ಧಿಯ ಮಾತಿಲ್ಲ ಬುದ್ಧಿಯವರ್ಜಿಸಿಹಇದ್ದು ಈ ತೆರದಿ ತಾನಿದ್ದು ಇರುತಿಹಯೋಗಿ3ಶರೀರದ ಸ್ಮರಣೆಯಿಲ್ಲ ಶ್ರೇಷ್ಠ ಭಾವಗಳಿಲ್ಲಪೋರರ ಕಂಡರೆ ಪೋರರಂತೆಮಾರನ ಬಾಧೆಯಿಲ್ಲ ಮಹಾಕೋಪಗಳಿಲ್ಲಧೀರತನದಲಿಂತು ಇರುತಿಹಯೋಗಿ4ಹೊರಗಿಂತು ತೋರಿಹನು ಹೃದಯದ ಪರಿಯನ್ನುಅರಿವೆನೆಂದರೆ ಅರಿಗಳವಲ್ಲವೋಇರುಳು ಹಗಲು ಚಿದಾನಂದ ಮೂರುತಿಯನುಸ್ಥಿರವೀಗ ತಾನಂದುನಿತ್ಯಬೆರತಿಹನು5
--------------
ಚಿದಾನಂದ ಅವಧೂತರು