ನಿತ್ಯ ಶುಭಮಂಗಳಂ ಪ.
ವಸುದೇವತನಯನಿಗೆ ವೈಕುಂಠನಿಲಯನಿಗೆಕುಸುಮನಾಭನಿಗೆ ಕೋಮಲರೂಪಗೆಯಶೋದೆನಂದನಗೆ ವಸುಧೆಯ ರಮಣನಿಗೆನಸುನಗೆಯೊಳೊಪ್ಪುವ ನರಸಿಂಹಗೆ1
ಕೌಸ್ತುಭ ಹಾರಗೆಕನಕಾಂಬರಧರನಿಗೆ ಕಾರುಣ್ಯರೂಪನಿಗೆಸನಕಾದಿ ಮುನಿವಂದ್ಯ ನರಸಿಂಹಗೆ2
ಪಂಕಜನಾಭನಿಗೆ ಪಾಂಚಾಲಿರಕ್ಷÀಕಗೆಲಂಕೆಯನು ವಿಭೀಷಣನಿಗಿತ್ತವಗೆಕುಂಕುಮಾಂಕಿತನಿಗೆ ಕುವಲಯನೇತ್ರನಿಗೆಬಿಂಕದಿಂದಲಿ ಮೆರೆವ ನರಸಿಂಹಗೆ 3
ಪಕ್ಷಿವಾಹನನಿಗೆ ಪರಮಪಾವನನಿಗೆಕುಕ್ಷಿಯೊಳು ಜಗವನಿಂಬಿಟ್ಟವನಿಗೆಲಕ್ಷುಮೀಕಾಂತನಿಗೆ ಲಕ್ಷಣವಂತನಿಗೆಲಕ್ಷಣದೊಳೊಪ್ಪುವ ನರಸಿಂಹಗೆ4
ಭಕ್ತವತ್ಸಲನಿಗೆ ಭವದುಃಖದೂರನಿಗೆಮುಕ್ತಿದಾಯಕಗೆ ಚಿನ್ಮಯರೂಪಗೆಮಿತ್ರೆರುಕ್ಮಿಣಿ ಸತ್ಯಭಾಮೆಯರರಸನಿಗೆನಿತ್ಯಕಲ್ಯಾಣ ಶ್ರೀಹಯವದನಗೆ 5