ದಯದಿ ಎಮ್ಮನು ಸಲಹ ಬೇಕಯ್ಯ | ಮಳಖೇಡ ನಿಲಯ ದಯದಿ ಎಮ್ಮನು ಸಲಹ ಬೇಕಯ್ಯ ಪ
ದಯದಿ ಎಮ್ಮನು ಸಲಹ ಬೇಕೈ | ವಿಯದಧಿಪ ಸದ್ದಂಶ ಸಂಭವ ಭಯ ವಿದೂರನ ತೋರು ಎನುತಲಿ | ಜಯ ಮುನೀಂದ್ರನೆ ಬೇಡ್ವೆ ನಿನ್ನನು ಅ.ಪ.
`ಇಂದ್ರಸ್ಯನು ವೀರ್ಯಾಣ’ ಎಂದೆನುತ | ಇತ್ಯಾದಿಋಕ್ಕುಗಳಿಂದ ಬಹುತೆರೆ ನೀನು ಪ್ರತಿಪಾದ್ಯ ||ಅಂದು ಮೇಘದ ಜಲವು ಬೀಳದೆ | ಬಂಧಗೈದಹಿನಾಮ ದೈತ್ಯನಕೊಂದು ಉದ್ಧರಿಸಿರುವ ಪರಿಯಲಿ | ಮುಂದೆ ದುರ್ವಾದಿಗಳ ಖಂಡಿಪೆ 1
ವಾಲಿಯಂದದಿ ದೃಷ್ಟಿಮಾತ್ರದಲಿ | ಶತೃಗತಬಲಲೀಲೆಯಿಂದಪಹರಿಪೆ ನಿಮಿಷದಲಿ ||ಕಾಲ ತ್ರೇತೆಯಲಂದು ದುಷ್ಟರ | ವಾಲಿರೂಪದಿ ವಾರಿಸಿದ ಪರಿಕಾಲ ದ್ವಾಪರದಲ್ಲಿ ಪ್ರಾರ್ಥನೆ | ಲೀಲೆ ರೂಪಿಯು ಕೃಷ್ಣಸೇವಕ 2
ದೃಷ್ಟಿ ಮಾತ್ರದಿ ಕರ್ಣಗತ ಬಲವ | ಅಪಹರಿಸಿ ನೀನುಕ್ಲಿಷ್ಟ ಯುದ್ಧದಿ ಗಳಿಸಿ ನೀ ಜಯವ ||ಶ್ರೇಷ್ಠ ಕರ್ಣನ ಅಸುವ ಕೊಳ್ಳುತ | ಸುಷ್ಠು ಅರಿಬಲ ನಾಶಮಾಡುತಭ್ರಷ್ಟ ಕೌರವನೀಗೆ ದುಃಖದ | ಕೃಷ್ಣಗರ್ಪಿಸಿ ಕೈಯ್ಯ ಮುಗಿದೆಯೊ 3
ಕಾಲ ಕಲಿಯುಗದಲ್ಲಿ ಬಲ ಭೀಮ | ಮಧ್ವಾಭಿಧಾನದಿಮೂಲ ಮೂವತ್ತೇಳು ಸೂನಾಮ ||ಭಾಳ ಗ್ರಂಥಗಳನ್ನೆರಚಿಸೀ | ಕಾಲಟಿಜಕೃತಮಾಯಿ ಮತವನುಲೀಲೆಯಿಂದಲಿ ಖಂಡಿಸುತ್ತ | ಪಾಲಿಸುತ್ತಿರೆ ಸುಜನರನ್ನು 4
`ವೃಷಾಯ ಮಾಣೆಂಬ` ಋಕ್ಕಿನಲಿ ದೇವ ಇಂದ್ರಗೆವೃಷಭದಾಕೃತಿ ಪೇಳಿಹುದು ಅಲ್ಲಿ ||ವೃಷಭ ನೀನಾಗಂತೆ ಕಲಿಯಲಿ | ಎಸೆವ ಶ್ರೀ ಮನ್ಮಧ್ವ ಗ್ರಂಥದಹಸಿಬೆ ಚೀಲವ ಹೊತ್ತು ತಿರುಗುತ | ಅಸುಪತಿಯ ಸೇವಿಸಿದ ಮಹಿಮ5
ಅಗಸ್ತ್ಯ ಮುನಿ ಸಕಲ ತೀರ್ಥಗಳ | ಸಂಗ್ರಹಿಸಿ ಕರದಿಸಾಗಿ ಗಿರ್ಯಾನಂತ ಕಮಂಡೂಲ ||ವೇಗ ಕೆಳಗಿಟ್ಟಾಚಮನ ಅಲ್ಪ | ಕಾಗಿ ಸ್ವಲ್ಪವುದೂರ ಪೋಗಲುಕಾಗೆ ರೂಪದಿ ಬಂದು ಇಂದ್ರನು | ವೇಗ ಉರುಳಿಸೆ ಜಲವು ಹರಿಯಿತು 6
ದೆವರಾಜನು ಕಾಣಿಸಿ ಕೊಳಲು | ಮುನಿಯು ಆಕ್ಷಣದೇವ ಕಾರ್ಯದ ಭಾವ ತಿಳಿಯಲು ||ಓವಿ ತತ್ಕಾಗಿಣಿಯ ನಾಮದಿ | ಭೂವಲಯದೊಳ್ಬಾತಿಸಲಿ ಎನೆತೀವರಾಶೀರ್ವಾದ ದಿಂದಲಿ | ಪಾವನವು ತತ್ ಕ್ಷೇತ್ರ ವಾಯಿತು 7
ಪಾಂಡು ಮಧ್ಯಮನಾದ ಅರ್ಜುನನು | ಇಲ್ಯುದಿಸಿ ಪೊತ್ತಧೋಂಡು ರಘುನಾಥ ಪೆಸರನ್ನು || ಗೊಂಡು ನಾಯಕ ತನವ ಅಶ್ವಕೆ | ಅಂಡಲೆದು ಬರುತಿಲ್ಲಿ ಬಿಸಿಲಲಿ ಉಂಡು ಉಂಬುದ ಜಲವ ಪಶುಪರಿ | ಕಂಡು ಮುನಿ ಅಕ್ಷೋಭ್ಯ ಬೆಸಸಿದ 8
ಸ್ವಪ್ನ ಸೂಚಿಸಿದಂತೆ ಮುನಿಶ್ರೇಷ್ಠ | ನೀರ್ಗುಡಿದವ ನರೆ ಬಪ್ಪುವನು ತಮ ಪೀಠಕೆನ್ನುತ್ತ || ಸ್ವಲ್ಪ ಹಾಸ್ಯದಿ ಪಶುವು ಪೂರ್ವದಿ | ಒಪ್ಪುವೆಯಾ ನೀನೆನ್ನ ಸಾದಿಗೆ ನೆಪ್ಪು ಬಂದುದು ವೃಷಭ ಜನ್ಮದಿ | ಕೃಪ್ಪೆಗೈದಿಹ ಮಧ್ವರನುಗ್ರಹ 9
ಸಾದಿ ಭೂಪನು ಕಳುಹಿ ತನ್ನ ಸೈನ್ಯ | ಅಕ್ಷೋಭ್ಯ ಮುನಿಪರ ಪಾದಕೆರಗುತ ಆಶ್ರಮವು ತುರ್ಯ ||ಮೋದದಿಂದ್ಯಾಚಿಸಲು ಮುನಿವರ | ಆದಿಯಿಂದಲಿ ಬಂದ ಪೀಠಕೆಸಾದರದಿ ಪಟ್ಟಾಭಿಷಕ್ತನ ಗೈದು ಆಶೀರ್ವಾದ ಮಾಡಿದ 10
ಸುತನು ತುರ್ಯಾಶ್ರಮವ ಪೊತ್ತುದನ | ಕೇಳುತ್ತ ತಂದೆಅತುಳ ಕೋಪದಿ ನಿಂದಿಸಿದ ಮುನಿವರನ |ಸುತನ ಗೃಹ ಕೆಳತಂದು ಪತ್ನಿಯ | ಜೊತೆಯಲಿಡೆ ಏಕಾಂತ ಗೃಹದಲಿಅತುಳ ಸರ್ಪಾ ಕೃತಿಯ ಕಾಣುತ | ಭೀತಿಯಲಿ ಚೀರಿದಳು ಕನ್ಯೆಯು11
ಸೋಜಿಗದ ತನಯನ್ನ ಕೊಳ್ಳುತ್ತ | ಮುನಿವರರ ಬಳಿಗೆ ಯೋಜಿಸೀದನು ಕ್ಷಮೆಯ ಬೇಡುತ್ತ ||ಆರ್ಜವದ ಮುನಿ ಕ್ಷಮಿಸಿ ತಂದೆಯ | ಮಾಜದಲೆ ತಮ್ಮ ಶಿಷ್ಯಭೂಪಗೆಯೋಜಿಸಿದರನ್ವರ್ಥನಾಮವ | ಶ್ರೀ ಜಯಾಭಿಧ ತೀರ್ಥರೆನ್ನುತ 12
ಪರ ಕರಿ ಹರ್ಯಕ್ಷರಾದಿರಿ 13
ಮಧ್ವಭಾಷ್ಯಕೆ ಟೀಕೆ ರಚಿಸುತ್ತ | ಯರಗೋಳ ಗುಹೆಯಲಿಶುದ್ಧ ಭಾವದಿ ಇರಲು ಮದಮತ್ತ ||ವಿದ್ಯ ಅರಣ್ಯಭಿಧ ನೋಡೀ | ಮಧ್ವಕೃತ ಸನ್ಮಾನ ಲಕ್ಷಣಬುದ್ಧಿಗೇ ನಿಲುಕದಲೆ ಟೀಕೆಯ | ಪದ್ಧತಿಯ ಕಂಢರ್ಷಪಟ್ಟನು 14
ಮಾಧ್ವಭಾಷ್ಯವ ನೇರಿಸಿ ಗಜವ | ತಟ್ಟೀಕೆ ಅಂತೆಯೆಅದ್ಧುರೀಯಲಿ ಗೈದು ಉತ್ಸವವ ||ವಿದ್ಯವನ ಮುನಿಪೋತ್ತುಮನು ಬಹು | ಶುದ್ಧಭಾವದಿ ಗೈದು ಸಂತಸಬುದ್ಧಿಯಲಿ ಪರಿವಾರ ಸಹಿತದಿ | ಸದ್ದುಯಿಲ್ಲದೆ ಪೋದನಂದಿನ 15
ಹತ್ತೆರಡು ಮತ್ತೊಂದು ಕುಭಾಷ್ಯ | ವಿಸ್ತರದಿ ಖಂಡಿಸೆಕೃತ್ಯವೂ ಮಧ್ವಕೃತವನುವ್ಯಾಖ್ಯಾ ||ಮತ್ತಿದಕೆ ಸೂಧಾಖ್ಯ ಟೀಕವ | ವಿಸ್ತøತವು ನಿಮ್ಮಿಂದ ಜಯಮುನಿಮೊತ್ತದಿಂಧ್ಹತ್ತೆಂಟು ಗ್ರಂಥಕೆ | ಕೃತ್ಯವಾಯಿತು ನಿಮ್ಮ ಟೀಕೆಯು16
ಪಾದ ಪಾದ ತೋರ್ವುದು ||