ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನೋಡಿದೆ ಗೋವಿಂದನಾ ಸರ್ವ ಸುಂದರಸಾರ ವೆಂಕಟ ರಮಣನಾ ಪ ಭಾಗೀರಥಿಯ ಪೆತ್ತವನಾ ಭವ ರೋಗವ ಕಳೆವ ರಾಜೀವನೇತ್ರನಾ ಸಾಗರದೊಳಗೆ ಒಪ್ಪುವನಾ ಭಕ್ತ ಕೂಗಲು ನಿಲ್ಲದೆ ಒದಗಿ ಬರುವನಾ1 ನಿಲ್ಲದೆಳಿಪಿಗೆ ಪೊಳೆದನಾ ಗೋ ಪಾಲಕರಿಗೆ ವೈಕುಂಠ ತೋರಿದನಾ ನೀಲಾದೇವಿಗೆ ಬಲಿದವನಾ ಭೂ ಪಾಲಗೆ ಮೆಚ್ಚಿ ಸತ್ವರವನಿತ್ತವನಾ2 ವಿಶ್ವ ಮಂಗಳದಾಯಕನಾ ಅಹಿ ವಿಷ್ಟಕಸೇನರಿಂದ ಪೂಜೆಗೊಂಬುವನಾ ವಿಶ್ವರೂಪ ವಿಲಕ್ಷಣನಾ ಸರ್ವ ವಿಶ್ವ ಪರಿಪಾಲ ಪ್ರಣತಾರ್ತಿ ಹÀರನ3 ಸುರ ಶಿರೋಮಣಿ ಸದ್ಗುಣನಾ ಸು ದರಶನ ಶಂಖ ಭಜಕರಿಗೆ ಕೊಟ್ಟವನಾ ನಿರುತ ಆನಂದ ಭರಿತನಾ ದಿವ್ಯ ಮಿರುಗುವಾಭರಣದಿಂದಲಿ ನಿಂದಿಹನಾ 4 ಶಾಮವರ್ಣ ಚತುರ್ಭುಜನಾ ನಿಜ ಕಾಮಿನಿ ಸಂಗಡ ನಲಿದಾಡುವನಾ ಹೇಮ ಗಿರಿಯಲಿದ್ದವನಾ ದೇವ ಸ್ವಾಮಿ ತೀರ್ಥವಾಸ ವಿಜಯವಿಠ್ಠಲನಾ5
--------------
ವಿಜಯದಾಸ
ಇಂದು ಸಾರ್ಥಕವಾಯಿತು ಎನ್ನ ಜನನಾ ಚಂದ್ರ ಪುಷ್ಕರಣಿಯ ವಾಸ ರಂಗನ್ನ ಕಂಡು ಪ ಸುತ್ತೇಳು ಪ್ರಾಕಾರಗೋಪುರ ಮಹಾದ್ವಾರ ರತ್ನದ ಕವಾಟ ತೋರಣಗಳು ಕತ್ತಲೆ ಹರನಂತೆ ಕಣ್ಣಿಗೆ ತೋರುತಿದೆ ತುತ್ತಿಸಲಳವೆ ಅನಂತ ಜನುಮಕೆ 1 ಸಾಲು ಬೀದಿಗಳು ಒಂದೊಂದರ ಮಧ್ಯದಲಿ ಸಾಲು ಮಂಟಪ ಮುತ್ತಿನ ಚಪ್ಪರಾ ಕೀಲುಮಣಿಗಳಿಂದ ಬಿಗಿದ ಸೊಬಗು ಹೊಂ ಬಾಳೆಸ್ತಂಭಗಳೆಡಬಲದಲ್ಲಿ ಒಪ್ಪಲು 2 ಮುಂದೆ ಗರುಡಗಂಭ ಪವಳದ ಗವಾಕ್ಷಿ ಹಿಂದೆ ನೆರೆದ ಬಲು ಪರಿಯಂಗಡಿ ಸಂದಣಿಯಿಂದ ಭೂಸುರರು ಸ್ತೋತ್ರವ ಪೇಳೆ ಒಂದೊಂದು ಬಗೆಯಲ್ಲಿ ವಂದಿಸುವುದು ಕಂಡು 3 ಚಂದನ್ನನಿಂದೆ ಪೋಗಾಡಿದ ಸರೋವರ ಒಂದು ಸುರವನ್ನೆ ವೃಕ್ಷದಲ್ಲಿ ಮಿಂದು ಸಜ್ಜನರು ಕೈಗಳ ಮುಗಿದು ನಮೊ ಎಂದು ಕೊಂಡಾಡುವರು ವೇಗದಲ್ಲಿ 4 ಪ್ರಣವಾಕಾರವಾದ ವಿಮಾನ ಅದರ ಮೇಲೆ ಮಿನುಗುವ ವಾಸುದೇವಾದಿಗಳ ಮನದಣಿಯ ಕೊಂಡಾಡಿ ಮುದದಿಂದ ಪಾಡುತ್ತಾ ಫಣಿ ತಲ್ಪನಾಥ ಶ್ರೀ ಪರಮಪುರುಷನ ಕಂಡು 5 ಕಮಲಾಕ್ಷ ಕುಳಿರತೆರದಿ ಕದಪು ಕರ್ಣ ಕುಂಡಲ ಉರದಲ್ಲಿ ಕೌಸ್ತುಭ ಹಾರ ಪದಕ ಪಾವನ ಪಾದಾ6 ನಸುನಗೆ ಚತುರ್ದಶ ಲೋಕವ ಬಿಸಜ ಕರಗಳು ಭೂಷಣದಿಂದಲಿ ಬಿಸಜ ಭವನ ಪಡೆದು ನಾಭಿ ವಸನಕಟಿ ಮಿಸುಣಿಪ ವಡ್ಯಾಣ ಸರ್ವ ಲಕ್ಷಣನಾ 7 ಕಾಲ ಕಡಗ ಪೆಂಡೆ ಪೊಂಗೆಜ್ಜೆ ಅಂದಿಗೆ ವಾಲಾಯ ಪದತಳದಲಿ ರೇಖೆ ವಾಲಗ ಸಿರಿದೇವಿ ಪ್ರೀತಿಯಿಂದಲೆ ಮಾಡೆ ಸುರರು ಸಮ್ಮುಖದಲಿ ನುತಿಸೆ 8 ಉಭಯ ಕಾವೇರಿ ನಡುವೆಯಿದ್ದು ದಕ್ಷಿಣ ಅಭಿಮುಖವಾಗಿ ಪವಡಿಸಿದ ವಿ ಭೀಷಣದ ವರದ ರಂಗ ಮಂದಿರ ನಿಲಯಾ ವಿಬುಧೇಶ ವಿಜಯ ವಿಠ್ಠಲ ರಂಗನ ಕಂಡು9
--------------
ವಿಜಯದಾಸ