ಅವತಾರತ್ರಯ
ಅಕ್ಷಯ ನೀನಾಮೃತಂ ಕುಕ್ಷಿಯೊಳಗೆ ಪೂರ್ಣವಾಗಿಹ
ಅಕ್ಷಯಾಂತಕನೀಕ್ಷಿಪುದು ಸುಜನರು ಪ
ಇಕ್ವಾಕು ಕುಲಾಧ್ಯಕ್ಷ ರಾಘವನಾ ಶಿಕ್ಷೆಯಲಿ ಪ್ರಾಣ
ರಕ್ಷಕನೆÉಂದರುಹಲು ಧರೆಗೆ ತಕ್ಷಣದಿ ಮರುದ್ವಾಕ್ಷ
ಮರಕಟ ಕೃತಿಯ ತೋರಿ ಜಲಧಿಯನೆ ಪಾರಿ
ರಕ್ಷಕೇಂದ್ರನ ಪುರಸೇರಿ ರಕ್ಕಸಿಯದೆಡೆಯಲಿ ಜನನಿಗೊಂದಿಸಿ
ಲಕ್ಷಣದುಂಗುರವ ತೋರಿ ರಕ್ಷಸದಕ್ಷರವನಳಿದಾ 1
ಯದುಕುಲದೊಳುದಯಿಸೆÉ ಹರಿಯು
ತದನರಿತು ವಾಯು ಉದಭವಿಸಿ ಭೀಮಾಭಿಧಾನದಿ
ಮುದಗೊಳಿಸಲಿಳೆಗೆ ಕುದಿಯುವ ಬಕ ಹಿಡಿಂಬರರಳಿದು
ಕೀಚಕನ ಸದೆದು ಅಧಮಕಾರವ ಕುಲವನಳಿದು
ವಧಿಸಿzಖಿಲ ಬಲವ ತೋರಿ ಮುದವ ಬೀರಿ ಧರೆಯ ಜನಕೆ
ಯಶವ ಗಳಿಸಿದವನ ಇಹಕೆ ಚರಕೆ2
ಗುರುವಾಗವತರಿಸಿ ಧರೆಯ ಸುಜನರು
ಕರುಣಾಬ್ಧಿ ಹರಿಯು ಧರೆಯೊಳುಡುಪಿ ಪುರದಿ ಜನಿಸಲಿ
ಸುರರಿಗೆ ತಿಳಿಯಲು ಹರಿಯ ಮತವ ಸೃಜಿಸಲಿಳೆಯಲು
ತದಾಜ್ಞೆಯ ಕೇಳಲು ಭರದಿ ಮಧ್ವನಾಮ ಪಡೆದು
ಹರಿಮತವ ಪಿಡಿಯ ಬೋಧಿಸಲು
ನರಸಿಂಹವಿಠಲನ ಸ್ಮರಣೆಯಗೈದು
ನರಜನ್ಮ ಸಾರ್ಥಕವು ಪರಮಪದವ ಗೈದು 3