ಕಾವ ಜನಕ ನೀನಿರುತಿರಲೆನಗಿ
ನ್ನಾವ ಬಂಧುವು ಬೇಕೊ ಮಾಂಗಿರಿಯ ರಂಗ ಪ
ದೇವ ನೀನಲ್ಲದೆ ಲಕ್ಷಜೀವಿಗಳಿದ್ದು
ಈವ ಸೌಖ್ಯವು ಬೇಡ ಮಾಂಗಿರಿಯ ರಂಗ ಅ.ಪ
ನಾರಿಯ ಮಾನಾಪಹಾರವ ಗೈದಾಗ
ವೀರರೈವರು ತಮ್ಮ ಮೋರೆಯ ತೋರ್ದರೆ
ನೂರುಮಂದಿ ವೇದಪಾರಂಗತರಿದ್ದು
ಕ್ರೂರ ಕಾರ್ಯಂಗಳ ನಿಲಿಸಿದರೆ ರಂಗ 1
ಮೂವತ್ತುಮೂರುಕೋಟಿ ನಿರ್ಜರರಿದ್ದು
ರಾವಣನೊಬ್ಬನ ಜೈಸಿದರೆ
ಪಾವಕ ಹಸ್ತವನಿತ್ತ ಗಿರೀಶನ
ದೇವಗಣೇಶ್ವರರುಳಿಸಿದರೇ 2
ಅರಕ್ಷಿತವಾದುದ ಸುರಕ್ಷಿತ ಗೈವೆ
ಸುರಕ್ಷಿತವಾದುದಕ್ಷಯ ಗೈವೆ
ನಿರಕ್ಷರಕುಕ್ಷಿಗೆ ಮೋಕ್ಷವ ನೀನೀವೆ
ದುರಿತಕ್ಷಯ ಗೈದು ಪಾಲಿಸುವೆ 3