ಭಾರತೀಶ ಕರುಣಾರಸ ಭೂಷಾ
ಖರಾರಿ ದಯಾರಸ ಪೂರಿತ ವೇಷಾ ಪ.
ಅಕ್ಷಪೂರ್ವಜನ ರುಕ್ಷಶರಾಹತಿ ವಿಕ್ಷತಕಪಿಗಳನೀಕ್ಷಿಸುತ
ರೂಕ್ಷನ ನುಡಿ ಕೇಳ್ದಾಕ್ಷಣದೊಳಗರೆಲಕ್ಷಯೋಜನಕೆ ಲಂಘಿಸುತ
ಕರತಲದೊಳಗಿಡುತ
ಅಕ್ಷಿನಿಮೋಘಕೆ ಲಕ್ಷಕೊಡದೆ ನಿಜಪಕ್ಷದ ಜನರನು ರಕ್ಷಿಸಿದ 1
ಸೇರಿ ದುರಾಕೃತ ಕೌರವರ
ಧಾರುಣಿಗೊರಗಿಸಿ ಘೋರ ರೂಪ ಕಿಂಮೀರನ ರಕ್ತನ ಕಾರಿಸುತ
ಭಾರಿಗದೆಯ ಪಿಡಿದಾರುಭಟಿಸಿ ಬಹುವಾರಣ ತತಿಗಳ ಹಾರಿಸುತ
ವೀರಜಗಧೀರಣ ಮೂರ್ತೆ 2
ಹಿಂಡುಗೂಡಿದಾ ಖಂಡಲ ರಿಪುಗಳು ಖಂಡ ಪರಶುಹರಿತಾನೆನುವ
ಭಂಡಮಾತ ಭೂಮಂಡಲ ಮಧ್ಯದಿ ಪುಂಡುತನದಿ ಪ್ರಸ್ತಾಪಿಸುವ
ಪಂಡಿತ ಮಾನಿಗಳೆನಿಸಿದ ಮೈಗಳ ಖಂಡಿಸಿ ತತ್ವವ ಬೋಧಿಸುವ
ಬ್ರಹ್ಮಾಂಡಕೋಟಿಪತಿಯನುತಿರುವ 3