ಶ್ರೀಹರಿ ಕೃಪೆಮಾಡಯ್ಯ ಪ
ನಿನ್ನಡಿಗಳನೆಂದಿಗೂ ಬಿಡೆನಯ್ಯ ಅ.ಪ.
ನೀಗತಿಯೆನುತಿಹೆನಯ್ಯ
ತೋರಿಪುದೆನಗಯ್ಯ 1
ನಿನ್ನ ಪದವನಂಬಿ-ನಿನ್ನವನೆನಿಸಿದ-ಯೆನ್ನನು ಪೇಕ್ಷಿಪರೇನಯ್ಯ
ಸನ್ನುತ ನಿನ್ನದು ಮನ್ನಿಸಿ ಕೇಳುವ ಬಿನ್ನಪವಿನಿತೆ ಕೇಳಯ್ಯ 2
ಎಲ್ಲರ ಹೃದಯದೊಳಲ್ಲಿ ನೆಲಸಿರುವ ಪುಲ್ಲನಯನನೀ ಪೇಳಯ್ಯ
ಕಲ್ಲುಮನದಿನೀ ನೊಲ್ಲದೊಡೀ ಜಗ-ದಲ್ಲಿ ಪೋಪುದಿನ್ನೆಲ್ಲಯ್ಯ3
ಪತಿಯಗಲಿದ ಪತಿವ್ರತೆಗೆ ಇತರರಲಿ ರತಿ ಸಂಜನಿಸುವದೇನಯ್ಯ
ನುತಿಪುದು ಪುಶಿಯೇನಯ್ಯ 4
ನಿಗಮವು ಪೊಗಳುತಲಿಹುದಯ್ಯ
ಸೊಗಯಿಸುನಿನ್ನೊಳುಯನಗಯ್ಯ 5
ಸೃಷ್ಠಿನಾಥಪದ ವಿಷ್ಟರ ಭಕ್ತಿಯ ಕೊಟ್ಟರಭೀಷ್ಟವು ಯನಗಯ್ಯ
ಇಷ್ಟರಮೇಲಿನ್ನು ಲಕ್ಷಕೊಟ್ಟರೂಯನಗಿಷ್ಟವಿಲ್ಲಶ್ರೀ ಕೃಷ್ಣಯ್ಯ 6
ದಯೆಯಿರಿಸಯ್ಯ
ಚರಣ ಶರಣನಿಗೆ ಕರುಣಿಸದಿರ್ದರೆ ಕರುಣಿಗಳರಸರಿನ್ನಾರಯ್ಯ 7