ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೈ ಗುರುರಾಯ ಚರಣತೀರ್ಥವನು ಹರಣ ಭಯದೊಳು ಲಕುಮೀರಮಣನೊಲಿವಂದದಲಿ ಪ ದೇಶ ದೇಶವ ತಿರುಗಿ ಬೇಸರದು ಈ ಚರಣ ಭೂಸುರವ ಪೂಜಿಸುವದು ಈ ದಿವ್ಯ ಚರಣ ಕ್ಲೇಶವೆನಿಸದೆ ತೀರ್ಥದಾಸೆಯ ಬಿಡದ ಈ ಚರಣ ಕಾಶಿ ರಾಮೇಶ್ವರಕೆ ನಡೆದ ಚರಣ1 ಹಾವಿಗೆಯನೊಲ್ಲದೆ ಹಾದಿ ನಡೆದಿಹ ಚರಣ ದೇವಿ ಭಾಗೀರಥಿಗೆ ಇಳಿದ ಚರಣ ಕಾವಿ ವಸ್ತ್ರವನುಟ್ಟ ಕಾಶಿವಾಸಿಯ ಚರಣ ಕೋವಿದರು ವಂದಿಸುವ ದಿವ್ಯ ಚರಣ2 ಗಟ್ಟಿ ಬೆಟ್ಟವ ತಿರುಗಿ ಕಷ್ಟಬಟ್ಟಿಹ ಚರಣ ಸೃಷ್ಟಿಗುತ್ತಮ ನದಿಯ ಮಿಂದ ಚರಣ ಇಷ್ಟಗಳನೆಲ್ಲ ತಾ ಪಡೆದುಕೊಂಡಿಹ ಚರಣ ಕೃಷ್ಣಮೂರ್ತಿಯ ಬಳಿಗೆ ಬಂದ ಚರಣ 3 ಶುದ್ಧ ವೈಷ್ಣವರೆಲ್ಲ ಉಜ್ಜಿ ತೊಳೆವ ಚರಣ ಬದ್ಧ ಮುಕ್ತರಿಗೆಲ್ಲ ಸಿದ್ಧಿಯಹ ಚರಣ ಮಧ್ವರಾಯನ ಮತದಿ ಎದ್ದು ತಿರುಗುವ ಚರಣ ವಿದ್ಯೆನಿಧಿ ಗುರುರಾಯ ಬಾಳ್ದ ಚರಣ 4 ಧರಣಿಯನು ಬಲವಂದು ದಣಿದು ಬಂದಿಹ ಚರಣ ಕೈವಲ್ಯ ಪಡೆದ ಚರಣ ವರಾಹತಿಮ್ಮಪ್ಪನಿಹ ಗಿರಿಯನೇರಿದ ಚರಣ ಸ್ಥಿರವಾಗಿ ಉಡುಪಿಯೊಳು ನಿಂದ ಚರಣ 5
--------------
ವರಹತಿಮ್ಮಪ್ಪ
ಭಾವ ವೈರಾಗ್ಯದಿಂದ ಭಜಿಸು ದೇವಿ ಲಕುಮೀರಮಣನ ಪ ಕಾವ ಕೊಲ್ಲುವ ತಾನೆ ಒಬ್ಬನೆ ಕೊನೆಗೆ ನಿಲ್ಲುವೆನೆಂದು ಅ.ಪ ಮತಿಗೇನು ತೋರದೆ ಮಿತ ವ್ಯಾಪಾರದೊಳಿರಲು 1 ಪುರಾಣ ಕೇಳಿದಾಗ ನರಕ ಭಯವು ಮನಕೆ ತೋರಿ ಬರಲು ಮರದು ಪೋಗಲು 2 ಸಿರಿಯು ಬೇಕೆಂದು ನರರ ಪೂಜೆ ಮಾಡಿ ಧನವ ಕೂಡಿಸಿ ಪೋಗಲಾಗ ಹರಿಯ ನೆನೆಯೊ 3 ತಿರುಗಿ ಬೇಡಲು ನೀರಿನ ಲಾಭವಿಲ್ಲದೆ ನರಹರಿಗೆ ಮೊರೆಯಿಡಲು 4 ಅನುಕೂಲವೆಲ್ಲ ಇರಲು ಅನಿಮಿತ್ತದಿಂದ ಭಜಿಸು ಅನಿಮಿಷರೊಡೆಯ ವಿಜಯ ರಾಮಚಂದ್ರವಿಠಲನ್ನ 5
--------------
ವಿಜಯ ರಾಮಚಂದ್ರವಿಠಲ