ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯ ರಮಾಕಾಂತ - ಜಯತು ದೈತ್ಯ ಕೃತಾಂತ ಜಯ ಸರ್ವ ವೇದಾಂತ - ಜಯತು ನಿಶ್ಚಿಂತ ಪ ಬೇಡ ವೇಷವ ತಾಳಿ- ಓಡಿಸುತೆ ತುರಗವನು ಪ್ರೌಢೆ ಪದ್ಮಾವತಿಯ - ನೋಡಿ ನಸುನಗುತ ಜೋಡಾಗು ತನಗೆಂದು - ಗಾಡಿಕಾರರ ಮಾತ ನಾಡಿ ಕ್ರೋಢಾಲಯಕೆ - ಓಡಿಬಂದವನೆ 1 ತಾಯೆ ಬಕುಳೆಯ ಕಳುಹಿ ಮಾಯಕದ ಕೊರವಂಜಿ ಕಾಯದಿಂದಾಕಾಶರಾಯನರಮನೆಗೆ ಜೋಯೆಂದು ಪೋಗಿ - ಸದುಪಾಯಗಳ ನಡೆಸಿ ತ ನ್ನಾಯ ಕೈತಂದ ಕಮನೀಯ ಮೂರುತಿಯೆ 2 ಶುಕಮುನಿಯ ಮುಖದಿಂದ ಸುಖವಾರ್ತೆಯನು ಕೇಳಿ ಸಕಲ ದೇವೋತ್ತಮರ - ನಿಕರವನು ನೆರಹಿ ಅಕಳಂಕ ಲಗ್ನದಲಿ ಸುಕಪೋಲೆಗೊಲಿದುರಗ ಶಿಖರಿಯಲಿ ನೆಲೆಯಾದ ಲಕುಮಿವಲ್ಲಭನೆ 3
--------------
ಲಕ್ಷ್ಮೀನಾರಯಣರಾಯರು
ಮಂಗಳಾಚರಣ ಜಯ ಜಯ ರಮಾಕಾಂತ ಜಯತು ದೈತ್ಯಕೃಪಾಂತ ಜಯ ಸರ್ವ ವೇದಾಂತ ಜಯತು ನಿಶ್ಚಿಂತಾ ಪ. ಬ್ಯಾಡ ವೇಷವ ತಾಳಿ ಓಡಿಸುತ ತುರಗವನು ಹೂಡೆ ಪದ್ಮಾವತಿಯ ನೋಡಿ ನಸುನಗುತ್ತ ಜೋಡಾತು ತನಗೆಂದು ಗಾಡಿಕಾರನ ಮಾತ- ನಾಡಿ ಕ್ರೋಡಾಲಯಕೆ ಓಡಿ ಬಂದವನೆ 1 ತಾಯಿ ಬಕುಳೆಯ ಕಳುಹಿ ಮಾಯಕದ ಕೊರವಂಜಿ ಕಾಯದಿಂದಾಕಾಶ ರಾಯನರಮನೆಗೆ ಜೋಯೆಂದು ಪೋಗಿಸದುಪಾಯಗಳ ನಡಿಶಿ ತ- ನ್ನಾಯ ಕೈಕೊಂಡು ಕಮನೀಯ ಮೂರುತಿಯೆ 2 ಶುಕಮುನಿಯ ಮುಖದಿಂದ ಸುಖವಾರ್ತೆಯನು ಕೇಳಿ ಸಕಲ ದೇವೋತ್ತಮರ ನಿಕರವನು ನೆರಹಿ ಅಕಳಂಕ ಲಗ್ನದಲಿ ಸುಕವೋಲೆಗೊಲಿದುರಗ ಶಿಖರಿಯಲಿ ನೆಲೆಯಾದ ಲಕುಮಿವಲ್ಲಭನೆ ಜಯ ಜಯ 3
--------------
ತುಪಾಕಿ ವೆಂಕಟರಮಣಾಚಾರ್ಯ