ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸೆನ್ನನು ಶ್ರೀಲಕುಮಿವರ ಭೂಲೋಲಕಾರ್ಪರ ದೊಳು ಪಿಪ್ಪಲತರು ಸುಮಂದಿರ ಪ ಬಾಲತನದಿ ಜನಕನ ಬಹು ಕೀಳುನುಡಿಗಳನು ಸಹಿಸಿದ ಬಾಲಗೊಲಿದ ನರಹರಿಯೆ ಕೃಪಾಳೊ ನಿಮ್ಮಯ ಕಾಲಿಗೆರಗುವೆ ಅ.ಪ ಸಾಲಿಗ್ರಾಮದಿ ನೆಲಸಿ ತರುವರ ಮೂಲದಿ ಸೇವಿಪರ ಪಾಲಿಸಲೋಸುಗ ನಿರಂತರ ಕಾಲಕಾಲಗಳಲ್ಲಿ ಬಿಡದೆ ವಾಲಗ ಕೈಕೊಳ್ಳುತ ಮೆರೆವ ಕಾಳಿಯಮದನನೆ ತವಪದ ಕೀಲಾಜದಲಿ ಭಕುತಿಯ 1 ಮಂದಜಾಸನಾದಿ ಸುರಗಣ ವಂದಿತ ಸುಚರಣ ದ್ವಂದ್ವ ಭಜಕ ವೃಂದಪೋಷಣ ಸಿಂಧುಶಯನವಂದಿಪೆ ಭವ ಬಂಧ ಬಿಡಿಸ್ಯಾನಂದಗರಿವ ಮಂದಿರದಲಿ ತಂದುತೋರಿಸಿ2 ನಾರದಾದಿ ಮುನಿ ಸುವರ್ಣಿತ ಉದಾರ ಚರಿತ ನಾರಾಯಣ ಮುನಿಸು ಪೂಜಿತ ಧಾರುಣಿಯೊಳು ಘೋರ ಕೃಷ್ಣಾತೀರ ಸಂಸ್ಥಿತ ಸೇರಿದ ಭಕುತರಿಗೆ ತ್ರಿದಶ ಭೂರುಹ ಸಿರಿನರಸಿಂಹನೆ 3
--------------
ಕಾರ್ಪರ ನರಹರಿದಾಸರು
ಸಿಂದೂರಗಮನೆ ಸಾರೆ ಮಲಗಿರುವನ್ಯಾರೆ ಪ ಸಂದರೀ ಮಂದಿರದೊಳಿವನ್ಯಾರೆ ಸೌಂದರ್ಯದ ಮ್ಯಾರೆ ಛಂದದಲಿ ನೀ ಸಾರೆ ಇಂದು ನಭದಲಿ ಚರಿಸುತಲಿ ಮನ ನೊಂದು ಬೇಸರದಿಂದ ಇಲ್ಲಿಗೆ ಬಂದು ಮಲಗಿಹನೇನೆ ಸುಖದಿ 1 ಶೀಲೆ ನೋಡಿವನ ಮುಖಕಮಲ ಸಂಗರದೊಳತಿ ಚಟುಲ ಸುವಿಶಾಲ ಭುಜಯುಗಲ ಶ್ರೀ ಲಕುಮಿವರ ಪಾಲ ನಯನ ಮರಾಳ ಧ್ವಜರೊಳ ಗಾವನೊ ಇವ ಪೇಳುವದು ಕೀಲಾಲಜಾಂಬಕಿ2 ನಾರಿ ಮಾತನಾಡಿಸೇ ಇವನ ಮನ ಮೋಹದವರನ ಕಮನೀಯ ಗುಣಯುತನ ವಾರಿಜಾಸನ ಮುಖ್ಯ ಸುರಪರಿವಾರ ಸೇವಿಯ ಕೊಳುವ ಕಾರ್ಪರನಾರಸಿಂಹನೆ ಪವಡಿಸಿಹನೆ 3
--------------
ಕಾರ್ಪರ ನರಹರಿದಾಸರು
ಹರಿಯೆ ಸ್ವತಂತ್ರ ಚತುರದಶ ಭುವನಕೆ | ಪರಮೇಷ್ಠಿ ಶಿವಾದ್ಯರಾತಗೆ ದಾಸರೆನ್ನು ಪ ಹರಿಹರರ ಒಂದೇ ಸ್ಥಾನದಲಿ ಕಾಣುವೆನೆಂದು | ಪರಮ ಭಕುತಿಯಿಂದ ಕ್ರೋಧಮುನಿಪ || ಧರಣಿಯೆಲ್ಲ ತಿರುಗಿ ಶುಕ್ಲವತೀ ತೀರಕೆ ಬರಲು | ವಸಂತ ಕಾಲದಂತೆ ಪೊಳಿಯೇ1 ತಪಸಿ ತಪವನೆ ಮಾಡುತಿರಲು ಖರಾಟಖಳ | ಉಪಹತಿ ಕೊಡುತಿಪ್ಪ ವರಬಲದಿ || ವಿಪುಳದೊಳಗಿವಗೆಲ್ಲಿ ಎದುರಾರು ಇಲ್ಲದಿರೆ | ಸುಪರ್ಣಾದಿ ಮೊರೆ ಇಡಲು ಬೊಮ್ಮಗೆ2 ಪರಮೇಷ್ಠಿ ಹರಿಯ ಬಳಿಗೆ ಬಂದು | ಖಳನ ಕೋಲಾಹಲವ ಬಿನ್ನೈಸಲು || ಪುಲಿತೊಗಲಾಂಬರನ ಸಹಿತ ಸರ್ವೋತ್ತಮನ | ಒಲಿಮೆಯಿಂದ ಬಂದು ಸುಳಿದರಾಗಂದು 3 ದಾನವನ ಕೊಂದು ದೇವತೆಗಳ ಸುಖಬಡಿಸಿ | ಜ್ಞಾನಕ್ರೋಢಮುನಿ ಮನಕೆ ಪೊಳೆದು || ಆನಂದದಿಂದಲಿ ನಿಂದು ಮೆರೆದ ಲೀಲೆ | ಏನೆಂಬೆನಯ್ಯ ಹರಿಹರ ವಿಚಿತ್ರಾ 4 ಪ್ರವಿಷ್ಠ ಕೇ| ಶವನು ತಾನೆ ಕಾಣೊ ಸ್ವಾತಂತ್ರನು || ಇವರು ಶಂಕರನಾರಾಯಣನೆಂಬೊ ಪೆಸರಿನಲಿ | ಅವನಿಯೊಳು ಪ್ರಖ್ಯಾತರಾಗಿ ನಿಂದಿಹರೋ 5 ಎರಡು ಮೂರುತಿಗಳು ನೋಳ್ಪರಿಗೆ | ಶ್ರೀ ನಾರಾಯಣಗೆ ಈಶ ಸಮನೇ 6 ಚಕ್ರ ಶಂಖ ಗದೆ ಪದುಮ ಹರಿಗೆ ನೋಡು | ಮುಕ್ಕಣ್ಣಗೆ ಡಮರುಗ ತ್ರಿಶೂಲವು || ಮುಖ್ಯ ದೇವತಿ ಹರಿ ಅವಾಂತರ ಶಿವನು | ಶಕ್ರಾದ್ಯರೊಲಿದು ಭೇದವನು ಪೇಳುವರು 7 ಸತ್ಯಂ ವದವೆಂಬ ಶ್ರುತಿವರದು ಪೇಳುತಿದೆ | ಭೃತ್ಯ ರುದ್ರನು ಕಾಣೊ ಲಕುಮಿವರಗೆ || ಸತ್ಯದಲಿ ಸಿದ್ಧವಯ್ಯ ಎಂದು ತಿಳಿದು | ಸ್ತೌತ್ಯ ಮಾಡಿದವಗೆ ವೈಕುಂಠ ಪದವಿ 8 ಕ್ರೋಢ ಪರ್ವತವಿದೆ ತೀರ್ಥ ಪಾವನಕರ | ನಾಡೊಳಗೆ ಕ್ಷೇತ್ರ ಉತ್ತಮ ಮಾನವಾ || ಪಾಡಿದರೆ ವಿಜಯವಿಠ್ಠಲರೇಯ ಒಲಿದು |ಕೂಡಾಡುವನು ದೃಢ ಭಕುತಿಯಿತ್ತು ಅನುದಿನಾ 9
--------------
ವಿಜಯದಾಸ