ಕುಣಿ ಕುಣಿಯಲೋ ಬಾಲಗೋಪಾಲ ಪ
ಗೋಪಾಲ ನೀರದ ನೀರ ಅ.ಪ
ಯಮುನಾ ತೀರದಿ ಹಿಮಕಿರಣನು ತಾ
ಮಮತೆಯ ತೋರಲು ಬೆಳಗುತಿಹ
ಘಮಘಮಿಸುವ ಈ ಸುಮಗಳು ಸೂಸಿರೆ
ಪ್ರಮದೆಯರೆಲ್ಲರ ಪ್ರೇಮಾಂಗಣದಲಿ 1
ಗಂಧವ ಮಾರುತ ಬೀರುತಲಿರುವನು
ಇಂದಿರೆ ಕೊಳಲಿನ ರೂಪದಲಿ
ಚಂದದಿ ನಾದವ ತುಂಬಲು ಪರಮಾ
ನಂದವು ಮಾನಸ ಮಂದಿರದಲಿ ನೀ 2
ಕಾಯವು ರೋಮಾಂಚಿತವಾಯ್ತೊ
ಮಾಯಾವಾದವೊ ಮೋಹಗಳು
ತಾಯಿ ಮಡಿಲು ಸೇರಿದ ಶಿಶುವಂದದಿ
ಹಾಯವೆನಿಸಿತೊ ಜೀವನ ಯಾತ್ರೆಯು 3
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಬಿಡಿಸೊ
ಸ್ವಾಮಿ ನಿನ್ನಯ ಪಾದಯುಗಳವೆ ಕ್ಷೇಮವೆನ್ನಿಸೊ
ಸಾರಾಸಾರ ವಿವೇಕದಿ ಮೋಕ್ಷದ ಕೋರಿಕೆ ಪುಟ್ಟಿಸೊ
ಭವ ಪಾರ ಸೇರಿಸೋ 4
ಸಾರದ ಕರುಣಕೆ ಕಾರಣ ಬಿಂಬದ ಮೂರುತಿ ದರುಶನವು
ಭಾರತಿ ರಮಣನ ಮಂಗಳಶಾಸ್ತ್ರ ವಿಚಾರವೆ ಕಾರಣವು
ಭಕುತ ಜನ ಪ್ರಸನ್ನ ಲಕುಮಿರಮಣ ಎನ್ನು
ತಕಿಟ ತಕಿಟ ಎಂದು 5