ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂದ ಮನುಜಾ ಮೂರ್ತಿ ಶ್ರೀ ಹೆನ್ನೆಹೋಬಲವಾಸನಾ ಪ ಮನಶುದ್ಧಿಯಾಗಿ ನಿರ್ಮಲಜ್ಞಾನದಲಿಯನ್ನು ವನಜಸಂಭವ ಪಿತನ ವರ್ಣಿಸುತಲಿ ದಿನಗಳನು ಕಳೆಯುತಲಿ ದೀನರಕ್ಷಕ ದೇವನ ಅನುಮಾನಗಳ ತೊರೆದು ಆನಂದದಿಂದಲಿ ಇನ್ನು 1 ಸಕಲಾಂತರ್ಯಾಮಿಯಾದ ಸಕಲ ದೀನರ ದೇವ ಸಕಲ ಸಾಧು ಸಜ್ಜನರ ಸರ್ವದಲಿ ನಿಖರವಾಗಿ ರಕ್ಷಿಸುವ ಲಕುಮಿಯರಸನ ಹೃದಯ ಭಕುತಿಯಲಿ ಪಾಡುತಲಿ ಪರಮ ಪುರುಷನ ಇಂದು2 ಎಂದೆಂದು ಹರಿಪಾದ ಹೊಂದಿದ ಮಹಾಮಹಿಮ ರಂ------ತಿಳಿದು ನೀಯಿಂದು ಇನ್ನು ಸಂದೇಹವನ್ನೆ ಬಿಟ್ಟು ತಂದೆ `ಹೆನ್ನವಿಠ್ಠಲ' ಚಂದದಿಂದಲಿ ಹೃದಯ ಮಂದಿರದಲಿನ್ನೂ 3
--------------
ಹೆನ್ನೆರಂಗದಾಸರು
ವಂದಿಪೆವು ತವಪಾದಪಂಕಜಕೆ ಶ್ರೀ ರಾಘವೇಂದ್ರ | ಇಂದು ಬಿನ್ನೈಸುವೆವು ನಿನ್ನಡಿಗೆ ಪ ಇಂದು ದಿನವಂಭತ್ತು ವದ್ಯದಿ | ವೆಂದು ತೋರುವ ಸುದಿನವೆಮಗೆಅ.ಪ ಕಾಲವನು ಬಣ್ಣಿಸಲು ಭಯವಹುದು | ಏನೆಂದು ಪೇಳಲಿ | ನಾಲಿಗೆಯು ಒಣಗುತ್ತಲಿಹುದು | ಮೇಲೆನಿಪ ಶಾಲ್ಯಾನ್ನವೀದಿನ | ಸಾಲದಾಯಿತು ಹಸಿವುತಾಳದೆ | ಕಾಲಪುರಕೈದುವೆವು ಗುರುವೇ 1 ಹಿಂದೆ ತಂಜಾಊರಿನಲಿ ಕ್ಷಾಮ | ವಂಜಿಸಲು ನಿನಬಳಿ | ಬಂದ ರಾಜನ ಮೊರೆಯ ಕೇಳುತಲಿ | “ಶ್ರೀ” ಬೀಜಮಂತ್ರವ ರಚಿಸಿ ಭಕುತರ | ದನ್ನ ವುಣಿಸಿದೆ ಜನಕೆ ಗುರುವೇ 2 ಧರ್ಮಮಾರ್ಗವೆ ಕಾಣದಂತಾಯ್ತು | ಎಲ್ಲೆಲ್ಲಿ ನೋಡಲ | ಧರ್ಮಕೃತಿಗಳೆ ಕಂಡುಬರುತಿಹವು | ಇಂದು ನಿರ್ಮಲಾತ್ಮಕ ನಿನ್ನ ಬಳಿಯಲಿ ಧರ್ಮಭಿಕ್ಷವ ಬೇಡುತಿಹರೈ3 ಅಖಿಲ ಸಜ್ಜನ ನಿಚಯ ಸಹಿತಾಗಿ ನೀನಿಲ್ಲೆ ನೆಲೆಸು | ಭಕುತರಿಷ್ಟಾರ್ಥವನು ನೀಡುತಲಿ | ಲಕುಮಿಯರಸನ ದಯದಿ ಶರಣರ | ಮುಕುತರಾಗುವ ತೆರದಿ ಹರಸೈ4 ದೇಶದೊಳು ಮಳೆಬೆಳೆಯು ಹುಲುಸಾಗಿ ಸೂಸಿಸಲಿನ್ನು | ದೇಶದೊಳು ಸುಖಶಾಂತಿ ಸ್ಥಾಪಿಸಲಿ | ಶ್ರೀಶಕೇಶವನಲ್ಲಿ ಭಕುತಿಯ | ಲೇಸೆನಿಪ ಧರ್ಮಾರ್ಥ ಮಾರ್ಗದಿ | ದಾಶೆಯಲಿ ಬಿನ್ನಹ ಗುರುವೇ 5
--------------
ಶ್ರೀಶ ಕೇಶವದಾಸರು
ಹಿಗ್ಗಿದಳು ನಂದನ ಸತಿ ಮುಗ್ಧೆ ತನ್ನಯ ಸುತನ ಮುದ್ದು ಮುಖವ ನೋಡಿ ಅ.ಪ ಪಾಲು ಬೆಣ್ಣೆ ಕಳ್ಳ ತಾಳು ಕಟ್ಟುವೆ ನಿನ್ನ ಕಾಲುಗಳನೆಂದು ಕರಗಳಲಿ ಪಿಡಿದು ನೀಲಮೇಘಶ್ಯಾಮ ಶ್ರೀಲಕುಮಿಯರಸನನು ಬಾಲನೆಂದರಿತು ಆಲಿಂಗನದಿ ಮೈ ಮರೆತು1 ಅಂಬುಜೋದ್ಭವನಯ್ಯ ಅಂಬೆಗಾಲಿಡುವುದನು ನಂಬಬಹುದೇ ಮೋಹಜಾಲವಿರಲು ಸಂಭ್ರಮದಿ ಸುತನನ್ನು ಚುಂಬಿಸುತ ರಭಸದಲಿ ಮೋದ ಕಂಬನಿಯ ಸುರಿಸುತ್ತ 2 ಓರೆಗಣ್ಣಿನ ನೋಟ ನಾರಿಯರ ಪೇಚಾಟ ಮೂರು ಲೋಕಕೆ ಹರ್ಷಕರ ಮಂದಹಾಸ ಸೇರಿಸಿದ ಮುಕ್ತಗಳ ಮೀರಿ ಪೊಳೆಯುವ ದಂತ ಚಾರುಮುಖಿ ಸುತನ ಮನಸಾರ ದರುಶನದಿಂದ 3 ಭೃಂಗಗಳ ಧಿಕ್ಕರಿಪ ಮಂಗುರುಳು ಮಸ್ತಕದಿ ರಂಗಿನಾ ಕಸ್ತೂರಿತಿಲಕ ಪಣೆಯಲ್ಲಿ ಸಿಂಧು ಶ್ರೀರಂಗನ್ನ ನೋಡುತಲಿ ಅಂಗನಾಮಣಿ ಅಂತರಂಗ ಪ್ರೇಮದ ಭರದಿ 4 ತನ್ನ ಉದರದಿ ನಳಿÀನಜಾಂಡವನೆ ಪೊತ್ತಿರುವ ಉನ್ನತೋನ್ನತ ಸುಗುಣ ಜ್ಞಾನಮಯನ ತನ್ನ ಮಗನೆಂದರಿತು ಸ್ತನ್ಯಪಾನದಿ ಸುಪ್ರ ಸನ್ನಮುಖಿ ಹರುಷ ಪುಳಕಿತಳಾಗಿ ಹೆಮ್ಮೆಯಲಿ 5
--------------
ವಿದ್ಯಾಪ್ರಸನ್ನತೀರ್ಥರು