ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಊ) ಕ್ಷೇತ್ರ ವರ್ಣನೆ 1. ಬೇಲೂರು ಚನ್ನಕೇಶವರಾಯ ಚೆಲುವ ಚೆನ್ನಿಗರಾಯಾ ನಿನ್ನ ಕಾಣದೇ ನಿಲ್ಲಲಾರೆ ಬೇಲೂರ ಪ ವಜ್ರ ಪದುಮ ಪತಾಕಾಂಕುಶಗಳು ನಿಜಸತಿ ಲಕುಮಿದೇವಿಯರಾ ಭುಜ ಕುಚ ಕುಂಕುಮಾಂಕಿತ ಧರಾಂಕಿತ ಭಜಕರ ಭಾಗ್ಯೋದಯ ಪಾದಯುಗಳದಾ 1 ಸುರ ವೈರಿಗಳೆದೆ ಥಲ್ಲಣವೆನಿಸುವಾ ಬಿರುದಿನ ಖಡ್ಡೆಯಪ್ಪ ಚರಣಂಗಳಾ ಗರುಡನ ಹೆಗಲೇರಿ ಉದರದಿ ವಿರಿಂಚಿಯು ಉದುಭವಿಸಿದ ವರನಾಭಿಯ ಚೆಲುವಿನಾ 2 ಪೊಂಬಟ್ಟೆಯಿಂದೆಸೆವ ಪೀತಾಂಬರ ಚೆಂಬೊನ್ನದ ಕಾಂಚಿಯದಾಮದಾ ಅಂಬುಜ ಕೌಮೋದಕಿ ಸುದರುಶನ ಕಂಬುವ ಧರಿಸಿಹ ಚತುರುಭುಜಂಗಳಾ 3 ಶ್ರೀಯಾಲಿಂಗಿಸಿ ಸುಖವ ಕಾಮಿನಿಯರ ಶ್ರೀಯೋಗವ ತೋರಿಸೆನಗೊಮ್ಮೆ ಹಾಯೆಂದು ಬಿಗಿದಪ್ಪಿ ನಂಬಿಸಿ ಚುಂಬಿಸಿ ಬಾಯ ತಂಬುಲವಿತ್ತು ಬಂದೆನ್ನ ನೆರೆಯಾ 4 ಕರೆವೆನ್ನ ಮನದಲ್ಲಿ ಕರೆವ ನಾಲಿಗೆಯಲ್ಲಿ ಕರೆವೆನ್ನ ಕಣ್ಣುಸನ್ನೆಯಲೀ ಕರೆವೆ ನೆರೆವೆ ನಿನ್ನ ಚರಣಕೆರಗುವೆ ನಾ ವರವೈಕುಂಠಕೇಶವ ಬೇಲೂರ 5
--------------
ಬೇಲೂರು ವೈಕುಂಠದಾಸರು
ಪವನಾಂತರ್ಗತ ಹರಿಯ ಸ್ಮರಣೆಯಮಾಡಿ ಪ ವಿವಿಧ ಭಕುತರು ಕೂಡಿ ಹರುಷದಿ ಪ್ಲವನಾಮ ಸಂವತ್ಸರದಲಿ ಸವಿನಯದಿ ಭಜನೆಗಳ ಮಾಳ್ಪರು ಹರಿಯ ಗುಣ ಕಾರ್ಯಗಳ ಸ್ಮರಣೆಯ ಅ.ಪ ಪಕ್ಷಿವಾಹನ ಹರಿಯು ಶ್ರೀ ಲಕುಮಿದೇವಿಯ ಲೆಕ್ಕಿಸದಿಹನಂತೆ ಹೀಗಿರಲು ಬ್ರಹ್ಮನ ಪೊಕ್ಕುಳಲಿ ಪಡೆದನಂತೆ ಸೊಕ್ಕಿದ ಅಸುರರನು ಬಡಿಯಲು ಮಿಕ್ಕ ಸುರರನು ಪೊರೆಯಲೋಸುಗ ರಕ್ಕಸಾಂತಕ ಹರುಷದಿಂದಲಿ ಚೊಕ್ಕ ಸ್ತ್ರೀ ರೂಪಾದನಂತೆ 1 ಇಂದುಶೇಖರ ಕೇಳಿದ ಸ್ತ್ರೀರೂಪ ನೋಡಲು ಬಂದು ಬೇಡಿದನಂತೆ ಅದು ಕೇಳಿ ಶ್ರೀಶನು ಸುಂದರ ಸ್ತ್ರೀಯಾದನಂತೆ ನಿಂದು ನೋಡುತ ಚಂದ್ರಶೇಖರ ಮಂದಹಾಸದಿ ಪಿಡಿಪೋದನಂತೆ ಮಂದಗಮನೆಯು ಸಿಗದೆ ದೂರದಿ ನಿಂದು ಕಣ್ಮರೆಯಾದಳಂತೆ2 ವಿಸ್ಮಯವಾದನಂತೇ ಪಶುಪತಿಯ ಸಿರದಲಿ ಹಸ್ತ ನೀಡಿದನಂತೇ ಮತ್ತೆ ರಕ್ಷಕರಿಲ್ಲವೆಂದು ತತ್ತರಿಸಿ ಭಯಪಟ್ಟನಂತೆ ತಕ್ಷಣದಿ ಶ್ರೀ ಕಮಲನಾಭ ವಿಠ್ಠಲ ರಕ್ಷಿಸಿ ಪೊರೆದನಂತೆ 3
--------------
ನಿಡಗುರುಕಿ ಜೀವೂಬಾಯಿ