ಒಟ್ಟು 9 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಊ) ಕ್ಷೇತ್ರ ವರ್ಣನೆ 1. ಬೇಲೂರು ಚನ್ನಕೇಶವರಾಯ ಚೆಲುವ ಚೆನ್ನಿಗರಾಯಾ ನಿನ್ನ ಕಾಣದೇ ನಿಲ್ಲಲಾರೆ ಬೇಲೂರ ಪ ವಜ್ರ ಪದುಮ ಪತಾಕಾಂಕುಶಗಳು ನಿಜಸತಿ ಲಕುಮಿದೇವಿಯರಾ ಭುಜ ಕುಚ ಕುಂಕುಮಾಂಕಿತ ಧರಾಂಕಿತ ಭಜಕರ ಭಾಗ್ಯೋದಯ ಪಾದಯುಗಳದಾ 1 ಸುರ ವೈರಿಗಳೆದೆ ಥಲ್ಲಣವೆನಿಸುವಾ ಬಿರುದಿನ ಖಡ್ಡೆಯಪ್ಪ ಚರಣಂಗಳಾ ಗರುಡನ ಹೆಗಲೇರಿ ಉದರದಿ ವಿರಿಂಚಿಯು ಉದುಭವಿಸಿದ ವರನಾಭಿಯ ಚೆಲುವಿನಾ 2 ಪೊಂಬಟ್ಟೆಯಿಂದೆಸೆವ ಪೀತಾಂಬರ ಚೆಂಬೊನ್ನದ ಕಾಂಚಿಯದಾಮದಾ ಅಂಬುಜ ಕೌಮೋದಕಿ ಸುದರುಶನ ಕಂಬುವ ಧರಿಸಿಹ ಚತುರುಭುಜಂಗಳಾ 3 ಶ್ರೀಯಾಲಿಂಗಿಸಿ ಸುಖವ ಕಾಮಿನಿಯರ ಶ್ರೀಯೋಗವ ತೋರಿಸೆನಗೊಮ್ಮೆ ಹಾಯೆಂದು ಬಿಗಿದಪ್ಪಿ ನಂಬಿಸಿ ಚುಂಬಿಸಿ ಬಾಯ ತಂಬುಲವಿತ್ತು ಬಂದೆನ್ನ ನೆರೆಯಾ 4 ಕರೆವೆನ್ನ ಮನದಲ್ಲಿ ಕರೆವ ನಾಲಿಗೆಯಲ್ಲಿ ಕರೆವೆನ್ನ ಕಣ್ಣುಸನ್ನೆಯಲೀ ಕರೆವೆ ನೆರೆವೆ ನಿನ್ನ ಚರಣಕೆರಗುವೆ ನಾ ವರವೈಕುಂಠಕೇಶವ ಬೇಲೂರ 5
--------------
ಬೇಲೂರು ವೈಕುಂಠದಾಸರು
ಊಟವನು ಮಾಡು ಬಾ ಉದಧಿಶಯನಾ | ಆಟವನು ಸಾಕುಮಾಡಿ ಅತಿ ವೇಗದಿಂದಲಿ ಪ ಪರಿ | ತೋಯ ಸಂಡಿಗೆ ಪಳದೆ ಹುಳಿ ಸಾರು || ಪಾಯಸ ನೊರೆಹಾಲು ಸಕ್ಕರೆಗೂಡಿಸಿ | ತಾಯಿ ದೇವಕಿಯು ಎಡೆಯ ಮಾಡಿದಳು ತಂದು 1 ಯಾಲಕ್ಕಿ ಹಾಕಿದ ಹೋಳಿಗೆಯು ಪರಿಮಳ | ಸಲೆ ಶಾಲ್ಯೋದನ ಕರಿದ ಭಕ್ಷ್ಯಾ || ಮೇಲಾದ ಇಂಗು ಜೀರಿಗೆ ಮೆಣಸಿನ ಹುಗ್ಗಿ | ಶ್ರೀ ಲಕುಮಿದೇವಿ ಎಡೆ ಮಾಡಿದಳು ತಂದು 2 ಕಸಕಸಿ ಎಳ್ಳು ಲಡ್ಡಿಗೆಯು ಅಪ್ಪಾಲು ಅರೆ-| ರಸ ದೋಸೆ ಬೆಣ್ಣೆ ಸೂಸಲುಕಡಬು || ಹಸನಾಗಿ ಕರಿದ ಹಪ್ಪಳ ಸಂಡಿಗೆ ನಿನ್ನ ಸೊಸೆ ಸರಸ್ವತಿ ಎಡೆ ಮಾಡಿದಳು ತಂದು 3 ಕಾದಾಕಳ ತುಪ್ಪ ಅಳಗಳಗ ತಿಳಿತುಪ್ಪ | ಮಾಧುರ್ಯವಾಗಿದ್ದ ಜೇನು ಘೃತವು || ಕಾದಾರಿದ ಪಾಲು ಕಟ್ಟುಸುರು ಕೆನೆಮೊಸರು | ಭೂದೇವಿ ನಲಿನಲಿದು ಎಡೆ ಮಾಡಿದಳೊ ತಂದು4 ಸರಳಿಗೆ ಗೌಲಿ ಬಟಿವೆ ಪರಡಿ ಸಜ್ಜಿಗೆ | ಸರಸವಾಗಿದ್ದ ಚಿತ್ರಾನ್ನಂಗಳು || ಪರಿ ಫಲ ಪಕ್ವಾನ್ನ ಸೋಪಚಾರದಿ | ಗಿರಿಜಾದಿಗಳು ತಾವು ಎಡೆ ಮಾಡಿದರೊ ತಂದು5 ಖಾರುಳ್ಳ ಪಚ್ಚಡಿ ಹಚ್ಚಗೆ ಹಸಿರು ವರ್ಣದ | ವಾರುಣದಿ ಉಪ್ಪಿನಕಾಯಿ ಕೂಟಾ || ನೀರು ಮಜ್ಜಿಗೆ ನಿಂಬೆÀಹಣ್ಣನೆ ಹಿಂಡಿ | ಭಾರತೀದೇವಿ ಎಡೆಮಾಡಿದಳೊ ತಂದು 6 ಉಂಡ ತರುವಾಯದಲಿ ಹರಿಯೇ ಪೀಠದಿ ಕುಳಿತು | ಕೊಂಡು ಬಂದ ಗಂಧ ತಾಂಬೂಲವ || ಸಿರಿ ವಿಜಯವಿಠ್ಠಲ | ಕೊಂಡನಾದ ಪುರಂದರಗೆ ಒಲಿದು ಒಲಿದು 7
--------------
ವಿಜಯದಾಸ
ಪವನಾಂತರ್ಗತ ಹರಿಯ ಸ್ಮರಣೆಯಮಾಡಿ ಪ ವಿವಿಧ ಭಕುತರು ಕೂಡಿ ಹರುಷದಿ ಪ್ಲವನಾಮ ಸಂವತ್ಸರದಲಿ ಸವಿನಯದಿ ಭಜನೆಗಳ ಮಾಳ್ಪರು ಹರಿಯ ಗುಣ ಕಾರ್ಯಗಳ ಸ್ಮರಣೆಯ ಅ.ಪ ಪಕ್ಷಿವಾಹನ ಹರಿಯು ಶ್ರೀ ಲಕುಮಿದೇವಿಯ ಲೆಕ್ಕಿಸದಿಹನಂತೆ ಹೀಗಿರಲು ಬ್ರಹ್ಮನ ಪೊಕ್ಕುಳಲಿ ಪಡೆದನಂತೆ ಸೊಕ್ಕಿದ ಅಸುರರನು ಬಡಿಯಲು ಮಿಕ್ಕ ಸುರರನು ಪೊರೆಯಲೋಸುಗ ರಕ್ಕಸಾಂತಕ ಹರುಷದಿಂದಲಿ ಚೊಕ್ಕ ಸ್ತ್ರೀ ರೂಪಾದನಂತೆ 1 ಇಂದುಶೇಖರ ಕೇಳಿದ ಸ್ತ್ರೀರೂಪ ನೋಡಲು ಬಂದು ಬೇಡಿದನಂತೆ ಅದು ಕೇಳಿ ಶ್ರೀಶನು ಸುಂದರ ಸ್ತ್ರೀಯಾದನಂತೆ ನಿಂದು ನೋಡುತ ಚಂದ್ರಶೇಖರ ಮಂದಹಾಸದಿ ಪಿಡಿಪೋದನಂತೆ ಮಂದಗಮನೆಯು ಸಿಗದೆ ದೂರದಿ ನಿಂದು ಕಣ್ಮರೆಯಾದಳಂತೆ2 ವಿಸ್ಮಯವಾದನಂತೇ ಪಶುಪತಿಯ ಸಿರದಲಿ ಹಸ್ತ ನೀಡಿದನಂತೇ ಮತ್ತೆ ರಕ್ಷಕರಿಲ್ಲವೆಂದು ತತ್ತರಿಸಿ ಭಯಪಟ್ಟನಂತೆ ತಕ್ಷಣದಿ ಶ್ರೀ ಕಮಲನಾಭ ವಿಠ್ಠಲ ರಕ್ಷಿಸಿ ಪೊರೆದನಂತೆ 3
--------------
ನಿಡಗುರುಕಿ ಜೀವೂಬಾಯಿ
ಮಂಗಳಂ ಜಯ ಮಂಗಳಂ ಪ ಇಂಗಡಲ ಕುವರಿಗೆ ಮಂಗಳಕಾಯೆಗೆ ಅ.ಪ. ನಿತ್ಯ ಪೂಜಿತದೇವಿಗೆರಾಜೀವ ನಯನೆಗೆ ಭಾಗ್ಯವೀವಳಿಗೆ 1 ಹಸಿರು ಸೀರೆಯನುಟ್ಟು ಹಳದಿ ಕುಪ್ಪುಸತೊಟ್ಟುಎಸೆವ ಚಿನ್ನಾಭರಣನಿಟ್ಟು ಮೆರೆವವಳಿಗೆ 2 ಪ್ರತ್ಯಕ್ಷಾಪ್ರತ್ಯಕ್ಷ ಶಕ್ತಿಯ ದೇವಿಗೆನಿತ್ಯ ಸಂಸಾರಿಗಗತ್ಯವಿರುವವಳಿಗೆ 3 ಕುಲಗೋತ್ರವೆಣಿಸದಲೊಲಿಯುವ ದೇವಿಗೆನೆಲೆಗೊಡದ ಚಂಚಲೆಮಾಲಕುಮಿದೇವಿಗೆ 4 ಮದನನ ಮಾತೆಗೆ ಪದುಮಲಯಳಿಗೆಗದುಗಿನ ವೀರನಾರಾಯಣನ ಸತಿಗೆ 5
--------------
ವೀರನಾರಾಯಣ
ಮಹಾಲಕ್ಷ್ಮಿ ಅಮ್ಮಾ ಲಕುಮಿದೇವಿ ನಿಮ್ಮರಸನ ತೋರೆ ಸುಮ್ಮನೆ ಬಿಡುವದು ಸಮ್ಮತವೇ ನಿನಗೆ ಪ ಹೆತ್ತ ಬಾಲರು ಮಂದಮತಿಗಳಾದರೆ ತಾಯಿ ಸತ್ತು ಹೋಗಲಿ ಎಂದು ಎತ್ತದೆ ಬಿಡುವೊಳೆ 1 ನಿಮ್ಮ ಮಾತಿಗೆ ಹರಿ ಸಮ್ಮತನಾಗುವ ಕುಮತಿಗಳೆಣಿಸದೆ ರಾಮ ಮೂರುತಿ ತೋರೆ2 ಸಿಂಧುತನಯೆ ಎನ್ನ ಬಂಧ ಬಿಡಿಸಿ ಬೇಗ ಪಾದ ಪೊಂದಿರುವಂತೆ ಮಾಡೆ 3 ತತ್ವೇಶರೆಲ್ಲರೂ ನಿತ್ಯಾಧೀನರು ನಿಮಗೆ ಭೃತ್ಯಗೆ ನಿಜ ಹರಿ ಭಕ್ತಿ ಕೊಡುವಂತೆ ಪೇಳೆ 4 ಎನ್ನಲಿರುವ ಹೀನರೋಡಿಸಿ ಬೇಗ ಪನ್ನಗಾಚಲವಾಸ ಶ್ರೀ ನರಹರಿ ತೋರೆ 5
--------------
ಪ್ರದ್ಯುಮ್ನತೀರ್ಥರು
ಶ್ರೀ ಪಾಂಡುರಂಗ ಪ್ರಾರ್ಥನೆ ಪಾದ ಅಮಿತ ನೀಲಮೇಘಶ್ಯಾಮ ವಿಠಲನ್ನ 1 ಶಿಲೆಯನುದ್ಧರಿಸಿರ್ಪ ಪಾದಕೆ ಬಲಿಯ ಮೆಚ್ಚಿದ ಪಾದಕಮಲಕೆ ನಲಿವಿನಿಂದಲಿ ನಮಿಸಿ ಪೊಗಳುವೆಕಲಿಮಲಂಗಳನೆಲ್ಲ ತರಿಯುತತಲೆಯೊಳಾಶೀರ್ವಾದವೀಯಲು ಬಿದ್ದು ಬೇಡುವೆನು 2 ಕ್ರೂರ ರಕ್ಕಸರುಪಟಳಂಗಳ ವೀರತನದಿಂ ಚಕ್ರದಡಗಿಸಿ ಮಾರಪಿತ ಭವದೂರ ಕಂಸರಲಿ ದಣಿಯುತಲಿ ಯಾರ ಗೊಡವೆ ನಮಗೇನು ಎನ್ನುತ ಶ್ರೀ ರಮಾವರ ದೇವಿ ಸಹಿತೀ ದಾರಿಯೋಳ್ಮಿಜ ಭಕ್ತಗಾಶ್ರಯನಾಗಿ ನಿಂತಿಹನೆ 3 ಕಾಯ ಧರಿಸಿದ ಭಕ್ತವರ್ಯನ ಮಾಯೆಯಿಂದಲಿ ನೋಡಿ ನಲಿಯಲು ಬಂದ ವಿಠ್ಠಲನೆತೋಯಜಾಕ್ಷಿಯಳಾದ ಲಕುಮಿಯರಾಯ ಶ್ರೀಹರಿ ನಿನಗೆ ಇಟ್ಟಿಗೆ ಯಾಯಿತೇ ಬಲು ಸಂಖ್ಯದಂಸನ ನಿಂತುಕೊಳ್ಳಿಲ್ಕೆ 4 ತಾತನಂಘ್ರಿಯ ಸೇವೆಗೆಯ್ದಿರು-ವಾತ ಬರ¯ಂದನಿಮಿಷಾಗ್ರಣಿ ತಾತ ನಿಂತೆಯ ಸೊಂಟದ ಮೇಲೆ ಕೈಯಿಟ್ಟುಮಾತೆಯಾದವರು ಹಾಗೆ ಸಂಗಡ ಪ್ರೀತಿಯಿಂದಲೆ ನಿಂತುಕೊಂಡಳು ಖ್ಯಾತಿಯಾಯಿತು ಪಾಂಡುರಂಗನ ಲೀಲೆ ಭಕ್ತರಲಿ 5 ಸತ್ತು ಹುಟ್ಟುವ ಬಾಧೆಯಿಲ್ಲದಸತ್ಯವಂತನೆ ಕೊಟ್ಟ ಇಟ್ಟಿಗೆ ಮೆತ್ತಗಿಹುದೆÉೀನಷ್ಟು ದಿವಸವು ನಿಂತುಕೊಂಡಿರುವೆಮತ್ತೆ ಪೇಳುವುದೇನು ದೇವನೆ ಸುತ್ತು ಮುತ್ತಿನ ಜಗಕೆ ಆಸರವಿತ್ತೆ ನಿನಗಾಸರವು ಯಾವುದು ಭಕ್ತವತ್ಸಲನೆ 6 ಹೇ ದಯಾನಿಧೆ ಯಾದವಾಗ್ರಣಿ ಮಂದವಾಖ್ಯನೆ ಭೀಮತಡೆಯೊಳು ಆದರಮ್ಮಿಗೆ ತೋರಿ ಕರೆದನೆ ನಿಮ್ಮನೀರ್ವರನು ಬಾಧೆಬಡುತೀ ನಿಂತ ಕಾಲಿಗೆಹಾದಿನೋಡುವವೆಷ್ಟೊ ಬೆಳೆಯುಚೋದ್ಯವಲ್ಲವೆ ನಿನ್ನ ಲೀಲೆಯು ದಿವ್ಯವಿಗ್ರಹನೇ 7 ಆದಿಮೂರುತಿ ನಿನ್ನ ಹುಡುಕಲುವೇದ ಶಾಸ್ತ್ರ ಪುರಾಣವೆಂಬವು ಹಾದಿ ಕಾಣದೆ ನಿಂತವಲ್ಲೈ ನೀನೆ ಬಂದೀಗಮೇದಿನೀ ತಳದಲ್ಲಿ ಭಕ್ತರಹಾದಿ ನೋಡುತ ನಿಂತುಕೊಂಡಿರೆಹೋದವೆಷ್ಟೋ ದಿವಸ ಶ್ರೀಹರಿ ನಿನ್ನ ಲೀಲೆಯಲಿ 8 ನೀಲಮೇಘ ಶ್ಯಾಮ ಕೀರ್ತಿಯ ಜಾಲವನ್ನುರೆ ಭಜನೆ ಮಾಡುತತಾಳಹಾಕುತ ಸಂತಮಂಡಳಿ ಕುಣಿದು ಬರುತಿರಲುಧೂಳವೇಳುವದನ್ನು ಕಣ್ಣಲಿವೇಳೆಗಳೆಯದೆ ನೋಡಿ ನಲಿವುದುಲೀಲೆಯಲ್ಲವೆ ಪಾಂಡುರಂಗನೆ ವಿಶ್ವಚಾಲಕನೆ9 ಸರಸಿಜಾಕ್ಷನೆ ಕರಗಳೆರಡನುಇರಿಸಿ ಟೊಂಕದೊಳೇನು ನೋಡುವಿಪರಮ ಭಕುತನ ತಂದೆ ತಾಯ್ಗಳ ಸೇವೆ ಮಾಡುವುದುದೊರೆಯಲಾರದೆ ಕಲಿಯ ಕಾಲದೆ ದುರಿತ ನೀಗಿಸಿಕೊಂಡನಲ್ಲವೆ ಆರುಗಿಯಾದರು ನೋಡಲೊಲ್ಲನು ಭಕ್ತಿಬಲದಿಂದ 10 ಚಿನ್ನದರಸನೆÉ ನಿನ್ನ ಕೈಯನುಘನ್ನ ಟೊಂಕದ ಮೇಲೆ ಇರಿಸುತನನ್ನಿಯಿಂ ಭರವಸೆಯ ಕೊಡುವಿಯೊ ಭವದ ಸಾಗರವುತನ್ನ ನಂಬುತ ದಾಟಿ ಹೋಗುವಸನ್ನುತಾತ್ಮರಿಗಿಷ್ಟಯೆಂಬುದ ಚೆನ್ನವಾಗಿಯೆ ತಿಳಿಸಲೋಸುಗ ಹೀಗೆ ನಿಂತಿಹೆಯಾ 11 ನಾನು ನಿನ್ನನು ಕರೆಯದಿದ್ದರು ನೀನೆ ಬಂದಿಲ್ಲೇಕೆ ನಿಂತೆಯೊ ದೀನಪಾಲಕನೆಂಬ ಬಿರುದನೆ ಕಾಯಲೋಸುಗವೇಶಾನೆ ಸಂಪದವಿದ್ದ ದ್ವಾರಕೆ ಯಾನೆ ಕುದುರೆಗಳಿಂದ ಶೋಭಿಪ ದಾನವಾಂತಕ ಕೃಷ್ಣರಾಯನೆ ಈಗ ಪಂಡರದೀ 12 ಕರ್ಮ ಮುಗಿದಿಹುದೇಮಿಕ್ಕಿದವರೇನನ್ಯಯ ಪುತ್ರರೆ ತಕ್ಕ ಯೋಚನೆಗೆಯ್ದು ನಂತರತೆಕ್ಕೆಯೋಳ್ಸಲಹುವದು ಲೇಸೈ ಭಕ್ತವತ್ಸಲನೆ 13 ಹಾಲು ಮೊಸರಾ ಬೆಣ್ಣೆಯುಂಡೆಯ |ಲೀಲೆಯಿಂದಲೆ ಕದ್ದ ಕಳ್ಳನೆಚ್ಯಾಳಿಬಲಿತಾ ಬಳಿಕ ಬಿಡುವೆಯಾ ಭಕ್ತರಂತಹರಗಾಳಿ ಸೋಂಕಿದ ನೆವ ಮಾತ್ರಕೆಜಾಲಬೀಸುತ ಕದ್ದು ಕೊಳ್ಳುವಿಹೇಳಲೇನೈ ಹಿಂದಿನೆಷ್ಟೊ ಜನ್ಮದಘನಿದನಾ 14 ನಿನ್ನನೇ ನೆರೆ ನಂಬಿ ಭಜಿಸುವಪುಣ್ಯವಂತರ ಹೃದಯಮಂದಿರ-ವನ್ನೆಮಾಡಿದ ಪಾಂಡುರಂಗನೆ ನೀನು ಜಗದೊಳಗೆಘನ್ನ ಪಾಪದಿ ಬಳಲುತಿರುವವ-ರನ್ನುಸಲುಹಲು ಬಂದೆಯೇನೈಸನ್ನುತಾಂಗನೆ ಭಜನಿಗೊಲೆಯುವ ದಿವ್ಯ ವಿಠ್ಠಲನೆ 15 ವೇದಗಳ್ಳನ ಸದೆದು ಬ್ರಹ್ಮಗೆ ಮೋದದಿಂದಲಿ ಕೊಟ್ಟ ಮತ್ಸ್ಯನೆಆದಿಕೂರ್ಮನೆಯಾಗಿ ಮಂದರನೆಗಹಿ ನಿಂದವನೇಬಾಧೆÉ ಬಿಡಿಸುವ ಕ್ರೂರ ರಕ್ಕಸಭೇದಿಯಾಗುತ ಧರಣಿ ಮಂಡಲಸೇದಿ ತಂದನ ನೀನೆಯಲ್ಲದೆ ದಿವ್ಯ ವಿಠ್ಠಲನೆ 16 ಒಂದೆ ಮನದೊಳು ನೆನೆದ ಕುವರಗೆಬಂದೆ ಕಂಬದೆ ನಾರಸಿಂಹನೆನಿಂದ ಮಾತ್ರಕೆ ಮೂರು ಪಾದದ ಭೂಮಿದಾನದಲೀತಂದು ಪಾತಾಳದಲಿ ಬಲಿಯನುಚಂದದಿಂದಲಿ ಇಟ್ಟ ವಾಮನತಂದೆಯಾಡಿದ ನುಡಿಯ ನಡಿಸಿದ ಭಾರ್ಗವತ್ತೀ 17 ಸೀತೆಗೋಸುಗ ರಾಮನಾಗುತಖ್ಯಾತಿಗೋಸುಗ ಕೃಷ್ಣನಾದೆಯಲೇಪ್ರೀತಿಗೋಸುಗ ಬಾಧ್ಯನಾಗುತ ಜಗವ ಪಾಲಿಸಿದ್ಯಾಜಾತಿಯಶ್ವವನೇರಿ ರಿಪುಗಳÁತ ಮಾಡಿದ ಕಲ್ಕ್ಯರೂಪನೇಯಾತಕೀಪರಿ ಚಂದ್ರಭಾಗದಿ ನಿಂತೆ ಬೆರಗಾಗಿ 18 ನಿನ್ನ ನಾಮಗಳಮಿತವಿದ್ದರುನನ್ನ ನಾಲಿಗೆಗಷ್ಟು ಬರುವವೆ ?ಸನ್ನುತಾಂಗನೆ ಪಾಂಡುರಂಗನೆ ದಿವ್ಯ ವಿಠ್ಠಲನೆನ್ನುತಿಷ್ಟೇ ನಾಮಗರೆವೆನುಚಿನ್ನದರಸನೆ ಭಕ್ತಸಂಘದೊಳೆನ್ನ ಕೂಡಿಸಿ ಕಾಯಬೇಕೈ ಪರಮ ಭಗವಂತಾ 19 ಕಾಲಕಾಲಕೆ ನೇಮನಿತ್ಯಗ-ಳಾಲಯಂಗಳ ಮಧ್ಯದೆಸಗದೆಜಾಲಿಯಂತೇಗೆಲ್ಲ ಜನರಿಗೆ ಬೆಳೆದೆ ಬಾಧಿಸುತಬಾಲ ಯೌವನ ವಾರ್ಧಿಕತ್ವದೆಕಾಲಪೋಯಿತು ನಿನ್ನ ನೆನೆಯದೇ ಹೇಳಲೇನೈ ಕಾಲನೆಳೆಯುವನು 20 ಕಂತು ಜನಕನೆ ನಿನ್ನ ನಾಮದಮಂತ್ರವೆನಗಿನ್ನೆಲ್ಲಿ ಬರುವುದು ಶುದ್ಧ ಪಶುವಾದೇಅಂತರಾತ್ಮನೆ ನೀನು ಈ ತೆರನಿಂತುಕೊಂಡರೆ ನನ್ನ ಗತಿಯೇ-ನೆಂತ ಹೇಳಲಿ ಸಂತೆ ತೀರಿತು ಸಲಹೊ ವಿಠ್ಠಲನೇ 21 ಕಾಲ ಬಂದಿದೆಸದ್ಯಕಾರೂ ಕಾವರಿಲ್ಲವುದ್ಧಪಾಶದಿ ಬಿಡಿಸಬಾರೈ ದೀನ ಬಾಂಧವನೇ 22 ಕಾಯಕಿರುವದ ಬಂಧು ಬಳಗವು ಹೇಯ ದುಡ್ಡನೆ ಶಳಯಲೋಸುಗಜೀಯ ನಿನ್ನಂತಾರು ಇಲ್ಲವು ಜೀವಕನು ಸರಿಸೀತಾಯ ತಂದೆಯ ಜಗಕೆ ಲಕ್ಷ್ಮೀರಾಯ ನೀನೇ ಅಲ್ಲವೇನೈ ಬಾಯ ಬಿಡುವೆ ಅಜ್ಞಬಾಲರ ಕಾಯೊ ವಿಠ್ಠಲನೇ 23 ಅಣ್ಣನಾಗುತ ದ್ರುಪದ ಸುತೆಗಾಬಣ್ಣದಂಚಿನ ಸೀರೆ ಉಡಿಸಿದೆನಿನ್ನ ಬಾಲ್ಯದ ಸುಖ ಸುಧಾಮಗೆ ಕೊಟ್ಟಿಯ್ಯೆಸಿರಿಯಹಣ್ಣಿನಾಶೆಗೆ ಶಬರಿ....ಗೊಲಿದೈಬೆಣ್ಣೆಯಾಶೆಗೆ ಗೋಪಿಗೊಲಿದೈಮಣ್ಣಿನಾಶೆಗೆ ಬಲಿಯ ಬಾಗಿಲ ಕಾಯ್ದ ವಿಠ್ಠಲನೇ 24 ನಿನ್ನ ನೆಂದು ಕಾಣದಿದ್ದವಕುನ್ನಿ ಪಾಮರನಣ್ಣನೆಂಬೆನೆಹಣ್ಣು ಹಂಪಲವೆನಗೆ ಸಾಲವು ನಿನಗೆ ಕೊಡಬಹುದೇನನ್ನ ತೆರದಾಚಾರ ಹೀನರೆಇನ್ನು ಗೆಳೆಯರು ನನಗೆ ಆದರುಮುನ್ನ ಮಾಡಿದ ಪಾಪ ಬಹಳಿದೆ ಕೊಳ್ಳೊ ನೀನದನೂ 25 ಹಿರಿಯರೆಸಗಿದ ಪುಣ್ಯದಿಂದಲೆದೊರಕಿತಲ್ಲವೆ ನಿನ್ನ ನೆನೆವುದುಪರಮ ಸುಂದರ ಪಾಂಡುರಂಗನೆ ಬಾರೊ ಮಾನಸದೀತರಳರಾಟದಿ ತನ್ನ ತಾಯಿಯಮರೆತ ತೆರದಿಂ ಬಿಟ್ಟು ಕೆಟ್ಟೆನುಕರಗದೇನೈ ನನ್ನ ಮನವದು ನಿನ್ನ ದೆಶೆಯಿಂದ 26 ಕೂಸು ಆಟದೊಳಿದ್ದರೇನೈಹೇಸಿ ಕೆಲಸಹೊಳಿದ್ದರೇನೈದೋಷಗಳೆಯುತ ಪೊರೆವಳಲ್ಲಿದೆ ಪಡೆದ ತಾಯವ್ವಶ್ರೀಶ ವಿಠ್ಠಲ ಪಾಂಡುರಂಗನೆಘಾಸಿಗೊಳಿಸುವ ಮುನ್ನಯವನರುಪಾಶ ಬಿಡಿಸೈ ಭಕ್ತವತ್ಸಲ ದಿವ್ಯ ವಿಠ್ಠಲನೇ 27 ಕಾಮನಯ್ಯ ಸುಧಾಮ ಸಖ ಶ್ರೀರಾಮ ವಿಠ್ಠಲ ದಿವ್ಯ ರೂಪನೆಪ್ರೇಮವೆನ್ನಲ್ಲಿಟ್ಟು ಸಲಹೊ ಪುಣ್ಯವರ್ಜಿತನೆತಾಮಸತ್ವದ ಕೆಲಸವೆಲ್ಲವನೇಮದಿಂದಲೆ ಮಾಡಿ ನಾ ನಿ-ಸ್ಸೀಮನಾಗಿಹೆ ಕಾಯೆಯೊ ವಿಶ್ವವ್ಯಾಪಿ ವಿಠ್ಠಲನೇ 28 ನಾನು ಹೇಳುವುದೇನು ದೇವನೆನೀನೆ ತಿಳಕೊಂಡಿರ್ಪೆ ಎನ್ನಯಮಾನಕುಚಿತಪ್ಪಂತೆ ಸತ್ಫಲ ಕೊಡು ದಯಾಂಬುಧಿಯೇನೀನು ನಿಂvಡೆÉಗೆನ್ನ ಜಗ್ಗುತಸಾನುರಾಗದೆ ಪೊರೆಯೊ ವಿಠ್ಠಲನೀನೆಯಾದರು ಬಾರೊ ಭಕ್ತರ ಹೃದಯ ಮಂದಿರಕೆ 29 ಮಂಗಳಂ ಮಧುಕೈಟಭಾರಿಗೆಮಂಗಳಂ ಶ್ರೀವತ್ಸಧಾರಿಗೆಮಂಗಳಂ ಬ್ರಹ್ಮಾಂಡ ಪಾಲಕ ಪಾಂಡುರಂಗನಿಗೆಮಂಗಳಂ ಶ್ರೀ ಲಕುಮಿದೇವಿಗೆಮಂಗಳಂ ಭೀಮಾತಟಾಕಿಗೆಮಂಗಳಂ ಸದ್ಭಕ್ತ ಮಂಡಳಿಗೆಗಳ ಭೂತಳಕೆ 30
--------------
ಪಾಂಡುರಂಗ
ಸಖಿ ನೋಡ ದ್ವಾಪರ ಯುಗವ ದ್ವಾಪರಯುಗವ ಅಪಾರ ಭಾಗ್ಯವ ಶ್ರೀಪತಿ ಇವರಿಗೊಲಿದಿರುವ ಸಖಿ ಪ. ಪಾದ ಬಲ್ಲಷ್ಟು ಬಲಗೊಂಡುಗೊಲ್ಲರ ಅರಸು ಜನಿಸಿದ ಗೊಲ್ಲರ ಅರಸು ಜನಿಸಿದ ಯುಗ ಧರ್ಮಎಲ್ಲವಿಸ್ತಾರ ರಚಿಸುವೆ ಸಖಿ 1 ಅಕ್ಕ ದ್ವಾಪರ ಧರ್ಮ ಶಕ್ಯವೆ ವರ್ಣಿಸಲುಲಕುಮಿದೇವಿಗೆ ವಶವಲ್ಲಲಕುಮಿದೇವಿಗೆ ವಶವಲ್ಲ ಯುಗಧರ್ಮತಕ್ಕಷ್ಟು ಹೇಳಿ ರಚಿಸುವೆ ಸಖಿ2 ಭೂಪ ದ್ವಾಪರದಲ್ಲೆ ಪಾಪಿ ಒಬ್ಬನಿಲ್ಲತಾಪಕೋಪಗಳು ಮೊದಲಿಲ್ಲತಾಪಕೋಪಗಳು ಮೊದಲಿಲ್ಲ ಧರೆ ಮ್ಯಾಲೆ ತಾಪಸ ಜನವೇ ಹರವಿತ್ತು ಸಖಿ 3 ಅಕ್ಷಯ ದ್ರವ್ಯವಲಕ್ಷ್ಯವಿಲ್ಲದಲೆ ಕೊಡುವೋರುಲಕ್ಷ್ಯವಿಲ್ಲದಲೆ ಕೊಡುವೋರು ರಂಗನ ರಕ್ಷೆಯ ಮಾಡಿಜೈಸೋರು ಸಖಿ 4 ಕೃಷ್ಣನ ಪಾದದಲೆ ನಿಷ್ಠೆಯುಳ್ಳವರನ್ನುದೃಷ್ಟಿಲೆ ನೋಡಿ ಸಹಿಸದೆದೃಷ್ಟಿಲೆ ನೋಡಿ ಸಹಿಸದೆ ಧರೆಮ್ಯಾಲೆ ಪುಟ್ಟಿದನಾಗ ಕಲಿಬಂದು ಸಖಿ5 ಸತ್ಯಶೌಚ ಆಚಾರ ಉತ್ತಮ ಧರ್ಮತತ್ವವಿಚಾರ ಮೊದಲಿಲ್ಲತತ್ವವಿಚಾರ ಮೊದಲಿಲ್ಲ ಧರೆ ಮ್ಯಾಲೆ ದೈತ್ಯಮಯವಾಗಿ ಜಡದಿತು ಸಖಿಯೆ 6 ಹರಿಗುರುಗಳರಿಯದ ಪರಮ ಪಾಮರಜನ ಧರೆಯ ಮೇಲಾಗ ಜನಿಸಿತುಧರೆಯ ಮೇಲಾಗ ಜನಿಸಿತು ರಾಮೇಶನಪರಮ ಭಕ್ತರನ ದಣಿಸಿತು ಸಖಿಯೆ 7
--------------
ಗಲಗಲಿಅವ್ವನವರು
ಸವಿದುಣ್ಣ ಬಾರಯ್ಯ ಸಾರಾಭೋಕ್ತಾ ಪವನಾಂತರ್ಗತ ಕಪಿಲಾತ್ಮ ನರಸಿಂಗಾ ಪ ಉಪ್ಪು ಉಪ್ಪಿನಕಾಯಿ ಪತ್ರ ಶಾಖ ಸೂಪ ಒಪ್ಪುವ ಸಂಡಿಗೆ ವ್ಯಂಜನಗಳು ಇಪ್ಪವು ನಿರುಋತಿ ಪ್ರಾಣ ಮಿತ್ರ ಶೇಷ ಸರ್ಪವೈರಿ ದಕ್ಷ ಲೋಕೇಶನಲ್ಲಿಗೆ 1 ಅನ್ನ ಮಂಡಿಗೆ ತೈಲ ಪಕ್ವಂಗಳು ಪರ ಮಾನ್ನ ಭಕ್ಷ ತುಪ್ಪ ಹುಳಿ ಪದಾರ್ಥ ಬೊಮ್ಮ ಜಯಂತರೈ ಸೂರ್ಯ ಕನ್ಯ ಲಕುಮಿದೇವಿ ಪರ್ವತ ಸುತಿ ಇರೆ2 ಕ್ಷೀರ ನವನೀತಧಿಕಾರಣಾಮ್ಲ ಚಾರು ಉದ್ದಿನ ಭಕ್ಷ ಕಟು ದ್ರವ್ಯ ಪಾ ವಾರಿಜಾಸನ ರಾಣಿ ವಾಯು ಸೋಮ ವೈರಿ ಧರ್ಮ ಸ್ವಾಯಂಭುವಂಗಳು ಅಲ್ಲಿ ಹಾಕಿರೆ 3 ಇಂಗು ಯಾಲಕ್ಕಿ ಸಾಸಿವೆಯಿಂದ ವೊಪ್ಪುತಾ ಬಂಗಾರ ಪಾತ್ರಿಯೊಳಗೆ ತಂದಿಡೆ ಸ್ವಾದೋದಕ ಇಡೆ ಅಂಗಜಾ ದುರ್ಗಿಯ ಚಂದ್ರಮಸುತನಿರೆ 4 ವೀಳ್ಯವ ಕೈಕೊಳೊ ಗಂಗಾಜನಕ ಹರಿ ಅಲ್ಲಲ್ಲಿಗೆ ನಿನ್ನ ರೂಪವುಂಟು ಬಲ್ಲಿದಾ ವಿಜಯವಿಠ್ಠಲರೇಯ ಎನಗಿದೆ ಸಲ್ಲೊದೆ ಸರಿ ಲೇಶವಾಪೇಕ್ಷದವನಲ್ಲ5
--------------
ವಿಜಯದಾಸ