ಒಟ್ಟು 7 ಕಡೆಗಳಲ್ಲಿ , 2 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಕಂಡೆನು ಹರಿಯ | ಭವಹಾರಿಯ ಇಂದು ಕಂಡೆನು ಕಂಬದಿಂದಲಿ ಪ ಬಂದು ದೈತ್ಯನ ಕೊಂದು ಕಂದನಿ- ಗಂದು ಒಲಿದಾನಂದ ಸಾಂದ್ರನ ಇಂದಿರಾ ಮಂದಿರನ ವಂದ್ಯನ ಅ.ಪ. ಎಂದಿನಂದದಿ ಬರುತ | ಮನದಲಿ ಶ್ರೀ ಮು- ಕುಂದ ನಾಮವ ನೆನೆಯುತ ಮುಂದು ಮುಂದಕೆ ನಡೆಯುತ | ಆ- ನಂದದಿ ಹೋಗುತಲಿರೆ ಸುಂದರಿ ಶ್ರೀ ತುಲಸಿಗೊಲಿದು ಬೃಂದೆಯನು ಕರವಿಡಿದು ಪೊಳೆದು ಬಂದು ಗಂಡಕಿಯಿಂದ ಭಕ್ತರ ವೃಂದ ಪೊರೆಯಲು ಪಥದಿ ನಿಂದನ1 ಸುಕೃತ | ಬಂದೊದಗಿತೊ ಶ್ರೀಶನೆನಗೆ ದೊರೆತ | ಪ್ರಭಾವದೆ ದುರಿತ | ರಾಶಿಯು ಇನ್ನು ದಾಸರಾಯರ ಕುಲದಿ ಜನಿಸಿದ ಕೂಸೆನುತ ದೇಸಿಗರ ಸೇವೆಗೆ ಮೀಸಲಾಗಿಸಲೋಸುಗೆನ್ನ ಮ- ಹಾಶಯವ ಲೇಸೆನಿಸಿ ಬಂದವ 2 ವಿಕಳ ತತಿಗೆ ಬಾಧಕ | ಈತನ ನಾಮ ಪ್ರಕಟಿಸಲಿನ್ನು ಸುಖ | ಪಾಲಿಸುವನು ಯುಕುತಿಗೆಂದಿಗು ನಿಲುಕ | ಸುಕೃತರಿಂದ ಭಕುತಿ ಸೇವೆಯನೊಂದೆ ಕೊಳ್ಳುವ ಭಕುತಿ ಮುಕುತಿಗಳನ್ನು ಕೊಡುವ ಸಕಲ ಕಾಲದಿ ನಿಂತು ಸಲಹುವ ಲಕುಮಿಕಾಂತನ ಸರ್ವ ಶಕ್ತನ 3
--------------
ಲಕ್ಷ್ಮೀನಾರಯಣರಾಯರು
ಗುರುರಾಘವೇಂದ್ರರ ಚರಣವ ಸ್ಮರಿಸಿರೊ ಪ ಗುರುರಾಘವೇಂದ್ರರ ಚರಣವ ಸ್ಮರಿಸಲು ದುರಿತ ರಾಶಿಗಳೆಲ್ಲ ಕರಗಿ ಪೋಗುವುವುಅ.ಪ. ಮಧ್ವ ಮತಾಬ್ಧಿಯೊಳುದ್ಭವಿಸಿದಂಥ ಶುದ್ಧ ಪೂರ್ಣಿಮ ಚಂದ್ರ ಸದ್ಗುಣ ಸಾಂದ್ರ 1 ಸುಧೀಂದ್ರ ಯತಿಕರ ಪದುಮ ಸಮುದ್ಭವ ಸದೆಯ ಸದಾರ್ಚಿತ ಪದ ನುತ ಖ್ಯಾತ2 ಬಂದಂಥ ಭಕುತರ ವೃಂದವ ಪೊರೆಯಲು ಕುಂದದೆ ವರಮಂತ್ರ ಮಂದಿರದೆಸೆವ 3 ನಿರುತದಿ ಭಜಿಸುವ ವರಗಳ ಕೊಡುವ 4 ಸಕಲಾತರ್ಯಾಮಿಯು ಲಕುಮಿಕಾಂತನೆಂದು ಪ್ರಕಟಿಸಿ ಮೆರೆದರ್ಭಕನಂಶಜರೆಂದು 5
--------------
ಲಕ್ಷ್ಮೀನಾರಯಣರಾಯರು
ನಿತ್ಯ ಸು- ಮಂಗಳೆಗತಿಶಯದಿ ಪ ಮಂಗಳಾರತಿ ಎತ್ತಿ ತುಂಗಮಹಿಮ ಶ್ರೀ ರಂಗನ ರಾಣಿಗೆ ಅಂಗನೆ ತುಳಸಿಗೆ ಅ.ಪ. ಕಡಲೊಳು ಸುಧೆ ಹಿಡಿದು | ಬಂದನು ಕಡು ಕರುಣಿಯು ಒಲಿದು ಕುಡಿಗಣ್ಣಿನ ಜಲ ಸಡಿಲಲು ಕಲಶದಿ ಒಡನೆ ಜನಿಸಿದಂತ ಮಡದಿ ಶ್ರೀ ತುಲಸಿಗೆ 1 ಸುರರು ಪೂಮಳೆಗರೆಯೆ | ಹರುಷದಿ ಕರವ ಪಿಡಿಯೆ ವರವನು ಪಡೆದಳು ಶರಣರ ಪೊರೆಯಲು ಧರೆಯೊಳು ಬಂದಿಹ ಕರುಣಿ ಶ್ರೀ ತುಳಸಿಗೆ 2 ನಿತ್ಯ | ಸೇವಿಪ ಸಕಲ ಜನಕೆ ಸತ್ಯ ಭಕುತಿ ಮುಕುತಿಯಿತ್ತು ಸುಕೃತರ ಮಾಡುವ ಲಕುಮಿಕಾಂತನ ಪ್ರೇಮಸಕುತೆ ಶ್ರೀ ತುಳಸಿಗೆ 3
--------------
ಲಕ್ಷ್ಮೀನಾರಯಣರಾಯರು
ನಿನಗೇನೊ ಭಕುತರ ಚಿಂತೀ ಘನಮಹಿಮ ಮಹÀದಾದಿ ಸುರವಂದ್ಯ ತಿಮ್ಮಾ ಪ ಪರಮೇಷ್ಟಿ ನಿನಪುತ್ರ ಕಿರಿಯ ಮಗನು ಜಗತ್ಪ್ರಾಣದೇವಾ ಹಿರಿಯ ಸೊಸೆಯು ವಾಣಿ ಕಿರಿಯು ಭಾರತೀ ದೇವಿ ಸುರರು ಪರಿವಾರ 1 ಸಕಲಲೋಕಕೆ ಅರಸು ಲಕುಮಿಕಾಂತನು ಎಂದು ನಿಖಿಳವೇದ ಸ್ಮøತಿಯು ಸಾರುತಿಹದೋ ಅಖಿಳವ್ಯಾಪಕನಾಗಿ ಸಕಲಸುರನರರಿಂದ ಭಕುತಿಪೂರ್ವಕÀ ಓಲಗವಕೈಕೊಂಬ ಸಮಯದಲಿ 2 ಸುರನಾಥ ನೀನಲ್ಲದಿತರ ದೇವತೆಯುಂಟೆ ಸರವೋತ್ತಮಾನೆಂಬನಾವನವನೋ ಸರಸಗುಣನಿಧಿಯೆ ಶ್ರೀ ಗುರುಜಗನ್ನಾಥವಿಠಲ ವರಭಾಗ್ಯ ಮಬ್ಬಿನಲಿ ಇರುವೊ ಸಮಯದಲಿ 3
--------------
ಗುರುಜಗನ್ನಾಥದಾಸರು
ಭವ ಭಯಂಕರ ಪ ಶಂಕರ ತ್ವತ್ಪದ ಪಂಕಜದಲಿ ಮನ ಶಂಕೆಯಿಲ್ಲದೆ ಕೊಟ್ಟು ಕಿಂಕರನನು ಪೊರೆ 1 ಮೃತ್ಯುಪಾಶಕೆ ಸಿಕ್ಕಿ ತತ್ತರಿಸುತಲಿದ್ದ ಭಕ್ತನ ಸಲಹಿದ ಮೃತ್ಯುಂಜಯ ಸಲಹೆನ್ನ 2 ವಿಷವು ಆವರಿಸಲು ತ್ರಿದಶರು ಬೇಡಲು ನಸುನಗುಗಲಿ ವಿಷ ಧರಿಸಿದ ಸದಾಶಿವ 3 ಶಿವಶಿವಾವಲ್ಲಭ ಭವಾಭವ ಪ್ರಭವನೆ ಭುವನ ಪವಿತ್ರನೆ ಭವಹರ ಸಲಹೆನ್ನ 4 ಅಂಬಿಕನಾಥನೆ ನಂಬಿದೆ ನಿನ್ನನೆ ಶಂಭುವೆ ಭಕ್ತನ ಬೆಂಬಿಡದೆಲೆ ಪೊರೆ 5 ಅಷ್ಟ ವಿಭೂತದ ಅಷ್ಟಮೂರ್ತಿಯೆ ಪದ ಮುಟ್ಟಿ ಭಜಿಪ ಮನ ಕೊಟ್ಟು ರಕ್ಷಿಸು 6 ದಿಗಂಬರ ದಯಾಕರ ಭಗೀರಥ ಹಿತಕರ ಅಘಹರ ಮೃಗಧರ ಹಗರಣಗೊಳಿಸಿದೆ 7 ವಿಘ್ನಪ ಜನಕನೆ ಅಜ್ಞತೆ ಬಿಡಿಸಯ್ಯ ಸುಜ್ಞನೆ ಭವಾಂಬುಧಿ ಮಗ್ನನನುದ್ಧರಿಸಯ್ 8 ಲಕುಮಿಕಾಂತನ ಪ್ರಿಯಸÀಖನೆ ಶ್ರೀಕಂಠನೆಭಕುತಿ ಭಾಗ್ಯವನೀಯೊ ಶಕುತ ಬಿಡದೆ ಕಾಯೊ 9
--------------
ಲಕ್ಷ್ಮೀನಾರಯಣರಾಯರು
ಮಧ್ವಮತವ ಪೊಂದಿ ಭಜಿಸಿರೊ | ಉದ್ಧಾರವಾಗಲು ಮಧ್ವಮತವ ಪೊಂದಿ ಭಜಿಸಿರೊ ಪ ಮಧ್ವಮತವ ಪೊಂದಿ ಭಜಿಸಿ ಶುದ್ಧ ಜ್ಞಾನ ಭಕುತಿಗಳಿಸಿ ಗೆದ್ದು ಈ ಭವಾಬ್ಧಿಯನ್ನು ಪದ್ಮನಾಭನ ಪಾದವ ತೋರೆ ಅ.ಪ. ನಾನೆ ವಾಸುದೇವನೆಂದು ಹೀನ ಪೌಂಡ್ರಕನು ತಾನು ಏನು ಗತಿಯ ಕಂಡನೆಂದು ಜ್ಞಾನದಿಂದ ತಿಳಿದು ಮುನ್ನ 1 ಹರಿಯೆ ಸರ್ವೋತ್ತಮನು | ವಿಶ್ವ ವಿರುವುದಯ್ಯ ಸತ್ಯವಾಗಿ ತಾರತಮ್ಯ ಪಂಚಭೇದ ಸ್ಥಿರವೆಂದು ಸಾರಿಪೇಳ್ವ 2 ಭಕುತಿಯಿಂದ ಸೇವಿಪ ಜನಕೆ ಮುಕುತಿಯಲ್ಲಿ ನೈಜ ಸುಖವ ಲಕುಮಿಕಾಂತನು ಪಾಲಿಪನೆಂದು ಯುಕುತವಾಗಿ ಪ್ರಕಟಿಸಿದಂತ 3
--------------
ಲಕ್ಷ್ಮೀನಾರಯಣರಾಯರು
ಮನ್ನಿಸೆನ್ನ ವೆಂಕಟರನ್ನ ಅನ್ಯಥಾ ಗತಿಗಾಣೆ ನಾ ಪ ಹಲವು ಜನುಮದಿ ಬಂದೆ ಬಲು ಪರಿಯಲಿ ನೊಂದೆ ತೊಳಲಿ ಬಳಲಿ ನಿಂದೆ ಸಲಹೊ ತಂದೆ 1 ವಾಸವ ವಂದಿತ ಕೇಶವ ಅಚ್ಯುತ ದಾಸರ ಮನ ಹಿತ ಬಾ ಶಾಶ್ವತ 2 ಲಕುಮಿಕಾಂತನೆ ಎನ್ನ ಉಕುತಿ ಲಾಲಿಸಿ ಘನ್ನ ಭಕುತಿ ಪಾಲಿಸೊ ಮುನ್ನ ಮುಕುತೀಶನೆ3
--------------
ಲಕ್ಷ್ಮೀನಾರಯಣರಾಯರು