ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನನುದ್ಧರಿಸಲು ಘನ್ನ ಬಿರುದುಗಳು ಪ ಇನ್ನು ಉನ್ನತವಾಹವು ಕೇಳೊ ಹರಿಯೆ ಅ.ಪ ಅನವರತದಿ ದುರ್ವಿಷಯ ಲಂಪಟದೊಳು ಚನ್ನಾಗಿ ಪತಿತ ಎನ್ನಂತಜಾಮಿಳನೆ ಇನ್ನಿದು ತಿಳಿದು ನೀ ಎನ್ನ ಪೂತನ ಮಾಡೆ ನಿನ್ನನಿಮಿತ್ತ ಬಂಧುತನವೆ ವೆಗ್ಗಳವೊ 1 ಮನ್ನಿಸಿದವನಲ್ಲ ಪೂಜಿಸಲಿಲ್ಲ ತನ್ನ ಸಂಬಂಧಿಯು ಮೊದಲಿಗನಲ್ಲ ಎನ್ನಂತೆ ಗಜೇಂದ್ರನೆ ಎನ್ನನುದ್ಧರಿಸಲು ನಿನ್ನ ಪತಿತಪಾವನತೆ ಘನ್ನವೊ 2 ಏಸಪರಾಧ ಮಾಡಿದ ಚೈದ್ಯಾದಿಗಳು ಈಸಪರಾಧ ರಾಶಿಗಳ ಮಾಡಿದರೆ ವಾಸುದೇವವಿಠಲ ಎನ್ನ ರಕ್ಷಿಸಲು ಸೂಸುವುದೋ ನಿನ್ನ ಭಕುತ ವಾತ್ಸಲ್ಯತನವೊ 3
--------------
ವ್ಯಾಸತತ್ವಜ್ಞದಾಸರು
ದಾತ ಅಂಬುಜಾಸನ ತಾತ ಕುಂಭಿಣಿಯೊಳು ಪುಟ್ಟಿ ಜನನಿಯ ಮೊಲೆ ಪಾಲು ಉಂಬೋದು ಬಿಡಿಸೊ ಜನನವ ಕೆಡಿಸೊ ಪ ರಸಿಕೆ ಮುಹಕದಲಿ ನಿಶಿದಿನದಲಿ ಹೊರಳಿ ಅಸುರುಸುರೆನುತಲಿ ಹಸಗೇಡಿಯಾದೆನೊ ಪರಿ ನೊಂದು 1 ಹಲವು ಲಂಪಟದೊಳು ಹಲುಬಿ ಹಕ್ಕಲನಾದೆ ಬಲೆಯೊಳಗಿದ್ದ ಎರಳೆಯಂತೆ ಮಿಡುಕುತ ಮಲಮೂತ್ರದೊಳು ಬಳಲಿದೆ ಕೇಳೊ 2 ಎಳ್ಳನಿತು ಸತ್ಕರ್ಮವುಳ್ಳದ್ದು ಚರಿಸಿದೆ ಬಲಿಷ್ಠ ನಾನೆಂದು ಬಲು ದುರ್ಮತಿಯಿಂದ ಎಲ್ಲರ ಜರಿದೆ ಧರ್ಮವ ಮರೆದೆ 3 ಚಾರುವಾಕರಗೂಡಿ ಮೂರೆ ವಿಕಾರದಲ್ಲಿ ನೀರೇರ ಒಡಗೂಡಿ ನೀತಿ ನಿರ್ಣಯ ತೊರೆದು ಬಟ್ಟೆ 4 ಎಲ್ಲಿರಲು ನಿನ್ನವನೋ ಅಲ್ಲವೆಂದೆನಿಸದೆ ಬಲ್ಲಿದರೊಡಿಯ ವಿಜಯವಿಠ್ಠಲ ನಿ ನ್ನಲ್ಲಿ ಸೇರಿಸಿ ಎನ್ನ ಪೊರೆಯೋ ಪ್ರಸನ್ನಾ 5
--------------
ವಿಜಯದಾಸ