ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದಯರಾಗ ಜನಿಸಲಾರೆನು ಜಗದೊಳಗೆ ಹರಿಯೆ ಪ ಕನಸಿನೊಳು ನೆನೆಯೆ ಕಂಪನವಾಗುತಿದೆ ಮನಕೆ ಅ.ಪ ವಾರಿಮಂಡಲ ವೃಷ್ಟಿಧಾರೆ ಧಾರುಣಿ ಜನಕ ದ್ವಾರದಿಂ ಸರಿದುಪೋಗಿ-ಸಾಗಿ ಜಾರಿ ಜನನೀ ಜಠರ ನಾರುವ ದುರ್ಗಂಧ ಸೇರಿ ಬೊಬ್ಬುಳಿಯ ತೆರದಿ-ಭರದಿ ವಾರಿವಾರಕೆ ಬೆಳೆದು ತಾರಿತಗಲಿ ಬಳಲಿ ಶರೀರವನ್ನೆ ಪೊತ್ತು-ತೆತ್ತು ಖಾರ ಕಟು ಲವಣಾದಿ ಘೋರತರ ಮಹಕ್ಲೇಶ ವಾರಿಧಿಯೊಳಗೆ ಮುಳುಗಿ ಮರುಗಿ ಸೊರಗಿ 1 ಲೇಶಾವಕಾಶವಿಲ್ಲದ ದೇಶದೊಳು ಸನ್ನಿ ವಾಸ ಉಲ್ಬಣದೊಳಿದ್ದು-ಕುದ್ದು ಘಾಸಿಯಲ್ಲಿ ಪರಿತಾಪ ಸೂಸಲು ಹಾಹಾಯೆಂಬ ಘೋಷಧ್ವನಿಯಿಂದ ಬೆದರಿ-ಅದರಿ ರೋಷವಾಗಿದ್ದ ಕ್ರಿಮಿರಾಶಿ ಮುಖ ಕಾಟದಿಂ ಏಸು ಬಗೆಯಿಂದ ನೊಂದು ಬೆಂದು ಶ್ವಾಸ ಬಿಡುವುದಕೆ ವ್ಯತ್ಯಾಸವಾಹುದು ಮುಂದೆ ಮೋಸಗೊಂಡು ಮತಿಗೆಟ್ಟು ಬೇಸರಿಕೆ ಅಕಟಕಟ 2 ಜಾನು ಮಧ್ಯದಲಿ ಶಿರಗೋಣು ತೂರಿಸಿಕೊಂಡು ಮಾಣದಲೆ ಬಿಕ್ಕಿ ಬಿಕ್ಕಿ-ಸಿಕ್ಕಿ ಏನೆಂಬೆ ಮಸೆದುಕ್ಕಿನ ಬಾಣ ಪೆಟ್ಟಿನ ಸಮ- ಬೇನೆಯಿಂದಧಿಕವಾಗೆ ಮೈಗೆ ಮೇಣು ಕೈಕಾಲುಗಳು ಕಾಣಿಕಾ ಕಾಲವಗ- ಲಾನು ಚರಿಸದಾದೆನೊ ಇನ್ನೇನೊ ಗಾಣ ತಿರುಗಿದಂತೆ ಗೇಣು ಬೈಲೊಳಗೆ ಈ ಆ-ನನ ಮೇಲಡಿಯಾಗಿ ಬಂದೆ-ನೊಂದೆ 3 ಸೂತಿಕಾಮರುತ ಬೀಸಿದಾತುರಕೆ ಬೆಸಸುವ ಯಾತನೆಗೆ ಕಾಣೆ ಲೆಖ್ಖ-ದು:ಖ ಗಾತುರವು ಕಿರಿದಾಗಿ ಪೋತಭಾವವ ವಹಿಸೆ ಭೂತಳಕೆ ಉಗ್ಗಿಬಿದ್ದು-ಎದ್ದು ಶೀತೋಷ್ಣ ಮಲರೋಗ ಭೀತಿ ಲಾಲನೆಯಿಂದ ಮಾತೆಯ ಮೊಲಿಯನುಂಡು-ಉಂಡು ಆ ತರುವಾಯ ಉಪನೀತ ವಿವಹಗಳಲ್ಲಿ ವ್ರಾತ ಕೈಕೊಂಡೆನಯ್ಯ ಜೀಯ 4 ಯೌವನದಿ ಚತುರ್ವಿಂಶತಿ ತತ್ವಜ್ಞಾನವ ಜರಿದು ಯುವತಿಯರ ರೂಪಲಾವಣ್ಯ ನೋಡಿ-ಬಾಡಿ ನೆವನೆವದಿ ಭೋಗಗಳ ಸವಿ ಸವಿದಿಪೇಕ್ಷಿಸಿ ಭವನ ಭವನವÀನು ಪೊಕ್ಕು -ಸೊಕ್ಕು ಅವರಿವರ ಜಾತಿಯೆನ್ನದೆ ಮಾತುಗಳನಾಡಿ ದಿವರಾತ್ರಿಯಲ್ಲಿ ಹೊರಳಿ-ಉರುಳಿ ಕವಿಜನರ ಧಿಕ್ಕರಿಸಿ ಕೋಣನಂತೆ ಸದಾ ಕಾಲ ಕಳೆದೆ ಉಳಿದೆ 5 ಹೆಂಡ್ರು ಮಕ್ಕಳಿಗಾಗಿ ಎನ್ನ ಹಿತಮನೆ ಮರೆದು ಕಂಡಕಂಡವರ ಕಾಡಿ-ಬೇಡಿ ಉಂಡುಟ್ಟು ಸುಖಪಟ್ಟು ಪಾರತ್ರಯವ ಜರೆದು ಕೊಂಡೆಯಲಿ ನಿಪುಣನಾಗಿ ತೂಗಿ ಮಂಡೆಯನು ಬಲಿತ ಪಶುವಿನಂತೆ ಮದವೇರಿ ಚಂಡ ವೃತ್ತಿಯಲಿ ನಡೆದು-ನುಡಿದು ಹಿಂಡು ಮಾತೇನು ಈ ಜರೆನರೇ ಬಂದೆನ್ನ ಲಂಡತನ ಪೋಗದಕಟ್ಟ-ಉಂಬೆ ವಿಕಟ 6 ನಾನಾ ಯೋನಿಗಳಲ್ಲಿ ಬರಲಾರೆ ಬರಲಾರೆ ನಾನು ಪೇಳುವುದು ಏನೋ-ಇನ್ನೇನೊ ನೀ ನೋಡಿದರೆ ಅನ್ಯ ಕಾವ ದೈವರ ಕಾಣೆ ಮಾನಸದೊಳಗೆ ಒಮ್ಮೆ-ಇಮ್ಮೆ ದೀನರಕ್ಷಕ ಬಿರುದು ಅನವರತ ನಿನ್ನದು ಎಣಿಸದಿರು ಎನ್ನ ದೋಷ ಲೇಶ ಶ್ರೀನಾಥ ವಿಜಯವಿಠ್ಠಲರೇಯ ನೀನೊಲಿದು ಧ್ಯಾನದಲ್ಲಿ ಬಾರೊ ನಿಜ ಮೂರುತಿಯ ತೋರೊ 7
--------------
ವಿಜಯದಾಸ
ಯಾದವರಾಯ ಮಾರಬೇಕು ಮೊಸರಾಬಾರೆ ಗೊಲ್ಲ ಮೊಸರು ಮೊಸರೆನುತಲಿ ಮೇಲು-ಗೇರಿಗೆ ಬರುತಿರೆ ಕಂಡು ನೀಲವರ್ಣದ ಗೋವಳಸೆರಗು ಪಿಡಿದು ಲತಾಂಗಿಯ ತಡೆದಾ 1 ಮೊಸರ ಮಾರಬಂದವಳಲಿ ಸೆಣಸದಿರುಶಶಿನೀರೆ ಎಲ್ಲೆಂದಡತನವೆ ಬೇಡ ಈವಸುಧೆಯೊಳರಸಿಲ್ಲವೆ ನೀ ದೂರಸಾರಲೋಪಶುಗಾಹಿ ಬಿಡು ಎನ್ನ 2 ಲಂಡತನವು ನಮ್ಮೊಡನೆ ಕೊಳ್ಳವು ಹೋಗುಕಂಡ ಕಂಡವರಿಗಂಜುವುದ ಬಿಟ್ಟು ನನ್ನದಂಡೆಯ ಪಿಡಿಯದಿರೋ ನಾ ಸಸಾರಲ್ಲೊಗಂಡನುಳ್ಳವಳು ಕಾಣೋ 3 ಉಟ್ಟ ಸೀರೆಯ ಪಿಡಿದೆಳೆಯದಿರೆಲವೋಪಟ್ಟಣ ಕೊಡೆಯರಿಲ್ಲವೆ ಹೇಳಾಪಟ್ಟಗಟ್ಟಿತೆ ನಿನಗೆ ನಾ ಹೇಳುವೆಕಟ್ಟೆಯ ತಳವಾರಗೆ 4 ಶಂಕಶೂರರುಹನ ಪಂಕಜಗಜನಿಮ್ಮಡೊಂಕ ದುರುಬಿಗೆ ಅಂಜುವಳಲ್ಲಬೋಂಕನೆ ಒಳಗಾದರೆ ಕಡೆಗೆ ನಮ್ಮಮಂಕುಮಾಡಿತು ಗೋವಳಾ 5 ಇತ್ತಿತ್ತ ಬಾರೆಲೆ ಸಖಿಮುತ್ತಿನ ಹಾರವನೀವೆ ಎನ್ನಒತ್ತಾರೆ ಕುಳಿತರೆ ಪದಕವನೀವೆ ಎನ್ನಅರ್ತಿಯ ಸಲಿಸಿದರೆ ನಾ ನಿನಗೆಮುತ್ತಿನೋಲೆಯನೀವೆನೆ6 ಅಣಿ ಮುತ್ತಿನ ಕಂಠಮಾಲೆಯ ನಿನಗೀವೆಜಾಣಿಗೊಲ್ಲತಿ ಬಾಲೆ ಎಲೆ ಬಾಲೆ ನಿನ್ನಜಾಣ ಜಡೆ ಲಕ್ಷ್ಮೀನಾರಾಯಣನ ನೆನೆವುತ7
--------------
ಕೆಳದಿ ವೆಂಕಣ್ಣ ಕವಿ
ದಯೆಮಾಡಿ ಸಲಹಯ್ಯ ಭಯನಿವಾರಣನೆ |ಹಯವದನ ನಾ ನಿನ್ನಚರಣನಂಬಿದೆ ಕೃಷ್ಣಪಕ್ಷಣಕ್ಷಣಕೆ ನಾ ಮಾಡಿದಂಥ ಪಾಪಗಳೆಲ್ಲ |ಎಣಿಸಲಳವಲ್ಲಷ್ಟು ಇಷ್ಟು ಎಂದು ||ಫಣಿಶಾಹಿ ಅವಗುಣವ ನೋಡದೇಚರಣಸ್ಮ-ರಣೆಯ ಮಾಡುವಂಥ ಭಕುತಿಯನಿತ್ತು 1ಕಂಡ ಕಂಡ ಕಡೆಗೆ ಪೋಪ ಚಂಚಲಮನಸುಲಂಡತನದಲಿ ಬಹಳ ಭ್ರಷ್ಟ ನಾನು ||ಭಂಡಾಟದವನೆಂದು ಬಹಿರಂಗಕೆಳೆಯದೆ |ಕೊಂಡಾಡುವಂಥ ಭಕುತಿಯನಿತ್ತು ಸಲಹಯ್ಯ 2ಜಾತಿಧರ್ಮವ ಬಿಟ್ಟು ಅಜಮಿಳನು ಇರತಿರಲು |ಪ್ರೀತಿಯಿಂದಲಿ ಮುಕುತಿಕೊಡಲಿಲ್ಲವೆ ||ಖ್ಯಾತಿಯನುಕೇಳಿಮೊರೆಹೊಕ್ಕೆ ದಯಾನಿಧಿಯೆ -ಬೆ-|ನ್ನಾತು ಕಾಯಯ್ಯ ಶ್ರೀ ಪುರಂದರವಿಠಲ 3
--------------
ಪುರಂದರದಾಸರು
ನೋಡುನೋಡು ನೋಡು ಕೃಷ್ಣಾ |ಹೇಗೆ ಮಾಡುತಾನೆ |ಬೇಡಿಕೊಂಡರೆ ಬಾರ ಕೃಷ್ಣ |ಓಡಿ ಹೋಗುತಾನೆ ಪಕಂಡಕಂಡವರ ಮೇಲೆ ಕಣ್ಣು ಹಾಕುತಾನೆ |ಉಂಡು ಉಂಡು ಮುಸುಕನಿಟ್ಟು ಮಲಗಿಕೊಳ್ಳುತಾನೆ ||ಲಂಡತನವ ಮಾಡಿ ಮಾಡಿ ಮಣ್ಣ ಗೋರುತಾನೆ |ಭಂಡು ಮಾಡಿ ಬಾಗಿಲೊಳಗೆ ಚೀರಿಕೊಳ್ಳುತಾನೆ 1ಕರುಣವಿಲ್ಲದಲೆ ಬಂದು ಕಾಲಲೊದೆಯುತಾನೆ |ಶರಣು ಹೊಕ್ಕರೆಯು ತಾನು ಕೊಡಲಿ ಮಸೆಯುತಾನೆ ||ಹರಿಯುವ ವಾನರರ ಕೊಡ ಹಾರಾಡುತಾನೆ |ಸಿರಿಕೃಷ್ಣ ಹಾಲು - ತುಪ್ಪ ಸೂರೆಮಾಡುತಾನೆ 2ಬಾಲೆಯರಿಗೆ ವರವನಿತ್ತು ಪುರವ ಕೆಡಿಸುತಾನೆ |ನೀಲಗುದುರೆಯನೇರಿ ಹಾರಿಸಾಡುತಾನೆ ||ಬಾಲಕರ ಕೂಡಿಕೊಂಡು ಕುಣಿದಾಡುತಾನೆ |ಲೋಲಪುರಂದರ ವಿಠಲ ತಾನು ಕುಣಿಯುತಾನೆ3
--------------
ಪುರಂದರದಾಸರು