ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳಿರೈ ಶಿವಶರಣರು ಹೇಳಲಂಜಿಕೆ ಆವುದು ಪ ಭಾಳನೇತ್ರನ ಭಕ್ತರಿಂತು ನೋಡಿಕೊಳ್ಳಿರೈಅ ಮೂರುಲಿಂಗ ತನ್ನೊಳು ಮುಖ್ಯವಾಗಿರುವಾಗಬೇರೊಂದು ಲಿಂಗ ಬೆಲೆ ಮಾಡಿ ತಂದುತೋರುವಂಗೈಲಿಟ್ಟು ತೋಯ ಪುಷ್ಪವ ನೀಡಿಯಾರ ಮನಕೊಪ್ಪಿಸುವರೀ ಶೀಲವಂತರು 1 ಲಿಂಗವೊಂದು ತನ್ನೊಳು ಲೀನವಾಗಿರುವಾಗಅಂಗಭವಿಗಳು ಕೂಡಿ ಆಡಿಕೊಂಬರುಅಂಗದನುಭವದರ್ಥವನರಿಯದ ಇಂತಹಭಂಗಿ ಹುಚ್ಚರೆಲ್ಲ ಶಿವನ ಭಕ್ತರಹರೆ 2 ನಾಗಲಿಂಗ ತನ್ನೊಳು ನಾಟ್ಯವಾಡುತಲಿರಲುಆಗಮಿಸಿದ ಲಿಂಗವ ಬೆದಕಲೇತಕ್ಕೆಕಾಗಿನೆಲೆಯಾದಿಕೇಶವನೆ ನಾಗಶಯನನಾಗಿರಲು ಬೇರೊಂದನರಸಲೇತಕ್ಕೆ 3
--------------
ಕನಕದಾಸ
ದೇವತಾಸ್ತುತಿ ಅಂಜಿಕೆ ಬರುತಾದವ್ವ ನಿನ್ನನು ನೋಡ ಲಂಜಿಕೆ ಬರುತಾದವ್ವ ಪ ಅಂಜಿಕೆ ಬರುತಿದೆ ಮಂಜುಳಾಂಗಿಯೆ ನಿನ್ನ ಮಂಜುಳ್ವಾಕ್ಯಕೆ ತಪಭಂಗವಾದದ್ದು ಕೇಳಿ ಅ.ಪ ಪತಿಗೆ ನೀ ಮೃತ್ಯುವಾದೆವ್ವ ಮತ್ತು ನೀನು ಸುತರಿಗೆ ಕಷ್ಟಕೊಟ್ಟೆವ್ವ ಸತಿಯಾಗಿ ತಮ್ಮಗೆ ಭಾವನ್ನ ಕೊಲ್ಲಿಸಿದಿ ಮತಿಗೇಡಿ ಅಣ್ಣನ ಸತ್ಯನಾಶನ ಗೈದಿ 1 ಶಾಪಕೊಡಿಸಿದೆವ್ವ ಪತಿಯಿಂದ ಶಾಪವ ಪಡಕೊಂಡೆವ್ವ ಶಾಪಕೊಡಿಸಿ ಮುಖ ಕಪ್ಪು ಮಾಡಿಟ್ಟೆವ್ವ ಬಸಿರು ಮಾಡಿಟ್ಟೆವ್ವ 2 ಪತಿಗೆ ವಂದಕಳಾದೆವ್ವ ಮೀರಿದ ತಾಯಿ ಪತಿ ಪ್ರೀತಿ ಕಳಕೊಂಡೆವ್ವ ಸುತನ ಕತ್ತಿಯಿಂದ ಕುತ್ತಿಗೆ ಕೊಯ್ಸಿಕೊಂಡು ಪತಿತಪಾವನಳಾಗಿ ಮತ್ತೆ ಮುಂದಕೆ ಬಂದಿ 3 ಗರಡಿಯ ಮನೆ ಹೊಕ್ಕೆವ್ವ ಪತಿಯಕೈಲೆ ದುರುಳನ್ನ ವಧಿಸಿದವ್ವ ಧುರಕೆ ನಿಲ್ಲನೆ ಮತ್ತೆ ಕುರುಪನ ಕುಲಮೂಲ ತರಿಸಿದಂಥ ಮಹಮರಗಿ ನೀನವ್ವ 4 ಮಾತ್ಯಾಗಿ ಪಡೆದ್ಹಡದವ್ವ ಮತ್ತು ನೀನು ಸತಿಯಾಗಿ ನಡೆದೆ ಅವ್ವ ರೀತಿ ತಿಳಿಯಿತು ನಿನ್ನದ್ಯಾತರ ಭೀತಿನ್ನು ದಾತ ಶ್ರೀರಾಮನ ಪ್ರೀತಿ ದಾಸರಿಗೆ 5
--------------
ರಾಮದಾಸರು
ಪಕ್ಕಿವಾಹನ ದಯಸಿಂದು ನೀ ಎನ್ನ ಚಿಕ್ಕ ಮನತುರಗವನ್ನು ನೀನೆ ತಿದ್ದೊ ಪ ಕತ್ತಲೆಯೊಳು ಬಲು ಕಾಲಕಳದೆಯಾಗಿ ಮತ್ತೆ ಬೆಳಕು ಕಂಡು ಬೆದರುತಿದೆ ಕತ್ತಲಂಜಿಕೆ ತೋರಿ ಬೆಳಕಿನ ರುಚಿಯನು ಇತ್ತು ಕುಶಲಗತಿ ಕಲಿಸಯ್ಯ 1 ಹಿಂದಕ್ಕೆ ತಿರಗದೆ ತಾನಾಗಿ ಬ್ಯಾಗನೆ ಮುಂದಕೆ ನಡೆದು ಪರರ ಬೆಳಸುಗಳ ಒಂದನ್ನ ಬಯಸದೆ ಪದ್ಧತಿ ಬಿಡದಂತೆ ಒಂದಾಗಿ ಗಮ್ಯಸ್ಥಾನವ ಸೇರಿಸಯ್ಯ 2 ವಿಧಿನಿಷೇಧಗಳೆಂಬ ಗಿಲಕಿಯ ದನಿಗೈಸಿ ಹೆದರಿಸೊ ಸನ್ಯಾಯ ಕಶದಿಂದಲೀ ಮುದದಿ ಭಕುತಿ ಗುಣವ ಕೊರಳು ಕಟ್ಟಿ ಬಿಗಿದು ಪದುಮಾಕ್ಷ ನಿನ್ನ ಪಾದವ ಸ್ತುತಿಸಯ್ಯ 3 ಉತ್ತಮ ಗುಣವುಳ್ಳ ವಾಜಿಯಿದನೆ ಮಾಡಿ ವಸ್ತು ಎನ್ನದು ಮಾತ್ರವೆಂದೆನಿಸಿ ಚಿತ್ತಕೆ ಬಂದಂತೆ ಇದಿರಾರು ನೀ ನಿತ್ಯ ಹತ್ತಿ ಹರಿಸುವನು ಸನ್ಮತವೆನಗೆ 4 ಲೇಸಾದಾ ಹಯಗಳೊಳು ನೀನೆವೆ ಜಗದೊಳು ಲೇಸು ಮಾಡಿದೆಯೆಂಬ ವಾರ್ತಿ ಕೇಳಿ ವಾಸುದೇವವಿಠಲ ನಿನಗೆ ಬಿನ್ನೈಸಿದೆ ದಾಸನ ಮಾತು ಲಾಲಿಸೆ ಕಾಯೋ ಸರ್ವೇಶ5
--------------
ವ್ಯಾಸತತ್ವಜ್ಞದಾಸರು
ಬೆಂಕಿಗಿರುವೆಗಳ ಕಾಟುಂಟೇ ಹರಿ ಭವ ಭಯಮುಂಟೆ ಪ ಪಂಕಜಸಖನಿಗೆ ಕತ್ತಲಂಜಿಕೆಯುಂಟೆ ಪಂಕಜಾಕ್ಷನ ಧ್ಯಾನಕ್ಕೆಣೆಯುಂಟೆ ಅ.ಪ ವಜ್ರಾಯುಧಕೆ ಗಿರಿ ಉಳಿಯಲುಂಟೆ ಗಂಗೆ ಮಜ್ಜನದಿಂ ಮೈಲಿಗೆಯಿರುಲುಂಟೆ ಸಜ್ಜನರಿಂಗೂಡಿ ನಿರ್ಜರೇಶನ ಭಜ ನ್ಹೆಜ್ಜೆಜ್ಜ್ಹಿಗಿರೆ ಜನ್ಮ ಬರಲುಂಟೆ 1 ಮೌನಧಾರಿಗೆ ಅಭಿಮಾನ ಉಂಟೆ ನಿಜ ಧ್ಯಾನಿಕರಿಗೆ ಹೀನ ಬವಣೆಯುಂಟೆ ಜ್ಞಾನದೊಳೊಡಗೂಡಿ ಗಾನಲೋಲನ ಪಾದ ಆನಂದಕರಿಗಿಹ್ಯಸ್ಮರಣುಂಟೆ 2 ತಾಮಸ್ಹೋಗಲು ಕ್ಷೇಮ ಬೇರುಂಟೆ ದು ಷ್ಕಾಮಿ ತಳೆಯಲು ಮುಕ್ತಿದೂರುಂಟೆ ಭೂಮಿಗಧಿಕ ನಮ್ಮ ಸ್ವಾಮಿ ಶ್ರೀರಾಮನ ಪ್ರೇಮಪಡೆದ ಮೇಲೆ ಬಂಧ ಉಂಟೆ 3
--------------
ರಾಮದಾಸರು
ನಿದ್ರೆಯ ಬಿಟ್ಟೇಳಿದಧಿಮಥಿಸುವೇಳಿ ಬಲಭದ್ರ ಬಾಲಕೃಷ್ಣರುಲುಹು ಕೇಳಬರುತಿದೆ ಗಡಾ ಪ.ಗೊಲ್ಲರೆಳೆಯರ ಕೂಡಿ ಗೋಪಿಯ ಕುಮಾರರೀಗೆಚೆಲ್ಲಿಯಾಡಿ ಸೂರೆ ಮಾಡುತಾರೆ ಮೊಸರಚೆಲ್ಲೆಗಂಗಳೆಯರೊಳು ಸರಸವಾಡುತಲಿಹರೆಮೆಲ್ಲಗೆ ಸಪ್ಪಳಿಲ್ಲದೆ ಮನೆಯ ಪೊಗುವರಮ್ಮ 1ಕೇರಿ ಕೇರಿಯೊಳು ಹುಯ್ಯಲಿಡುತ ಬಂದರದಕೊಚೀರುತೈದಾರೆ ಬೆನ್ನಟ್ಟಿ ನಾರಿಯರಕೊಆರಿಗೆ ವಶವಾಗರು ದೂರುತಾರೆ ಬಾಲೆಯರುಧೀರ ಚೋರರಲ್ಲುದಾರ ಗೋರಸ ಉಣ್ಣುತಾರವ್ವ 2ಪೊಸಬೆಣ್ಣೆಯ ಕಂಡರೆ ಬಿಡರು ನಮ್ಮ ದೇವರಮೀಸಲಂಜಿಕೆಯಿಲ್ಲದುರುಳಮಕ್ಕಳಿಗೆಶಿಶುಗಳಟ್ಟುಳಿಯಾಗದ ಮುನ್ನೆಚ್ಚರವಮ್ಮಪ್ರಸನ್ನವೆಂಕಟಕೃಷ್ಣ ಬರುವ ನೋಡಿರಮ್ಮ 3
--------------
ಪ್ರಸನ್ನವೆಂಕಟದಾಸರು