ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯದೇವ ಜಯದೇವ ಜಯಜಯ ಹನುಮಂತಾ | ದಯದೊಲವಿಂದಲಿ ಸಲಹು ಜಯ ಕೀರುತಿವಂತ ಪ ಅಂಜನೆ ಉದರದಿ ಬಂದು ಮೌಂಜೀಬಂಧನದಿ | ಕಂಜ ಸಖನ ಮಂಡಲ ತುಡಕಲು ಹವಣಿಸಿದಿ | ಭಂಜನೆ ಇಲ್ಲದೆ ರಾಮರ ಸೇವೆಗೆ ತತ್ಪರದಿ | ರಂಜಿಸುವಂದದಿ ಮಾಡಿದೆ ಇಳೆಯೊಳು ತನುಮನದಿ 1 ರಘುಪತಿ ಮುದ್ರೆಯ ಕೊಂಡು ಸಾಗರ ಲಂಘಿಸಿದೆ| ಭುಕುತಿಲಿ ಜಾನಕಿದೇವಿಗೆ ಅರ್ಪಿಸಿ ಕೈಮುಗಿದೆ | ಯಕುತಿಲಿ ವನವನೆ ಕಿತ್ತಿ ಲಂಕೆಯ ಸದೆಬಡಿದೆ| ಮಗುಳೆ ಪ್ರತಾಪದಿ ಬಂದು ಅಜಪದವಿಯ ಪಡೆದೆ 2 ಮೂರವತಾರ ನೀ ಆಗಿ ಪರಿಪರಿ ಚರಿತೆಯನು | ದೋರಿದೆ ಜಗದೊಳು ಅನುಪಮ ಹರಿಪ್ರಿಯನಾದವನು | ಚಾರು ಭಕ್ತೀಭಾವ ಪ್ರೇಮವ ಕಂಡವನು | ಅನುದಿನ ಮಹೀಪತಿನಂದನು ನಿಮ್ಮವನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎನ್ನ ಪಾಲಿಸು ಪರಮಕಾಯ ರಘುರನ್ನ ರಾಮನ ಪ್ರಿಯ ಗುರುಮಧ್ವರಾಯ ಪ.ಅಂಜನಿ ಆತ್ಮದಲಿ ಬಂದು ರಾಮನಪಾದಕಂಜವಿಡಿದೆ ಕಡಲ ಲಂಘಿಸಿದೆ ಗೋಷ್ಪದದಿಪಂಜು ಬೆಳಗಿದೆ ನಿಶಾಚರನ ಪಟ್ಟಣವಳಿದೆಕಂಜಾಕ್ಷಿಯಳ ತುಷ್ಟಿಗೈದೆ ಗಡಾಸಂಜೀವ ತಂದು ಕಪಿಬಲವ ರಕ್ಷಿಸಿದೆ 1ಕುರುಕುಲಾಧಮನು ಬಲುಸೊಕ್ಕಿ ಸಂಗರಭಟರನೆರಹಿ ಪಾರ್ಥರ ಬಲವ ಗೆಲುವೆನೆಂದವನ ಭರಮುರಿದೆ ಮಹರಥಿಕರೆದೆ ಹರಿದೆ ಅಸಹಾಯ ಶೂರಸರಿಯಾರು ನಿನಗಸಮಧೀರ ಭಾಪುಕರುಣಾಸಾಗರ ಉದಾರ ಅಜಪದದಧಿಕಾರ 2ಏಕವಿಂಶತಿಮಾಯಿ ರಚಿತ ಭಾಷ್ಯವ ಜರಿದೆಶ್ರೀಕಾಂತನ ನಾಮಾಮೃತವ ಭಕ್ತರಿಗೆರೆದೆಭೂಕನಕ ವಧು ವಿಷಯಕಾಂಕ್ಷೆಗಳ ಮೇಲೊದೆದೆಲೋಕಕೊಬ್ಬನೆ ಗುರುವೆ ಮೆರೆದೆ ವಿಶ್ವೇಶ ಪ್ರಸನ್ನವೆಂಕಟೇಶನಂಘ್ರಿವಿಡಿದೆ 3
--------------
ಪ್ರಸನ್ನವೆಂಕಟದಾಸರು