ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರಾಹಿತ್ರಾಹಿ ಮಂತ್ರಾಲಯನಿಲಯ ಪ ತ್ರಾಹಿತ್ರಾಹಿ ಮಂತ್ರಾಲಯ ಗುರುವೆ ಸೂತ್ರನಪಿತಕೃಪಾಪಾತ್ರ ನೀನಹುದೊ1 ಧ್ಯಾನ ಮೌನ ಸುಜ್ಞಾನವಿಲ್ಲದಿಹ ದೀನ ಜನರುದ್ಧಾರ ಗಂಭೀರ 2 ವಸುಧೆಯೊಳಗೆ ದಶಪ್ರಮತಿ ಸುಶಾಸ್ತ್ರವ ಪ್ರಸರಿಸಿ ತೋರಿದ ಅಸಮಮಹಿಮನೆ3 ಮೂಕ ಬಧಿರ ಅಂಧಾದಿಗಳ ಕುಂದುಗಳ ವ್ಯಾಕುಲ ಹರಿಪ ಕೃಪಾಕರ ಮೂರ್ತೇ 4 ಕರುಣಶರಧಿ ಸಿರಿರಮಣನ ಭಕುತಾಗ್ರಣಿ ಸುಗುಣಗಣಾಭರಣಕೆಣೆಯೆ 5 ಬೇಡಿದಿಷ್ಟವ ನೀಡಿ ಕಾಪಾಡುವೆ ಈಡುಗಾಣೆ ನಿನಗೀ ನಾಡೊಳು ಇನ್ನು 6 ಇಂದು ಮುಂದು ಎನ್ನ ಕುಂದುಗಳೆಣಿಸದೆ ಕಂದನೆಂದು ಎನ್ನ ಮುಂದಕೆ ಕರೆಯೊ 7 ಕ್ಷೋಣಿಯೊಳಗೆ ನಿನಗಾರೆಣೆಕಾಣೆನೊ ವೀಣೆವೆಂಕಟ ನೀ ಸಂಕಟ ಹರಿಸೊ 8 ಪಾಲಿಸಯ್ಯ ಪ್ರಹ್ಲಾದ ವ್ಯಾಸ ಭೂ ನಲ್ಲ ನೀನಹುದೋ ಬಾಹ್ಲೀಕ ಪ್ರಭುವೇ 9 ಬಗೆ ಬಗೆ ಪಾಪೌಘಗಳನು ಕಳೆಯುವ ರಘುಪತಿಕಿಂಕರ ಶ್ರೀ ರಾಘವೇಂದ್ರ 10 ಪವನಾಂತರಾತ್ಮ ಶ್ರೀ ವೇಂಕಟೇಶ ಪದ ಕುವಲಯಕೆ ನೀ ಕುಮುದಬಾಂಧವ 11 ಶಂಕುಕರ್ಣ ಲಂಕೇಶನನುಜ ಶ್ರೀರಾಮ- ಕಿಂಕರನಕಳಂಕಮೂರುತೇ12 ಮರುತಮತಾಬ್ಧಿಯ ಸಾರಸುಧೆಯನಿತ್ತೆ ಉರಗಾದ್ರಿವಾಸವಿಠಲನ ದೂತ13
--------------
ಉರಗಾದ್ರಿವಾಸವಿಠಲದಾಸರು
ದರ್ಭಶಯನ ಶ್ರೀರಾಮದೇವರ ಸ್ತೋತ್ರ ಪಂಕ ಕಳೆಯೊ ಎನ್ನ | ಕರುಣಾರಸ ಪೂರ್ಣ ಪ ಲಂಕೇಶನನು ಜಗ್ವೊಲಿದ ಹರಿಯೇ | ಆಶ್ರಿತರಿಗೆ ಧೊರೆಯೇ ಅ.ಪ. ಭವ ವಿಮುಕ್ತನಹನೂಕವಿ ಜನ ನುತ ಸತ್ಪ್ರವರ ನಿನ್ನ ಲೀಲಾ | ಲೋಕ ಶಿಕ್ಷೆಗನುಕೂಲ |ತವಕದಿ ಗೈದೆ ವಿವಿಧ ಪೂಜೆಗಳನ್ನ | ನವ ಪಾಪಾಣಗಳನ್ನ 1 ಶರಧಿ ಸಿಂಧು ಪತಿಯ ನೋಡೀ | ದರ್ಭಶಯನ ಮಾಡೀಕಪ್ಪುಗೊರಳ ಸಖ ಕುಪಿತನಾಗೆ ನೀನೂ | ಬೆದರಿ ಬಿನ್ನವಿಸಿದನೂಒಪ್ಪಿ ಬಂಧಿಸಿದೇ ಸೇತುವೆಯನ್ನಾ | ಭಕ್ತರಿಗೆ ಪ್ರಸನ್ನಾ 2 ಸಿರಿ ಮಾಧವ ಶ್ರೀನಲ್ಲಾ | ಗುರು ಗೋವಿಂದ ವಿಠ್ಠಲ |ಮಾತು ಮಾತಿಗೆ ಕೊಡು ತವ ಲೀಲಾ | ಉಚ್ಚರಿಸುವ ಸೊಲ್ಲಾ 3
--------------
ಗುರುಗೋವಿಂದವಿಠಲರು
ದುರಿತ ತರಿಯುವಾ ಪ ಯಂತ್ರೋದ್ಧಾರರಾ | ಅಂತರಂಗರಾಮಂತ್ರ ಮಂದಿರಾ | ಕಾಂತಿ ಭೂತರಾ 1 ಕುಂತಿ ಜಾತರಾ ಏ | ಕಾಂತ ಭಕ್ತರಾಸಂತ ಗುರಗಳ ನೀ | ವಿಂತು ನಂಬಿರೊ 2 ಪಂಕಜಾಕ್ಷನಾ | ಅಣಕ ಧರಿಸಿಹಾಬಿಂಕ ಗುರುಗಳಾ | ಲಂಕೇಶನನುಜರಾ 3 ಖಂಪಾತಾಳ ಭೂ | ವ್ಯಾಪಿಸಿರುವರಾಅಪಾರ ಮಹಿಮರಾ | ಕೋಪ ರಹಿತರಾ 4 ಮೂಕ ಬಧಿರರಾ | ನೇಕ ರೋಗಿಯರಾನೂಕಿ ತಾಪವಾ | ದುಃಖ ಕಳೆಯುವಾ 5 ಮಾಯಿ ಮತಗಳಾ | ಸಾಯ ಒಡೆದರಾಆರ್ಯ ಮಧ್ವರಾ | ಪ್ರೀಯ ಶಿಷ್ಯರಾ 6 ಗುರುಗೋವಿಂದ ವಿಠಲನಾ | ಚರಣ ಸರಸಿಜಾನಿರುತ ಸ್ಮರಿಪರಾ | ವರವ ಕೊಡುವರಾ 7
--------------
ಗುರುಗೋವಿಂದವಿಠಲರು