ತ್ರಾಹಿತ್ರಾಹಿ ಮಂತ್ರಾಲಯನಿಲಯ ಪ
ತ್ರಾಹಿತ್ರಾಹಿ ಮಂತ್ರಾಲಯ ಗುರುವೆ
ಸೂತ್ರನಪಿತಕೃಪಾಪಾತ್ರ ನೀನಹುದೊ1
ಧ್ಯಾನ ಮೌನ ಸುಜ್ಞಾನವಿಲ್ಲದಿಹ
ದೀನ ಜನರುದ್ಧಾರ ಗಂಭೀರ 2
ವಸುಧೆಯೊಳಗೆ ದಶಪ್ರಮತಿ ಸುಶಾಸ್ತ್ರವ
ಪ್ರಸರಿಸಿ ತೋರಿದ ಅಸಮಮಹಿಮನೆ3
ಮೂಕ ಬಧಿರ ಅಂಧಾದಿಗಳ ಕುಂದುಗಳ
ವ್ಯಾಕುಲ ಹರಿಪ ಕೃಪಾಕರ ಮೂರ್ತೇ 4
ಕರುಣಶರಧಿ ಸಿರಿರಮಣನ ಭಕುತಾಗ್ರಣಿ
ಸುಗುಣಗಣಾಭರಣಕೆಣೆಯೆ 5
ಬೇಡಿದಿಷ್ಟವ ನೀಡಿ ಕಾಪಾಡುವೆ
ಈಡುಗಾಣೆ ನಿನಗೀ ನಾಡೊಳು ಇನ್ನು 6
ಇಂದು ಮುಂದು ಎನ್ನ ಕುಂದುಗಳೆಣಿಸದೆ
ಕಂದನೆಂದು ಎನ್ನ ಮುಂದಕೆ ಕರೆಯೊ 7
ಕ್ಷೋಣಿಯೊಳಗೆ ನಿನಗಾರೆಣೆಕಾಣೆನೊ
ವೀಣೆವೆಂಕಟ ನೀ ಸಂಕಟ ಹರಿಸೊ 8
ಪಾಲಿಸಯ್ಯ ಪ್ರಹ್ಲಾದ ವ್ಯಾಸ ಭೂ
ನಲ್ಲ ನೀನಹುದೋ ಬಾಹ್ಲೀಕ ಪ್ರಭುವೇ 9
ಬಗೆ ಬಗೆ ಪಾಪೌಘಗಳನು ಕಳೆಯುವ
ರಘುಪತಿಕಿಂಕರ ಶ್ರೀ ರಾಘವೇಂದ್ರ 10
ಪವನಾಂತರಾತ್ಮ ಶ್ರೀ ವೇಂಕಟೇಶ ಪದ
ಕುವಲಯಕೆ ನೀ ಕುಮುದಬಾಂಧವ 11
ಶಂಕುಕರ್ಣ ಲಂಕೇಶನನುಜ ಶ್ರೀರಾಮ-
ಕಿಂಕರನಕಳಂಕಮೂರುತೇ12
ಮರುತಮತಾಬ್ಧಿಯ ಸಾರಸುಧೆಯನಿತ್ತೆ
ಉರಗಾದ್ರಿವಾಸವಿಠಲನ ದೂತ13