ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನಾರು ಪೇಳೆನಗೆ ನಿರುಪಮ ಬಲಪೂರ್ಣ ಮಾನವರೊಳೀ ಪರಿಯ ಶೌರ್ಯವುಂಟೆ ಪ ದಾನವಂತಕನೆಂದು ಮಾನಸಕೆ ತೋರುತಿದೆ ಪ್ರಾಣಿಗಳಿಗೆಲ್ಲಾ ನೀ ತ್ರಾಣದಾಯಕನೆ ಅ.ಪ. ಆಕಾರದಲಿ ನೋಡೆ ನರವೇಷಧಾರಿ ಪ ರಾಕ್ರಮದಿ ಪರಿಕಿಸಲು ಪರಮಪುರುಷ ಶ್ರೀಕಂಠಚಾಪವನು ಖಂಡಿಸಿದ ಕಡುಧೀರ ಕಾಕುತ್ಸ್ಥ ಶ್ರೀರಾಮನೆಂದು ತೋರುವುದೆನಗೆ 1 ಕೋದಂಡಧರ ನಿನ್ನ ಕ್ರೋಧಾಗ್ನಿಗಂಜುತ ಮ ಪಥ ಬಿಡಲು ಲಂಕೆಗೈದಿ ಆ ದಶಾಸ್ಯನ ಕಂಠಪಂಕ್ತಿಯನು ಕಳಚಿಸಿದ ಆ ದಾಶರಥಿಯು ನೀನಲ್ಲದೆ ಬೇರಿಲ್ಲ 2 ಲೋಕಕಾರಣ ನೀನೆ ಲೋಕೇಶ ಲೋಕಧರ ಲೋಕಾಂತರಾತ್ಮಕನು ಲೋಕಜನಕ ಲೋಕರಕ್ಷಕ ಸಕಲ ಲೋಕನಿಯಾಮಕನು ಏಕಮೇವಾದ್ವಿತೀಯನು ಕರಗಿರೀಶನು ನೀನೆ 3
--------------
ವರಾವಾಣಿರಾಮರಾಯದಾಸರು