ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಕಮಲಾಲಯ ರಮಣ ಜಯಪಾದಾಶ್ರಿತಭರಣ ಜಯಪೂರ್ಣಾಮೃತ ಕರುಣ ಜಯರತ್ನಾಭರಣ ಪ. ನಳಿನನಾಭನು ಪದ್ಮಲಲನೆಯರೊಡಗೂಡಿ ನಲಿವ ಕಾಲದೊಳೊಂದ ನುಡಿದ ಗೋವಿಂದ ಕಲಿಯೊಳಗವತಾರಗೊಳೆನೆಂದ ಮೊದಲಾಗಿ ಚೆಲುವೆ ದಾಸರಿಗೆನ್ನ ನೆಲೆ ತೋರ್ಪದೆಂದು 1 ಇಂದಿರೆ ತೋಷವ ತಾಳಿ ಮಂದಹಾಸದಿ ಪೇಳ್ದಳೊಂದುಪಾಯವನು ಹಿಂದೆ ಲಂಕಾಪುರದಿ ನೊಂದ ವೇದಾವತಿಯ ತಂದು ಲಗ್ನವ ಗಯ್ಯಲೆಂದು ಪೋಗುವುದು 2 ಹೀಗಾದರವತಾರವಾಗದ ಮರ್ಮವು ಸತ್ಯ ಸಾಗುವುದಖಿಳಾರ್ಥ ಭೋಗವ ನೀಡುವುದು ಈಗ ಮುನಿವ ನೆವದಿ ಸಾಗಿ ಕೊಲ್ಲಾಪುರದಿ ನಾಗಶಯನನೆ ನಿನ್ನ ನೆಲೆಯ ನಂಬಿರುವೆ 3 ವಿಕಸಿತ ಪದ್ಮಾನನೆಯ ಯುಕುತಿಯ ಮಾತಿಗೆ ಮೆಚ್ಚಿ ಸಕಲಾವತಾರ ಸಂಭೃತ ಶಕ್ತಿ ಹೆಚ್ಚಿ ಭಕುತ ವತ್ಸಲ ಭೂವರಾಹ ಮೂರ್ತಿಯ ಕಂಡು ಬಕುಳ ದೇವಿಯ ಸಹಾಯವನೆ ಕೈಗೊಂಡು 4 ರಮಾದೇವಿಯ ಕರಸಿ ಬ್ರಹ್ಮಾದಿಗಳ ಬೆರಸಿ ಬ್ರಹ್ಮ ಘೋಷವ ಬೆಳೆಸಿ ಬಹು ಸಂತೋಷಗೊಳಿಸಿ ಅಮರ ಸಭೆಯಲಿ ಭರ್ಮಪೀಠದಿ ಕುಳಿತ ನಿರ್ಮಲಾತ್ಮನ ನೋಡಿ ನಗುತೆಂದಳೊಧುವು 5 ಶುದ್ಧ ಪೂರ್ಣಾನಂದ ಶುಭಗುಣ ಗಣ ಸಾಂದ್ರ ಮುದ್ದು ಮುಖಾಂಬುಜವ ತೋರೊ ಗೋವಿಂದ ಮುದ್ದೆ ಕಸ್ತೂರಿ ಗಂಧಾ ಮೃಗಮದಾದಿಗಳಿಂದ ಮರ್ದಿಸೀದರಶಿನವ ಕೊಳ್ಳೊ ಮುಕುಂದ 6 ಹೂವ ತರುವೆನೆಂದು ಭಾಮೆಯರೊಡಗೊಂಡು ನಾವಂದು ವನದಲ್ಲಿ ನಿಂತಿರುವಲ್ಲಿ ಕಾವಿದಟ್ಟಿಯನುಟ್ಟು ಕುದುರೆ ಮೇಲಳವಟ್ಟು ಕೋವಿದ ಬಂದ್ಯಲ್ಲಿ ಕೋಪವ್ಯಾಕಿಲ್ಲಿ 7 ಮಾನಸವಾಗ ವಿಷಯದ ಮಾತುಗಳಾಡಿದ ಬಗೆಯ ನೀನಿಂದ ಮರೆತೆಯಾ ನಿನ್ನ ಸಂಸ್ಥಿತಿಯ ನಾನಾ ಚಿತ್ರದ ಗತಿಯ ನಿಜ ತುರಂಗದ ಗತಿಯ ಹೀನವಾದರೆ ಹೀಗೆ ತಾಳುವರೆ ಖತಿಯ 8 ಹಳತಾದದೊಂದಶ್ವ ಕಳದ ಚಿಂತೆಯ ತ್ಯಜಿಸು ಪೊಳೆವ ಸಾಸಿರ ಸಂಖ್ಯಗಳಲಿ ಕಣ್ಣಿರಿಸು ಬಳಲಿಸಿದವಳೆಂಬೊ ಛಲವತಾರದೆ ಮನಕೆ ನಲಿನಾಕ್ಷ ಮುಖವೆತ್ತಿ ತೋರೊ ಮಜ್ಜನಕೆ 9 ಹದಿನಾರು ಸಾವಿರ ಚದುರೆಯರನು ರಮಿಸಿ ಮೂರ್ತಿ ಸಾಕೆನಗೆ ಮದನಜನಕ ನಿನ್ನ ಮಹಾತ್ಮ್ಯಯನು ಬಲ್ಲೆ ಪದ ಪದ ಪಾಲಿಸಿದರರಸಿನ ಹಚ್ಚುವೆನು 10 ಕರಿವರ್ಣ ಸಂಕೋಚ ತರದಿರೊ ಮನದಲ್ಲಿ ಕರಿಯಾದ ಕಸ್ತೂರಿ ಪರಿಮಳವಿರದೆ ಸರಸಿಜಾತನ ಶಿರದ ಮೇಲಿರಿಸಿರುವ ಕರಕಂಜವನು ತೋರಲರಿಸಿನ ಹಚ್ಚುವೆನು 11 ಹಿಂಡು ಕೂಡಿದ ದೇವ ಮಂಡಲದೊಳಗಿಂಥ ಪುಂಡು ಮಾತುಗಳೆಂಬ ದಿಂಡೆಯಾತನವು ಗಂಡರಿದಿರು ಚಿಕ್ಕ ಹೆಂಡಿರಾಡುವ ಪರಿಯು ಪುಂಡರೀಕಾಕ್ಷ ಪಾಲಿಸು ತಪ್ಪಿದರೆಯು12 ಈ ನಿಂದಾಸ್ತುತಿಗಳನು ಧ್ಯಾನಿಸಿ ವೆಂಕಟವರನು ಮಾನಿನಿ ಪದ್ಮಾವತಿಗೆ ಮುಖವ ತೋರಿದನು ಸಾನುರಾಗದಿ ಶ್ರೀಭೂಮಾನಿನಿಯರೊಡಗೂಡಿ ತಾನಾಗಿ ದಯಮಾಡಿಲ್ಲಿಗೆ ಬಂದ ನೋಡಿ 13
--------------
ತುಪಾಕಿ ವೆಂಕಟರಮಣಾಚಾರ್ಯ
ಗೆದ್ದೆಯೊ ಹನುಮಂತಾ-ಅಸುರರಒದ್ದೆಯೊ ಬಲವಂತಾ ಪಬದ್ಧಾಂಜಲಿಯಿಂದ ರಘುಪತಿ ಪಾದವಹೃದ್ಯದಿ ಭಜನೆ ಮಾಡುವ ಬುದ್ಧಿವಂತ ಅ.ಪಅಂಜನಿಸುತನೀತ-ಲಂಕಾಪುರದಿ-ಅಕ್ಷಯನ ಕೊಂದಾತ ||ಕಂಜಾಕ್ಷಿ ಸೀತೆಯ ಕಂಡು ಮುದ್ರಿಕೆಯಿತ್ತು |ಮಂಜುಳವಾರೆಯ ತಂದ ರಾಮನ ದೂತ 1ಈರೇಳು ಜಗದೊಳಗೆ-ಇನ್ನು ಮತ್ತೆ ಯಾರು ಸರಿಯೊ ನಿನಗೆವೀರ ಮಹಾಬಲ ಶೂರ ಪರಾಕ್ರಮ |ಧೀರಸಮೀರಉದಾರ ಗಂಭೀರ2ವಾಂಛಿತಫಲವೀವ-ನಾದ ಮುಖ್ಯ- ಪ್ರಾಣ ಮಹಾನುಭಾವ ||ಕಿಂಚಿತ್ತು ಕಷ್ಟವ ಪಡಲೀಸ ಭಕ್ತರ್ಗೆ |ಪಾಂಚಜನ್ಯಪುರಂದರವಿಠಲದಾಸ3
--------------
ಪುರಂದರದಾಸರು