ಏನು ಮಾಡಿದರೆ ನಾ ನಿನ್ನ ಕಾಂಬೆಶ್ರೀನಿವಾಸನೆ ಭಕ್ತ ದೀನಜನ ಬಂಧೊ ಪ
ಪರಮೇಷ್ಠಿ ಸುತನು ಕೊಟ್ಟ ಹರಿಮಂತ್ರ ತುಷ್ಟನಾಗುತ ನರಹರಿಯದೃಷ್ಟಿಯಿಂದ ಕಂಡವನಾ ಭೆಟ್ಟಿ ಸಾಧಿಸಲ್ಯಾ 1
ಹುಡುಗತನದಲಿ ತಂದೆ ತೊಡೆಯಾಸಿಗೆ ಬರೆ ತಾಯಿ-ನುಡಿದ ಮಾತನು ಕೇಳಿ ಅಡವಿಯೊಳಗೆಮೃಡ ಶಿಷ್ಟನುಪದೇಶವನು ನಂಬಿ ವೈಕುಂಠವನುಪಡೆದಿರುವ ಬಾಲಕನ ನಡತೆ ನಂಬಿರಲ್ಯಾ 2
ಐದು ಮಂದಿ ತನ್ನ ಕಾದುಕೊಳ್ಳದೆ ಇರಲುದುರುಳನೊಬ್ಬನು ರಾಜಬೀದಿಯೊಳಗೆಕೂದಲು ಹಿಡಿದೆಳೆದು ತರಲು ಶ್ರೀಧರನೆ ಎಂದೊದರಿಮೋದಿಸಿದ ಕಾಮಿನಿಯ ಹಾದಿ ಸೇರಿರಲ್ಯಾ 3
ಸತಿ ಸಹಾಯ ವೃಂದದಿ ಸಹಾಯ ಭೂತನಾಗಿಪ್ರೀತಿಯಲಿ ಲಂಕಾನಾಥನಾಗಿಹ ಮುನಿಪೋತ ರಾಕ್ಷಸನ ಸಖ ನೀತಿ ಸಾಧಿಸಲ್ಯಾ4
ಹೇ ಸುರಾರ್ಚಿತ ಮನುಜ ಕೇಸರಿಯ ಸುರಗೀತಾವಾಸುದೇವ ದ್ವಾರಕೀಶ ಕೃಪಾ ದಾಶರಥೆಶ್ರೀವೆಂಕಟೇಶ ಬದರಿನಿವಾಸ ದಾಸರ ಕಾಯೋಆದರದಿ ಇಂದಿರೇಶ ಕರುಣಾಬ್ಧಿ 5