ಕಾಶಿಯಿಂದ ಬಂದ ಬಾಗೀರಥಿಯು ತನ್ನ
ವಾಸಕ್ಕೆ ತೆರಳಿದಳು ಲÉೀಸಾಗಿ ತನ್ಹ ಮನದ ಸಂಕಲ್ಪವು
ವಾಸಿಯಾಗಲು ತನ್ಹಾಶೆ ಪೊರೈಸಿಸಿ ಪ
ಮದದಾನೆ ತನ್ನ ಕಾಲುಗಳ ಸಂಕೋಲೆಯ
ನೊದೆದು ಕಳೆವ ತೆರದಿ
ಪದುಳದಿ ಶ್ರೀಗುರು ಮುದದಿ ಬಿಡಿಸಿ ತನ್ನ
ಸದಮಲಾನಂದವ ಸತತ ಪಡೆವೆನೆಂದು 1
ಮುತ್ತೈದೆತನದಿ ತೆರಳಿಹೋಗಬೇಕೆಂಬ
ಚಿತ್ತದಿವಿಸ್ಮರಣೆಗೈದು
ಪ್ರತ್ಯುಗಾತುಮ ಆತ್ಮಾರಾಮನ ಸಂಗಡ
ಚಿತ್ತೈಸಿದಳು ತನ್ನ ಉತ್ತಮ ಕಾಶಿಗೆ 2
ಪತಿಯ ವಚನದ ಸಂಗತಿಗಳ ಕೇಳುತ
ಅತಿ ಹಿತ ತನಗಾಗಲು
ಮತಿಗೆ ಮಂಗಲವಾದ ಮುಕುತಿಯ ಸಾಧಿಸಿ
ನುತ ವಿಮಲಾನಂದ ಸತತ ಪಡುವೆನೆಂದು 3