(ಆ) ಶ್ರೀಹರಿಯ ಗುಣಗಾನ
ಇದು ಬಲು ಸುಖಕಾಣೆ ಕೇಳಿದಕೆಣೆಗಾಣೆ ಪ
ಒದಗಿ ಬರುವ ಮೃತ್ಯುವ ಪರಿಹರಿಸುವ
ಪದುಮನಾಭನ ಪದಪದುಮಕ್ಕೆರಗುವ ಅ.ಪ
ಚಂಚಲ ಸಿರಿಗಾಗಿ ಲೋಕ ಪ್ರ-
ಪಂಚಕೆ ಬೆರಗಾಗಿ
ಸಂಚಿತ ಕರ್ಮವ ಕಳೆಯದೆ ಕಾರ್ಯವು
ಮಿಂಚಿದ ಬಳಿಕಾಯಾಸಕ್ಕಿಂತಲು1
ಚಿಂತೆಯೆಲ್ಲವ ಕಳೆದು ಮನದಿ ನಿ-
ಶ್ಚಿಂತೆಯಾಗಿ ನಲಿದು
ಅಂತರಂಗದಿ ಲಕ್ಷ್ಮೀಕಾಂತನ ತುತಿಸುತ
ಸಂತೋಷ ಶರಧಿಯಳೋಲ್ಯಾಡುವುದು 2
ಶರಣ ಜನರ ಪೊರೆವ, ದ್ವಾರಕಾ-ಪುರವರದಲಿ ತಾನಿರುತಿರುವಪರಮ ಪುರುಷ ನಮ್ಮ ಸಿರಿಕೃಷ್ಣರಾಯನಮುರಳಿಧರನ ಸೇವಿಸಿ ಸುಖಿಯಾಗುವ.3