ದಯವದೋರೋ ದೇವ ಭಕುತ
ಭಯನಿವಾರ ಅಭವ ಪ
ದಯವದೋರೋ ನಿನ್ನ ಪಾವನಪಾದ ಸು
ಸೇವಕ ಜನಮಹಜೀವ ಜಾನಕೀಧವ ಅ.ಪ
ಪಾಪಗೆಲಿಯ ಬಂದೆ ಸಂಸಾರ
ಕೂಪದೊಳಗೆ ನಿಂದೆ
ಕೋಪಜ್ವಾಲದಿ ಬೆಂದೆ ವಿಷಯ
ತಾಪತ್ರಯದಿನೊಂದೆ
ಆ ಪರಲೋಕದ ವ್ಯಾಪಾರ ಮರೆದಿಹ್ಯ
ದ್ವ್ಯಾಪಕನಾಗಿ ಬಲುತಾಪಬಡುವೆ ತಂದೆ 1
ಅಂಗಮೋಹವ ಬಿಡಿಸೋ ನಿನ್ನವರ
ಸಂಗವ ಕರುಣಿಸೊ
ಭಂಗವ ಪರಹರಿಸೊ ಜಗದವ
ರ್ಹಂಗಹನು ತಪ್ಪಿಸೊ
ಮಂಗಳಾತ್ಮ ನಿನ್ನ ಮಂಗಳಾಮೂರ್ತಿ ಎನ್ನ
ಕಂಗಳೋಳ್ನಿಲ್ಲಿಸಿ ಹಿಂಗದಾನಂದ ನೀಡು 2
ದೋಷದಾರಿದ್ರ್ಯ ಹರಿಸೊ ಮನದ
ಅಶಾಪಾಶ ಬಿಡಿಸೊ
ಹೇಸಿಪ್ರಪಂಚ ಗೆಲಿಸೊ ಸುಜನರಾ
ವಾಸ ತೀವ್ರ ಪಾಲಿಸೊ
ದೋಷನಾಶ ಜಗದೀಶ ಶ್ರೀರಾಮ ನಿನ್ನ
ದಾಸಾನುದಾಸೆನಿಸಿ ಪೋಷಿಸು ಸತತ 3