ದೋಷ ದೂರಿಸೈಯ್ಯಾ ಎನಗೆ ನೀ
ತೋಷವೀವುದಯ್ಯಾ ಪ
ಆಸವ ಶ್ರೀತುಲಸೀವಾಸನಿಲಯ ಸ-
ರ್ವೇಶಹರಿಯ ದುರ್ವಾಸ ವಿಠಲರಾಯ ಅ.ಪ.
ರಾಘವ ರಘುಕುಲ ಸೋಮನ ಸದಯ ಸ-
ರ್ವಾಘ ಹರಿದ ನಿಖಿಳಾಗಮಗಳೊಡೆಯ 1
ಯಾದವ ಯದುಕುಲ ತಿಲಕಾವ್ಯಯ ಮಧು-
ಸೂದನ ತ್ರಿದಶನು ವೇದ್ಯದಾಸ ವಂದ್ಯಾ 2
ನರಹರಿಕರುಣಾರ್ಣವ ಶರಣರ ಗುರು
ಕರುಣವಿರಿಸು ನರಸಿಂಹವಿಠಲರಾಯ 3