ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆಯರಸ ಇರಿಸು ಕರುಣಾರಸ ಇಂದಿರೆಯರಸ ವಶನಾಗು ಸರಸ ಪ. ನಿರ್ವಾಹವಿಲ್ಲದೆ ಸರ್ವಾಸೆ ತೊರದೆ ನಿರ್ವಾಣ ವಂದ್ಯ ನೀನೆ ಗತಿಯೆಂದು ನಂಬಿದೆ 1 ಕ್ಷೀಣನಾದೆನು ಗುಣ ಕಾಣದೆ ದಿನ ದಿನ ಪ್ರಾಣದಾಯಕ ನಿನ್ನಾಣೆಯಿಟ್ಟುಸುರುವೆ 2 ನುಡಿದರೆ ಶ್ರಮದಿಂದ ನಡುಗುತಲಿದೆ ದೇಹ ಕಡಲಶಯನ ಇನ್ನು ತಡವ ಮಾಡುವಿಯಾಕೆ 3 ರಕ್ತವಾರುತ ಬಂತು ಶಕ್ತಿ ಇರುವುದೆಂತು ಯುಕ್ತವಾದರೆ ಕಂತುಪಿತ ನಿನ್ನ ಸೇವೆ ಸಂತು 4 ತಾಳಲಾರದೆ ಪೇಳ್ದ ಬಾಲಭಾಷಿತವನ್ನು ಲಾಲಿಸಿ ಕ್ಷಮಿಸು ಲೋಲ ವೆಂಕಟರಾಜ 5
--------------
ತುಪಾಕಿ ವೆಂಕಟರಮಣಾಚಾರ್ಯ
ಎಂಟು ದಿನವಾಯಿತಲ್ಲೊ ಭಕ್ತ ನೆಂಟನ್ಯಾಕೆ ತಡವು ಮನೆಗೆ ಕರೆಸಯ್ಯ ಕರುಣವಿರಿಸಯ್ಯ ಪ. ಆವಲ್ಲಿ ಪೋದರು ನಿನ್ನ ಸೇವೆ ಮಾಳ್ಪ ಸುಖಕೆ ಸರಿಯಾ ಪಡೆಯದೆ ಎಲ್ಲೂ ತಡೆಯದೆ ಶ್ರೀವಲ್ಲಭ ನಿನ್ನ ಕಾಂ¨ ಭಾವನೆಯಿಂದೆನ್ನ ಮನಸು ತಿರುಗಿತು ಬಹಳ ಕರಗಿತು 1 ಯೋಗಿವರದ ನಿನ್ನ ಮೂರ್ತಿ ಬೇಗದಿಂದ ನೋಳ್ಪೆನೆಂದು ಯೋಚಿಸಿ ಮುಂದೆ ಸೂಚಿಸಿ ನಾಗೂರ ಪಟ್ಟಣವ ಬಿಟ್ಟು ಸಾಗಿ ಬರುವ ಸಮಯದಲ್ಲಿ ಆಶೆಯಾ ಪಾಶ ಸೂಸಿತು 2 ದೋಷಿಯೆಂದು ಗ್ರಹಿಸದೆ ಸ- ರ್ವಾಸೆ ಪೂರಿಸಖಿಳ ಜಗದೀಶನೆ ವೆಂಕಟೇಶನೆ ಶ್ರೀಶ ನಿನ್ನ ಕಡೆಗೆ ಕರೆಸಿ ನಿತ್ಯ ಸೇವೆ ಕೊಳ್ಳಯ್ಯ ಖಜ್ಜಬಿಲ್ಲಯ್ಯ 3
--------------
ತುಪಾಕಿ ವೆಂಕಟರಮಣಾಚಾರ್ಯ